ಬೆಳಗಾವಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಂದ ಹರ್ ಘರ ತಿರಂಗಾ ಜಾಗೃತಿ ಜಾಥಾ
ಬೆಳಗಾವಿ : ಸರಕಾರದ ಆದೇಶದಂತೆ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡುಗುಂಟಿ ಅವರ ನೇತೃತ್ವದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಎಲ್ಲ ಪೌರ ಕಾರ್ಮಿಕರು ಸೋಮವಾರ ಹರ್ ಘರ ತಿರಂಗಾ ಬಗ್ಗೆ ಸೋಮವಾರ ಬೆಳಿಗ್ಗೆ ಜಾಗೃತಿ ಜಾಥಾ ನಡೆಸಿದರು.

ಸೋಮವಾರ ದಿ. 14ರ ಬೆಳಿಗ್ಗೆ ಮೊದಲಿಗೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ದುಡುಗುಂಟಿ ಅವರು ಬೆಳಗ್ಗೆ 5.45ಕ್ಕೆ ವಾಹನಗಳ ಗ್ಯಾರೇಜ್ ಭೇಟಿ ನೀಡಿ ಎಲ್ಲಾ ವಾಹನ ಚಾಲಕರ ಜೊತೆ " ಹರ್ ಘರ ತಿರಂಗಾ" ಸೆಲ್ಫಿ ಪೋಟೊ ಸರ್ಕಾರದ ಆದೇಶದಂತೆ ಲಿಂಕ್ ಗೆ ಕಳುಹಿಸಿ ನಂತರ ಕೋಟೆ ಕೆರೆ ಬೀಟ್ ಆಫೀಸ್ ಪೌರಕಾರ್ಮಿಕರ ಜೊತೆ ರಾಷ್ಟ್ರ ದ್ವಜ ದ ಜೊತೆ ಸೆಲ್ಫಿ ಪೋಟೊ ಮಾಡಿ ಜನರಲ್ಲಿ ಹರ್ ಘರ ತಿರಂಗಾ ಕುರಿತು ಜಾಗೃತಿ ಜಾಥಾ ನಡೆಸಿದರು.

ನಂತರ ಆಯುಕ್ತ ದುಡುಗುಂಟಿ ಅವರು ಮಹಾಂತೇಶ ನಗರದ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ನಂತರ ಓಲ್ಡ್ ಮತ್ತು ಹೊಸ ಗಾಂಧಿ ನಗರದ ವಾರ್ಡ್ ಕಾರ್ಪೋರೇಟರ್ ಅಜೀಂ ಪಟ್ವೇಕರ ಜೊತೆ ಆಲ್ಲಿಯ ಸ್ವಚ್ಛತಾ, ಎಲೆಕ್ಟ್ರಿಕಲ್ ಹಾಗೂ ನಾಲಾ ಪರಿಶೀಲನೆ ನಡೆಸಿ ಸರಿಯಾಗಿ ಸ್ವಚ್ಛತಾ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ದಂಡ ಹಾಕಿ ಅದರ ಜೊತೆಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿಯ ಕೋಟೆ ಕೆರೆಯಲ್ಲಿ "ನಮ್ಮ ದೇಶ ನಮ್ಮ ಮಣ್ಣು" ಎಂಬ ಸರ್ಕಾರದ ಆದೇಶದಂತೆ 75 medicinal plant ನೆಡುವ ಜಾಗ ಪರಿಶೀಲನೆ ನಡೆಸಿದರು.