ಹನುಮಂತಗೌಡ ಬಸವನಗೌಡ್ರ ಅವರಿಗೆ ಪಿಎಚ್‌ಡಿ ಪದವಿ
ಬಳ್ಳಾರಿ 14: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ಹನುಮಂತಗೌಡ ಬಸವನಗೌಡ್ರ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೊಟ್ರೇಶ್.ಎಂ.ಜಿ ಅವರ ಮಾರ್ಗದರ್ಶನದಲ್ಲಿ ‘ಸ್ಪೆಕ್ಟ್ರೋಸ್ಕೋಪಿಕ್ ಇನ್ವೆಸ್ಟಿಗೇಷನ್ ಆಫ್ ಹೈಬ್ರಿಡ್ ನ್ಯಾನೋಸಿಸ್ಟಮ್ಸ್: ಇನ್ ವ್ಯೂ ಆಫ್ ಡೆವಲಪಿಂಗ್ ಕೆಮಿಕಲ್ ಅಂಡ್ ಬಯೋ ಸೆನ್ಸರ್ಸ್’ ಎಂಬ ಪ್ರೌಢ ಪ್ರಬಂಧ ಮಂಡಿಸಿದ್ದಕ್ಕಾಗಿ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.