ಹಂಪಿ ಉತ್ಸವ: ವೈವಿಧ್ಯಮಯ ಕಲಾತಂಡಗಳ ಮನಮೋಹಕ ಪ್ರದರ್ಶನ
ಹೊಸಪೇಟೆ 06: ಹಂಪಿ ಉತ್ಸವ ಅಂಗವಾಗಿ ಸಾಸಿವೆ ಗಣಪ ವೇದಿಕೆ ಯಲ್ಲಿ ವಿವಿಧ ರೀತಿಯ ವೈವಿಧ್ಯಮಯ ಕಲಾತಂಡಗಳು ಆಗಮಿಸಿ ಜಾನಪದ ನೃತ್ಯ ಜಾನಪದ ಗೀತೆ ಗಾಯನ ತತ್ವಪದಗಳು. ಗಾಂಧಾರಿ ವಿದ್ಯಾ ಪ್ರದರ್ಶನ ವೈಯಲಿನ್ ಶಹನಾ ವಾದನ ತಬಲಾ ಸೋಲೋ ಗೀತ ಗಾಯನ ಸುಗಮ ಸಂಗೀತ ಬಯಲಾಟ ದೃಶ್ಯಾವಳಿಗಳು ಜನ ಸಮೂಹ ಕಣ್ತುಂಬಿ ಕೊಂಡರು.
ಕಿಕ್ಕಿರಿದ ಜನ ಸಮೂಹ ಈ ಮಣ್ಣಿನ ಸೊಗಡಿನ ಜಾನಪದ ನೃತ್ಯ ನೋಡಿ ಮೂಕ ವಿಸ್ಮಿತರಾದರು.
ವಿಜಯನಗರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ , ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡು ವೇದಿಕೆಯ ನೇತೃತ್ವ ವಹಿಸಿದ ನೋಡಲ್ ಅಧಿಕಾರಿ ಕವಿತಾ, ಉಪ ತಹಸಿಲ್ದಾರರು, ಪಿಡಿಓ ಶಿಲ್ಪಾ, ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಇದ್ದರು.ಹೊಸಪೇಟೆ ಶ್ರೀ ಅಕ್ಷಯ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶ್ರೀ ಅಕ್ಷಯ ಪದವಿ ಮಹಾವಿದ್ಯಾಲಯ ಉಪನ್ಯಾಸಕ ವೆಂಕಟೇಶ್ ಬಡಿಗೇರ್ ಕಾರ್ಯಕ್ರಮ ನಿರೂಪಿಸಿದರು. ನಡೆಸಿಕೊಟ್ಟರು.