ಮಹಲಿಂಗಪುರ

ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆಯಿರಲಿ: ಗಡ್ಡದೇವರಮಠ

ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆಯಿರಲಿ:  ಗಡ್ಡದೇವರಮಠ

ಮಹಾಲಿಂಗಪುರ 24: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಸ್ಕಾರ, ಶ್ರದ್ಧೆ, ಸಮಯಪ್ರಜ್ಞೆ ಅಳವಡಿಸಿಕೊಂಡಲ್ಲಿ ಒಳ್ಳೆಯ ಗುರಿ ಮುಟ್ಟಬಹುದು ಎಂದು ಜಮಖಂಡಿಯ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಸಿ.ಎಸ್‌. ಗಡ್ಡದೇವರಮಠ ಹೇಳಿದರು. 

ಸಮೀಪದ ಚಿಮ್ಮಡ ಗ್ರಾಮದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ, " ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ " ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳು ನಿಲಯದ ಮಕ್ಕಳೊಂದಿಗೆ ಬೆರೆಯುವ, ಅವರ ಕುಂದು-ಕೊರತೆ, ಮೂಲಭೂತ ಸೌಲಭ್ಯಗಳ ಕುರಿತು ಶಿಕ್ಷಣದ ಗುಣಮಟ್ಟ ಅರಿಯಲು ಸಹಕಾರಿಯಾಗುತ್ತದೆ ಎಂದರು. 

ಸ್ಥಳೀಯ ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯೇ ಶ್ರೀಮತಿ ಎಂ.ಎಸ್‌. ಜಿಟ್ಟಿ ಮಾತನಾಡಿ ನಿಲಯದ ಪ್ರತಿಯೊಬ್ಬ ವಿದ್ಯಾರ್ಥಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರರಂತೆ ವಿದ್ಯಾವಂತರಾಗಿ ಸಮಾಜದಲ್ಲಿ ಗೌರವಿತ ಜೀವನ ನಡೆಸುವ ಹುದ್ದೆ ಪಡೆಯುವ ಛಲ ಹೊಂದಿರಬೇಕೆಂದರು. 

ಡಾ.ಬಿ.ಆರ್‌. ಅಂಬೇಡ್ಕರ, ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ನಿಲಯದ ಉಸ್ತುವಾರಿ ಟಿ.ಹೆಚ್‌. ಉಪ್ಪಾರ ಪ್ರಾಸ್ತಾವಿಕ ನುಡಿಗಳನ್ನಾಡಿ, ಶಿಕ್ಷಕ ಎನ್‌.ಎನ್ ಬೇವೂರ, ಬಿ.ಡಿ. ನ್ಯಾಮಗೌಡ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ವೈದ್ಯಾಧಿಕಾರಿ ಅಶೋಕ ಪಡಸಾಲಿ, ಎಸ್‌.ಎಸ್‌. ರಾಮದುರ್ಗ, ರವಿ ಮಾಯಣ್ಣವರ ಸೇರಿದಂತೆ ಹಲವರಿದ್ದರು.  

ವಸತಿ ನಿಲಯದ ಸಿಬ್ಬಂದಿ ಅನೀಲ್ ದಬಾನಿ ಸ್ವಾಗತಿಸಿ, ನಿರೂಪಿಸಿ, ಸುನೀಲ ಬಂಗಾರಿ ವಂದಿಸಿದರು. ಗಣ್ಯರೆಲ್ಲರೂ ಮಕ್ಕಳೊಂದಿಗೆ ಭೋಜನ ಸವಿದು ಅವರ ಜೊತೆ ಬೆರೆತು ದಿನ ಕಳೆದು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಸಿ.ಎಸ್‌. ಗಡ್ಡದೇವರಮಠ ವಸತಿ ನಿಲಯದಲ್ಲಿಯೇ ರಾತ್ರಿ ವಾತ್ಸವ್ಯ ಮಾಡಿ ಬೆಳಗ್ಗೆ ವಿದ್ಯಾರ್ಥಿಗಳೊಂದಿಗೆ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಿದರು. 

ಸುದ್ದಿ ಓದಿ