ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ; ಅ.11ರಂದು ಕ್ಷೇತ್ರದಲ್ಲಿ ಬಿಜೆಪಿ ಸಂಕಲ್ಪ ಪಾದಯಾತ್ರೆ

ಹಗರಿಬೊಮ್ಮನಹಳ್ಳಿ; ಅ.11ರಂದು ಕ್ಷೇತ್ರದಲ್ಲಿ ಬಿಜೆಪಿ ಸಂಕಲ್ಪ ಪಾದಯಾತ್ರೆ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 06: ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾಧ್ಯಂತ ಬಿಜೆಪಿ ಪಕ್ಷವು 150 ಕಿಮೀ ಪಾದಯಾತ್ರೆ ಮೂಲಕ ಸಂಕಲ್ಪಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ಹಾಗೂ ಬಳ್ಳಾರಿ ವಿಭಾಗದ ಸಹ ಪ್ರಭಾರಿಗಳಾದ ಕೆ.ನೇಮರಾಜನಾಯ್ಕ ಹೇಳಿದರು. 

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಮಂಡಲ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಅ.11 ರಂದು ಪಟ್ಟಣದ ಬಸವೇಶ್ವರ ಪುತ್ಥಳಿ ಬಳಿ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಿ, ಬಸವಣ್ಣನವರ ಮೂತರ್ಿಗೆ ಮಾಲಾರ್ಪಣೆ ಮಾಡುವ ಮೂಲಕ ಬಿಜೆಪಿಯ ಸಂಕಲ್ಪ ಪಾದಯಾತ್ರೆ ಆರಂಭವಾಗಿ ಆನಂದ ದೇನವನಹಳ್ಳಿ, ಹೆಗ್ಡಾಳ್, ಉಪನಾಯಕನಹಳ್ಳಿ, ಮರಬ್ಬಿಹಾಳು, ಮರಬ್ಬಿಹಾಳ್ ತಾಂಡ, ವರದಾಪುರ, ಕೆಂಚಟನಹಳ್ಳಿ, ಹನುಮನಹಳ್ಳಿ ಮೂಲಕ ಮರಿಯಮ್ಮನಹಳ್ಳಿವರೆಗೂ 20 ಕಿ.ಮೀ. ಬಿಜೆಪಿ ಸಂಕಲ್ಪ ಪಾದಯಾತ್ರೆ ಜರುಗುತ್ತದೆ ಇದರಲ್ಲಿ 3 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ.  

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ನರೆಗಲ್ ಕೊಟ್ರೇಶ್, ಕಾರ್ಯದಶರ್ಿ ಜೆ.ಬಿ.ಶರಣಪ್ಪ, ಸದಸ್ಯತಾ ಅಭಿಯಾನದ ಸಂಚಾಲಕ ಮೃತ್ಯುಂಜಯ ಬದಾಮಿ, ರಾಜುಪಾಟೀಲ್, ಕಲ್ಲಹಳ್ಳಿ ನಿಂಗಪ್ಪ, ಸಂಜೀವರೆಡ್ಡಿ, ನಗರಘಟಕ ಅಧ್ಯಕ್ಷ ಸಂದೀಪ್ ಶಿವಮೊಗ್ಗ, ಪುರಸಭೆ ಸದಸ್ಯರಾದ ಚೋಳರಾಜ, ಲಕ್ಷ್ಮಣ ಕಲಾಲ್, ಮುಖಂಡರಾದ ಪಿ.ಸೂರ್ಯಬಾಬು, ಕೆ.ರೋಹಿತ್, ಬಿ.ಎಂ.ಎಸ್. ಪ್ರಕಾಶ್, ಜಾತಯ್ಯ, ರುದ್ರೇಶ್ನಾಯ್ಕ , ಕುರುಬರ ವೆಂಕಟೇಶ್, ಉಮಾಪತಿ, ಪಿ.ಹೆಚ್.ಕೊಟ್ರೇಶ್, ಕನಕಪ್ಪ, ಬಣಕಾರ ಗೋಣೆಪ್ಪ, ಅಕ್ಕಂಡಿ ಕೃಷ್ಣ, ಚಿತ್ವಾಡ್ಗಿ ಪ್ರಕಾಶ್, ಫೋಟೋ ನಾಗರಾಜ, ಶಾಂತಮ್ಮ ಮತ್ತಿತರರು ಉಪಸ್ಥಿತರಿದ್ದರು. 

 

ಸುದ್ದಿ ಓದಿ