ಹರ್ಷನ ಕೊಲೆ ಮಾಡಿದ ಪ್ರಕರಣ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ
ಸಿಂದಗಿ: ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಶಿವಮೊಗ್ಗದಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹತ್ಯೆ ಖಂಡಿಸಿ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ತಾಲೂಕಾ ಘಟಕಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದು ಪರಿಷತ್ ತಾಲೂಕಾ ಅಧ್ಯಕ್ಷ ಡಾ.ಶರಣಗೌಡ ಬಿರಾದಾರ ಮಾತನಾಡಿ, ದುಷ್ಕರ್ಮಿ ಸಂಘಟನೆಗಳು, ದೇಶದ್ರೋಹಿ ಸಂಘಟನೆಗಳು ಮುಗ್ದ ಹಿಂದೂಗಳ ಯುವಕರ ಮೇಲೆ ಹಲ್ಲೆ ಮಾಡುವ ಜೊತೆಗೆ ಮಾರಣಹೋಮ ಮಾಡುತ್ತಿದ್ದಾರೆ. ಇಂಥ ಸಂಘಟನೆಗಳಾದ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಕೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಭಜರಂಗದಳದ ಅಧ್ಯಕ್ಷ ಯಮನಪ್ಪ ಚೌಧರಿ, ಅಜಾದ ಯುವ ವೇದಿಕೆ ಅಧ್ಯಕ್ಷ ಅಶೋಕ ನೇಗಿನಾಳ, ವಿನೋದ ಬಡಿಗೇರ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಾಖೇಶ ಮಠ, ಪ್ರಶಾಂತ ಬಗಲಿ, ರಮೇಶ ಬ್ಯಾಕೋಡ, ಬಸವರಾಜ ಬಿರಾದಾರ, ಲಕ್ಷ್ಮಣ ಹೂಗಾರ, ಅನೀಲ ಗುಡ್ಯಾಳ, ನೀಲಕಂಠ ರಬಿಶೇಖ, ಅಮೋಗಿ ಹರನಾಳ, ಬಿ.ಎಸ್. ಬಿರಾದಾರ, ವಿಶಾಲ ನಾಯ್ಕೋಡಿ, ಶ್ರೀಶೈಲ ಹಣಮಶೆಟ್ಟಿ, ಸತೀಶ ಕವಲಗಿ, ಸಿದ್ದನಗೌಡ ಅಂಬಳನೂರ, ಸಿದ್ದು ಚಟ್ಟರಕಿ, ದೇವರೆಡ್ಡಿ ಚಿಂಚೋಳಿ ಸೇರಿದಂತೆ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.