ಮಹಲಿಂಗಪುರ

ಹಾಫೀಜ್ ಅಬ್ದುಲವಹಾಬ್ರಿಗೆ ಡಾಕ್ಟರೇಟ್ ಪದವಿ

ಹಾಫೀಜ್ ಅಬ್ದುಲವಹಾಬ್ರಿಗೆ ಡಾಕ್ಟರೇಟ್ ಪದವಿ

ಲೋಕದರ್ಶನ ವರದಿ

ಮಹಾಲಿಂಗಪುರ 29: ಹಾಫೀಜ್ ಡಾ.ಅಬ್ದುಲವಹಾಬ್ ಮುಲ್ಲಾ ಅವರ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಇತ್ತೀಚೆಗೆ ಇಂಡಿಯನ್ ವಚರ್ುವಲ್ ಯೂನಿವಸರ್ಿಟಿಯು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 

ಇವರು ಉಚಿತ ನೇತ್ರ ಚಿಕಿತ್ಸೆ, ಕೋಟರ್್ ಅನುಮತಿ ಪಡೆದ ಷರಿಯತ್ ನ್ಯಾಯಾಲಯ ಮೂಲಕ ಕೌಟುಂಬಿಕ ಕಲಹಗಳ ಪ್ರಕರಣಗಳ ವ್ಯಾಜ್ಯಗಳನ್ನು ಬಗೆಹರಿಸಿರುವುದು, ವಿಧವಾ ಮತ್ತು ಅನಾಥ ಮಕ್ಕಳಿಗೆ ವಿವಿಧ ರೀತಿಯ ಸಹಾಯ ಸಹಕಾರ, ಜಾತ್ಯತೀತವಾಗಿ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಆಥರ್ಿಕ ನೆರವು, ಪ್ರವಾಹ ಹಾಗೂ ಕೋವಿಡ್ ಸಮಯದಲ್ಲಿ ರಕ್ಷಣಾ ಕಾರ್ಯದಲ್ಲಿ ಸಹಕಾರ, ಆಹಾರ, ಬಟ್ಟೆ, ಔಷಧ, ದನಕರುಗಳಿಗೆ ಮೇವು ಇನ್ನು ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಬೆಂಗಳೂರಿನ ಇಂಡಿಯನ್ ವಚರ್ುವಲ್ ಇನ್ವಸರ್ಿಟಿ ಇವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.

ಇದರ ಪ್ರಯುಕ್ತ ಸ್ಥಳೀಯ ಟಿಪ್ಪು ಸುಲ್ತಾನ ಗಲ್ಲಿಯ ಉದರ್ು ಶಾಲೆಯ ಅಧ್ಯಕ್ಷ, ಎಸ್ಡಿಎಂಸಿ ಹಾಗೂ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಸರ್ವ ಸದಸ್ಯರು ಅವರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷ ಸೈಯದ್ ನದಾಫ್, ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಆಲಗೂರ, ಶಿಕ್ಷಕ ಮೂಸಾ ಅಲಾಸ್, ಹಾಜಿ ಶಿರಾಜಸಾಬ್ ಮುಜಾವರ, ಹಾಫೀಸ್ ಮೆಹಬೂಬ್ ನದಾಫ್, ಮೇಹಬೂಬ ಮುಜಾವರ, ಯುನುಸ್ ಬೀಳಗಿ, ಹಾ.ಯುನೂಸ್, ಗೌಸ್ ನದಾಫ್, ಇಸ್ಮೈಲ್ ಮುಲ್ಲಾ, ಶಾಲೆಯ ಮುಖ್ಯ ಗುರುಗಳಾದ ವಾಯ್.ಜಿ. ಮುಜಾವರ್ ಇನ್ನು ಮುಂತಾದವರಿದ್ದರು 

ಸುದ್ದಿ ಓದಿ