ಹಂದಿಗುಂದ: ಸಿದ್ಧಾರೂಢ ಮಠದಲ್ಲಿ "ಸಿದ್ಧಾರೂಢ ಕಥಾಮೃತ" ಇಂದು ಮುಕ್ತಾಯ;
ಹಂದಿಗುಂದ: ಸಿದ್ಧಾರೂಢ ಮಠದಲ್ಲಿ "ಸಿದ್ಧಾರೂಢ ಕಥಾಮೃತ" ಇಂದು ಮುಕ್ತಾಯ;
ಪಾಲಬಾವಿ 11: ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದಲ್ಲಿ ಕಳೆದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಆ.13ರಂದು ಶ್ರೀ "ಸಿದ್ಧಾರೂಢ ಕಥಾಮೃತ" ಗ್ರಂಥ ಪಾರಾಯಣವು ಒಂದು ತಿಂಗಳ ವರೆಗೆ ಪ್ರತಿದಿನ ಸಂಜೆ 7:30 ರಿಂದ 8:30ರ ವರೆಗೆ ಶ್ರೀಮತಿ ತೇಜಸ್ವಿನಿ ಮೇಟಿ ಹಾಗೂ ಶ್ರೀಮತಿ ಯಲ್ಲವ್ವ ತೆಳಗಡೆ ಇಬ್ಬರು ಸೇರಿಕೊಂಡು ಗ್ರಂಥ ಪಾರಾಯಣ ಮಾಡುತ್ತ ಬಂದಿದ್ದು.ಇಂದು ಸೆ. 12ರಂದು "ಸಿದ್ಧಾರೂಢ ಕಥಾಮೃತ" ಮಹಾಮಂಗಳ ವಾಗುವುದುಮಹಾಲಿಂಗಪುರದ ಬ್ರಹ್ಮ ವಿದ್ಯಾಶ್ರಮದ ಪೀಠಾಧಿಪತಿ ಸಹಜಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಗುರುಮಠದ ಗುರುಲಿಂಗಯ್ಯ ಸ್ವಾಮೀಜಿ, ಸಿದ್ದೇಶ್ವರ ವಿರಕ್ತಮಠದ ಅರ್ಚಕರು ಗುರುಲಿಂಗಯ್ಯ ಸ್ವಾಮೀಜಿ ಸಾನಿಧ್ಯವಹಿಸುವರು. ಶರಣ ಮಹೇಶ ಇಟಗಣ್ಣವರ ಪ್ರವಚನ ನೀಡುವರು. ಮಹಾಮಂಗಳದ ನಂತರ ದಾಸೋಹದ ಮನೆಯಲ್ಲಿ ಅನ್ನ ಸಂತರೆ್ಣ ನೆರವೇರುವದೆಂದು ಶ್ರೀ ಸಿದ್ಧಾರೂಢ ಮಠ ಅಭಿವೃದ್ಧಿ ಕಮಿಟಿ ಅಧ್ಯಕ್ಷ ಲಕ್ಷ್ಮಣ್ಣ ಚಿನಗುಂಡಿ, ಕಾರ್ಯದರ್ಶಿ ಈರ್ಪ ನಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.