ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ಹಾಲುಮತ ಸಮುದಾಯ: ಬಸವರಾಜ ಮೇಟಿ
ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ಹಾಲುಮತ ಸಮುದಾಯ: ಬಸವರಾಜ ಮೇಟಿ
ಮಹಾಲಿಂಗಪುರ 05: ವಿಶ್ವದೇಲ್ಲೆಡೆ ದೇವರು ಇದ್ದಾನೆ ಆದರೆ ಕಾಣುವುದಿಲ್ಲ. ಕಾಣದ ದೇವರನ್ನು ಅವರ ಅವರ ಭಾವನೆಗೆ ತಕ್ಕಂತೆ ಪೂಜಿಸುತ್ತಾರೆ ಆರಾಧಿಸುತ್ತಾರೆ. ಅದರಲ್ಲಿ ಒಳಿತನ್ನು ಕಾಣುತ್ತಾರೆ. ಭಕ್ತಿಗೆ ಹೀಗೆ ಇರಬೇಕು ಎಂಬ ನಿಯಮವಿಲ್ಲ. ಇಡೀ ಜಗತ್ತಿನಲ್ಲಿ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟ ಸಮುದಾಯ ಹಾಲುಮತ ಕುರುಬ ಸಮುದಾಯ ಎಂದು ವಲಯ ಕ ಸಾ ಪ ಅಧ್ಯಕ್ಷರಾದ ಬಸವರಾಜ ಮೇಟಿ ಹೇಳಿದರು.
ಅವರು ಸ್ಥಳೀಯ ಕೋಳಿಗುಡ್ಡ ಓಣಿಯಲ್ಲಿರುವ ಅಪಾರ ಭಕ್ತರ ಆರಾಧ್ಯ ದೈವ ಕರಿಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಾಲುಮತದ ಸಮುದಾಯದವರು ವಿಶ್ವಾಸಿಕ ಮತ್ತು ನಂಬಿಗಸ್ತ ಸಮುದಾಯ, ನಿರ್ಮಲ ಭಕ್ತಿಗೆ ದೇವರು ಕೃಪೆ ತೋರುತ್ತಾನೆ, ಆದರೆ ಹಾಲುಮತ ಸಮುದಾಯವರನ್ನು ನೋಡಿ ನಿಜ ದೇವರನ್ನು ಕಂಡ ಅನುಭವಾಯಿತು. ಎಂದರು.
ಪ್ರವಚನ : ಈ ಸಲ ವಿಶೇಷವಾಗಿ ಆರು ದಿನಗಳ ಕಾಲ ಕರಿಸಿದ್ದೇಶ್ವರ ಜಾತ್ರೆಯ ನಿಮಿತ್ಯವಾಗಿ ಕರಿಸಿದ್ದೇಶ್ವರ ಚರಿತ್ರೆ ಕುರಿತು ಪ್ರವಚನವನ್ನು ಹೇಳಿದ ಮುಖ್ಯ ಪ್ರವಚನಕಾರರಾದ ಜೋಕಾನಟ್ಟಿಯ ಯೋಗಿಸಿದ್ದೇಶ್ವರ ಮಠದ ಪ ಪೂ ಬಿಳಿಯಾನಿಸಿದ್ದ ಮಹಾಸ್ವಾಮಿಗಳು ಮತ್ತು ಶಹಾಪುರದ ಅವದೂತಸಿದ್ದ ಮಹಾಸ್ವಾಮಿಗಳು ಮಾರಾಪುರದ ಶ್ರೀಮಂತ ಮಹಾರಾಜರು, ಕಂಕಣವಾಡಿಯ ಶರಣರಾದ ಮಾರುತಿ ಶರಣರು ಯುವ ಅಧ್ಯಾತ್ಮ ಚಿಂತಕ ಮಹೇಶ ಇಟಕನ್ನವರ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ಪಾಲಿಕೆ ಸೇವೆ : ದೀಪಾವಳಿ ಪಾಡ್ಯ ದಿನ ದೇವರ ಪಾಲಿಕೆಯನ್ನು ಸಾಯಂಕಾಲ 7 ಗಂಟೆಗೆ ಸಕಲ ಮಂಗಲವಾದ್ಯಗಳೊಂದಿಗೆ ದೇವಸ್ಥಾನದಿಂದ ಜಗದ್ಗುರು ಶ್ರೀ ಮಹಾಲಿಂಗೇಶ್ವರರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಡುಚೌಕಿ ದ್ಯಾಮ್ಮವ್ವನ ಗುಡಿಗೆ ಹೋಗಿ ಅಲ್ಲಿ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ, ಮಿರ್ಜಿ ಓಣಿಯ ಜಕ್ಕಣ್ಣವರ ಮನೆ ಹತ್ತಿರ ಇರುವ ಬ್ರಹ್ಮಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಅದೇ ಮಾರ್ಗವಾಗಿ ದೇವಸ್ಥಾನಕ್ಕೆ ಬಂದು ತಲುಪಿ ನಂತರ ಅಲ್ಲಿ ಸೇರಿದ ಎಲ್ಲ ಆಳು ಮಕ್ಕಳನ್ನು ಭಕ್ತರು ತಮ್ಮ ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸುವುದು ಶತಮಾನಗಳಿಂದ ನಡೆದು ಬಂದ ಪದ್ಧತಿ. ಇಂದಿನ ಆಧುನಿಕ ಯುಗದಲ್ಲಿ ಇದು ಯತವತ್ತಾಗಿ ಮುಂದುವರೆದಿರುವುದು ವಿಶೇಷವಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿಯ ಪಾಡ್ಯದಂದು ಜರುಗುವ ಶ್ರೀ ಕರಿಸಿದ್ದೇಶ್ವರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಶ್ರೀ ಕರಿಸಿದ್ದೇಶ್ವರರಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಮಾಡಲಾಗಿತ್ತು. ಹಿಂದಿನ ದಿನ ಅಹೋರಾತ್ರಿ ಡೊಳ್ಳಿನ ಪದಗಳ ಗಾಯನ ಮನಸೂರೆಗೊಂಡಿತು. ಭಕ್ತರು ಅತ್ಯಂತ ಶ್ರದ್ಧಾ ಭಕ್ತಿಯಿಂದ ತಮ್ಮ ಮನದಾಸೆಯನ್ನು ಗುರುವಿಗೆ ಅರಿಕೆ ಮಾಡಿ ತಮ್ಮ ಶಕ್ತ್ಯಾನುಸಾರ ಭಂಡಾರವನ್ನು ಅರ್ಿಸಿದರು. ಭಂಡಾರದಲ್ಲಿ ಮಿಂದೆದ್ದ ಜನ ಜಾತ್ರೆಯ ನಿಮಿತ್ಯ ಡೊಳ್ಳಿನ ವಾಲಗದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು ದಾರಿಯುದ್ದಕ್ಕೂ ಗುಡಿಯ ಮುಂದೆ ಎಲ್ಲಿ ನೋಡಿದರಲ್ಲಿ ಭಕ್ತರು ಬಂಡಾರದಲ್ಲಿ ಮಿಂದೆದ್ದು ಭಕ್ತಿ ಪರವಶರಾದದ್ದು ಕಂಡುಬಂದಿತು.
ಉಡಿ ತುಂಬುವ ಕಾರ್ಯಕ್ರಮ : ನೂರಾರು ಮುತೈದೆಯರು ಆರತಿಯೊಂದಿಗೆ ಬಂದು ಭಂಡಾರದ ಒಡೆಯನಿಗೆ ಆರತಿ ಬೆಳಗಿ ಉಡಿ ತುಂಬಿಕೊಂಡು ದೇವರ ಕ್ರಪಾರ್ಶಿವಾದ ಪಡೆದು ಪುನೀತರಾದರು. ಸೇರಿದ ಅಪಾರ ಭಕ್ತರು ದೇವರ ಆರಾಧನೆ ಮಾಡಿ ದೇವರ ಆಶೀರ್ವಾದ ಪಡೆದರು.
ಪ್ರಸಾದ ವ್ಯವಸ್ಥೆ : ಹಾಲುಮತದ ಕುಲದೈವವಾದ ಕರಿಸಿದ್ದೇಶನಿಗೆ ಅಂಬಲಿ ಎಂದರೆ ಪಂಚಪ್ರಾಣ ಹೀಗಾಗಿ ಅಂಬಲಿ ನೈವೇದ್ಯ ಮಾಡಿ ಬಂದ ಭಕ್ತರಿಗೆ ಹಾಲುಗ್ಗಿ ಅನ್ನ ಸಾಂಬಾರು ಅಂಬಲಿ ಪ್ರಸಾದ ವ್ಯವಸ್ಥೆಯನ್ನು ಕಮಿಟಿ ವತಿಯಿಂದ ಕಲ್ಪಿಸಲಾಗಿತ್ತು.
