ಕಠಿಣ ಪರಿಶ್ರಮ ಮನುಷ್ಯನನ್ನು ಉತ್ತುಂಗಕ್ಕೆ ಏರಿಸುತ್ತದೆ.: ಡಾ. ಬೆಳಗಲಿ
ಪಂಚಮಸಾಲಿ ಸಮಾಜದ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಮಹಾಲಿಂಗಪುರ 26: ಇಂದಿನ ಆಧುನಿಕ ಯುಗದಲ್ಲಿ ತೀವ್ರ ಪೈಪೋಟಿ ಇರುವುದರಿಂದ ವಿದ್ಯಾರ್ಥಿಗಳು ಓದಿನ ಕಡಗೆ ಹೆಚ್ಚಿನ ಗಮನ ಕೊಡಬೇಕು. ಇಂದಿನ ಯುವ ಜನತೆ ಮೊಬೈಲ್ ದಾಸರಾಗುತ್ತಿದ್ದು ಇದರಿಂದ ಓದಿನ ಕಡೆಗೆ ಗಮನ ಕೊಡುತ್ತಿಲ್ಲ. ಮೊಬೈಲ್ ಗಿಳು (ಚಟ ) ಅಂಟಿಸಿಕೊಂಡು ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಇದು ಇಂದಿನ ಯುಗದ ದುರಂತವೇ ಸರಿ. ಮನಸ್ಸು ಗಟ್ಟಿ ಮಾಡಿ ಕಠಿಣ ಪರಿಶ್ರಮ ಪಟ್ಟರೆ ಉನ್ನತ ಸಾಧನೆ ಮಾಡಲು ಸಾಧ್ಯ ಮನಸ್ಸನ್ನು ಮೀರಿದ್ದು ಜಗತ್ತಿನಲ್ಲಿ ಯಾವುದು ಇಲ್ಲ ಎಂದು ನಗರದ ಖ್ಯಾತ ವೈದ್ಯರಾದ ಡಾ ಎ ಆರ್ ಬೆಳಗಲಿ ಹೇಳಿದರು.
ಸ್ಥಳೀಯ ಚನ್ನಗಿರೇಶ್ವರ ದೇವಸ್ಥಾನ ಹತ್ತಿರವಿರುವ ರಾಣಿ ಚೆನ್ನಮ್ಮ ಸಭಾಭವನದಲ್ಲಿ ಸೇರಿದ ಸಮಾಜದ ಎಲ್ಲ ಬಂದುಗಳು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚು ಅಂಕು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಹಾಗೂ ವಿದ್ಯಾರ್ಥಿಗಳನ್ನು ಗುರುತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಾಧಕನಿಗೆ ಸನ್ಮಾನಗಳು ಮತ್ತಷ್ಟು ಸಾಧನೆಗೆ ಪುಷ್ಟಿ ನೀಡುತ್ತವೆ. ಎಂದರು
ನಗರದ ಪಂಚಮಸಾಲಿ ಸಮಾಜದ ವತಿಯಿಂದ ಪಿಯುಸಿ ದ್ವಿತೀಯ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ 55 ವಿದ್ಯಾರ್ಥಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಶೈಲಪ್ಪಣ್ಣ ಉಳ್ಳಾಗಡ್ಡಿ, ಈರ್ಪ ದಿನ್ನಿಮನಿ, ಬಸವರಾಜ್ ಬಿರನಗಡ್ಡಿ, ಆನಂದ್ ಕೋತ, ಹನುಮಂತ ಶಿರೋಳ, ಚೆನ್ನಪ್ಪ ಪಟ್ಟಣಶೆಟ್ಟಿ, ಶ್ರೀಶೈಲಪ್ಪ ರೋಡನವರ, ಕಾಶಿಬಾಯಿ ಸಿದ್ದು ಕೊಣ್ಣೂರ, ಸ್ವಪ್ನ ಅನೆಗೊಳ, ಮಹಿಳಾ ಘಟಕದ ಅಧ್ಯಕ್ಷ ಡಾಕ್ಟರ್ ವಿದ್ಯಾ ದಿನ್ನಿಮನಿ, ಅಕ್ಕ ತಾಯಿ ಕಿಚಿಡಿ, ಸರೋಜಾ ಶಿರೋಳ, ಶಶಿರೇಖಾ ಹುದ್ದಾರ, ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ ಮೇಟಿ ನಿರೂಪಿಸಿದರು. ವಿಜಯಕುಮಾರ ಕುಳಲಿ ಸ್ವಾಗತಿಸಿ ವಂದಿಸಿದರು.