ಬಳ್ಳಾರಿ

ಹೈದ್ರಬಾದ್ ಚಲೋ ಎಸ್‌.ಸಿ. ಒಳಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗರ ವಿಶ್ವರೂಪ ಮಹಾಸಭಾ ಕಾರ್ಯಕ್ರಮ

ಹೈದ್ರಬಾದ್ ಚಲೋ ಎಸ್‌.ಸಿ. ಒಳಮೀಸಲಾತಿ ವರ್ಗೀಕರಣಕ್ಕಾಗಿ ಮಾದಿಗರ ವಿಶ್ವರೂಪ ಮಹಾಸಭಾ ಕಾರ್ಯಕ್ರಮ

ಬಳ್ಳಾರಿ04: ಮಾದಿಗ ದಂಡೋರ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿಯ ಕಚೇರಿಯ ಆವರಣದಲ್ಲಿ ಪತ್ರಿಕಾ ಪ್ರಕಟಣೆಗೆ  ತಿಳಿಸಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾದಿಗ ದಂಡೋರ ಸಂಘದ ರಾಜ್ಯ  ನಾಯಕರಾದ ಹುಲುಗಪ್ಪ ಎ ಕೆ ರವರು ಮಾತನಾಡುತ್ತಾ, ಇದೇ ತಿಂಗಳು ದಿನಾಂಕ 11ರಂದು ರಂದು ಎಸ್‌.ಸಿ. ಒಳಮೀಸಲಾತಿ ವರ್ಗೀಕರಣಕ್ಕಾಗಿ ಹಲೋ ಮಾದಿಗ ಚಲೋ ಹೈದ್ರಾಬಾದ್ ಮಾದಿಗರ ವಿಶ್ವರೂಪ ಮಹಾಸಭಾ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

 ಪ್ರಮುಖವಾಗಿ ದೇಶದ ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿಯವರು ಹಾಗೂ ಕೇಂದ್ರ  ಸಚಿವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ಆದ್ದರಿಂದ ಎಸ್ ಸಿ ಮಾದಿಗರ ಒಳ ಮೀಸಲಾತಿ ವರ್ಗಿಕರಣ ಕುರಿತು ಹೋರಾಟ  ಮಾಡುವುದೇ ಮಾದಿಗ ದಂಡೋರ ಸಂಘದ  ಪ್ರಮುಖ ಗುರಿಯಾಗಿದೆ. 

ಇದರಲ್ಲಿ ಜಿಲ್ಲೆಯ ವತಿಯಿಂದ ಹಲವಾರು ಸಾವಿರರು ನಮ್ಮ ಮಾದಿಗ ಸಮುದಾಯದ ವಿವಿಧ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಜನರು ಆಗಮಿಸಲಿದ್ದು, ಪ್ರಯಾಣಿಕರಿಗೆ ಹೋಗಲು ಮತ್ತು ಬರಲು ರೈಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಈ ಕಾರ್ಯಕ್ರಮಕ್ಕೆ ಬರುವಂತಹ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಟಿಕೆಟ್ ಇರುವುದಿಲ್ಲ, ಊಟದ ವ್ಯವಸ್ಥೆ ಸಹ ಇರುತ್ತದೆ. ಹಾಗೂ ಎಸ್ ಸಿ ಮಾದಿಗರ ಒಳ ಮೀಸಲಾತಿ ಇದನ್ನು ಅನುಷ್ಟಾನಕ್ಕೆ ತರುವಂತೆ ರಾಜ್ಯದಲ್ಲಿ ಹಿರಿಯ ದಲಿತ ಮುಖಂಡರಾದ ಮಂದಕೃಷ್ಣ ಮಾದಿಗಣ್ಣಾ ರವರ ಆದೇಶದ ಮೇರೆಗೆ ಎಸ್‌.ಸಿ. ಒಳಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ದಲಿತ ಮುಖಂಡರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ತಿಳಿಸಿದರು. 

 ಬಿ ನರಸಪ್ಪ ,  ಪ್ರಸಾದ್,  ಯು.ವೀರಸ್ವಾಮಿ ಎ.ನಟ್ಟಪ್ಪ ಜಿಲ್ಲಾಧ್ಯಕ್ಷರು, ಹುಸೇನಪ್ಪ ದಲಿತ ಮುಖಂಡರು, ಎರಿಸ್ವಾಮಿ ಸಿರಿವಾರ, ಜಾಲಿಹಾಳ್ ಮಲ್ಲಿಕಾರ್ಜುನ, ಶಿವಪ್ಪ ,ಸೋಮಶೇಖರ, ಗಂಗಾಧರ,  ಎರಗುಡಿ ಸುಂಕಣ್ಣ, ದುರುಗೇಶ, ಗುಡದೂರು ಈರಣ್ಣ, ಧನರಾಜ್ ಹಾಗೂ  ವಿವಿಧ ಸಂಘದ ದಲಿತ ಮುಖಂಡರು ಅದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