ಪಟ್ಟಣದ ಎಲ್ಲ ಸಮುದಾಯದಗಳು ಭಕ್ತಿ ಭಾವೈಕ್ಯತೆಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದ ಸವಿದರು. ಟ್ರಸ್ಟ್ ಕಮಿಟಿ ಹಿರಿಯರಾದ ಮಹಾಲಿಂಗಪ್ಪ ಜಕ್ಕಣ್ಣವರ, ಚಂದ್ರ್ಪ ಡೋಣಿ, ಗಂಗಪ್ಪ ಮೇಟಿ, ಲಕ್ಷ್ಮಣ ಕಿಶೋರ,ಶ್ರೀಶೈಲ ಅವಟಿ, ಹಣಮಂತ ಅವಟಿ ಕರೆಪ್ಪಾ ಮೇಟಿ, ಶಿವಪ್ಪ ಹುದ್ದಾರ,ಭರ್ಮಪ್ಪ ಅವಟಿ, ಮಹಾಲಿಂಗ ಅವಟಿ ಮುತ್ತು ದಿವಾನ, ಲಕ್ಷ್ಮಣ ಗುಂಡಿ, ಪರಸಪ್ಪ ಬಂಡಿ, , ರಾಮಣ್ಣ ಬಂಡಿ, ಡಾ ಸಂಗಮೇಶ ಹಿಡಕಲ್, ಕರೆಪ್ಪ ಪೂಜೇರಿ, ಪ್ರಭು ಪೂಜೇರಿ, ಮಾನಿಂಗ ಪೂಜೇರಿ, ಯಲ್ಲಪ್ಪ ಪಟ್ಟಣಕೋಡಿ ಶಿವನಿಂಗ ಸನದಿ, ಶಿವನಿಂಗ್ ಜಕ್ಕಣ್ಣವರ, ಈರ್ಪ ಜಕ್ಕಣ್ಣವರ, ಜಗದೀಶ್ ಜಕ್ಕಣ್ಣವರ, ಮಲ್ಲಿಕಾರ್ಜುನ ಬನಹಟ್ಟಿ, ಮಾರುತಿ ದಳವಾಯಿ, ಮಲ್ಲಪ್ಪ ಸಿಂಗಾಡಿ, ಜೇಟೆಪ್ಪಾ ಜಕ್ಕಣ್ಣವರ, ಆನಂದ ಬೆಳ್ಳಿಕಟ್ಟಿ, ಡಾ ರಾಜೇಂದ್ರ ಪಾಟೀಲ, ಶಿವಾನಂದ ಕನ್ನಾಳ, ಶಂಕರ್ ಹಿಟ್ಟಿನಮಠ, ವೀರೇಶ ಮುಂಡಗನೂರ್, ಚನ್ನಪ್ಪ ಕೋಳಿಗುಡ್ಡ,,ಬಾಬುರಾವ ಕಮತಗಿ,ದಾನೇಶ ಕಿಶೋರಿ, ಹಣಮಂತ ವಗ್ಗರ, ಮುತ್ತು ಸಾಲಿಮಣಿ, ಯಲ್ಲಣ್ಣಗೌಡ ಪಾಟೀಲ ಮಹಾಲಿಂಗ ಹೊಸೂರ,ಹಣಮಂತ ಸಂಶಿ, ನಾಗಪ್ಪ ದೋಣಿ,ಗಂಗಾಧರ ಸಕ್ರಿ, ದಯಾನಂದ ಜಕ್ಕಣ್ಣವರ, ಜೆ ಎ ಜಕ್ಕಣ್ಣವರ,ಭರಮಪ್ಪ ಅವಟಿ (ಬೊಮ್ಮಾಯಿ ) ಸಿದ್ದಪ್ಪ ಕಿಶೋರಿ ಸೇರಿದಂತೆ ಹಲವರು ಇದ್ದರು.ಈ ಸಂಧರ್ಭದಲ್ಲಿ ಹಲವು ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.