ಮಹಲಿಂಗಪುರ

ಹೆಸ್ಕಾಂ ಕತ್ತಲೆ ತರುವುದಲ್ಲ ನಿಮ್ಮ ಬಾಳಿಗೆ ಬೆಳಕು ನೀಡಲಿದೆ: ರಾಜೇಶ್ ಭಾಗೋಜಿ

ಹೆಸ್ಕಾಂ ಕತ್ತಲೆ ತರುವುದಲ್ಲ ನಿಮ್ಮ ಬಾಳಿಗೆ ಬೆಳಕು ನೀಡಲಿದೆ: ರಾಜೇಶ್ ಭಾಗೋಜಿ
ಮಹಾಲಿಂಗಪುರ ಪಟ್ಟಣದ ಸಿಕ್ಕಲಗೇರಿ ಓಣಿಯಲ್ಲಿ ವಿಧ್ಯುತ್ ವಾಯರ್ ಗಳ ಮಾರ್ಗ ಬದಲಾವಣೆ ಮಾಡುತ್ತಿರುವ ಹೆಸ್ಕಾಂ ಸಿಬ್ಬಂದಿಗಳ

ಪಟ್ಟಣದಲ್ಲಿ ವಿಧ್ಯುತ್ ಅವಘಡಗಳನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು. 

ವರದಿ ಹನಮಂತ ನಾವಿ  

ಮಹಾಲಿಂಗಪುರ 29: ಭವಿಷ್ಯದಲ್ಲಿ ವಿಧ್ಯುತ್ ಅವಘಡದಿಂದ ಸಾರ್ವಜನಿಕರಿಗೆ ಆಗುವ ಪ್ರಾಣ ಹಾನಿ ತಪ್ಪಿಸಲು ತೇರದಾಳ ಹೆಸ್ಕಾಂ ಅಧಿಕಾರಿಗಳು ಅನೇಕ ಬಾರಿ ದಾಸರಮಡ್ಡಿ ಸಾರ್ವಜನಿಕರಲ್ಲಿ ದುರುಸ್ತಿ ಕಾರ್ಯಕ್ಕೆ ಸಹಕರಿಸಲು ಕೋರಿದರೂ ಸಹಕರಿಸದೇ ಕಳೆದ ಮಂಗಳವಾರ ದುರ್ಗಾದೇವಿ ಜಾತ್ರೆ ಸಮಯದಲ್ಲಿ ವಿಧ್ಯುತ್ ಅವಘಡವುಂಟಾಗಿ ಇಬ್ಬರು ಪ್ರಾಣ ಕಳೆದುಕೊಂಡು ಹಲವಾರು ಜನರು ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆ ಸಂಭವಿಸಬೇಕಾದರೆ ಸ್ಥಳೀಯ ಜನರ ಅವೈಜ್ಞಾನಿಕ ಮನೋಭಾವವೇ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಅದೆ ರೀತಿ ಮಹಾಲಿಂಗಪುರ ಪಟ್ಟಣದ ಕೆಲ ವಾರ್ಡುಗಳಲ್ಲಿಯೂ ಇಂತಹ ಸಮಸ್ಯೆಗಳು ವರ್ಷಾನುಗಟ್ಟಲೆ ನಡೆದು ನಂತರ ಅಲ್ಲಿ ವಾಸಿಸುವ ಜನತೆಗೆ ಹೆಸ್ಕಾಂ ನವರು ತಿಳುವಳಿಕೆ ಕೊಟ್ಟ ನಂತರ ದುರುಸ್ತಿ ಕಾರ್ಯಗಳು ಸುಗಮವಾಗಿ ನಡೆದಿವೆ.ಇನ್ನೂ ಕೆಲ ಕಡೆಗಳಲ್ಲಿ ಕಾರ್ಯ ಪ್ರಗತಿಯಲ್ಲಿವೆ. ನಾವು, ನಮ್ಮ ಸಿಬ್ಬಂದಿಗಳಿರುವುದು ನಗರ ವಾಸಿಗಳಿಗೆ ಸುರಕ್ಷಿತ ಬೆಳಕು ನೀಡುವುದೇ ಆಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

ಉದಾಹರಣೆಗೆ ಇಕ್ಕಟ್ಟಾದ ರಸ್ತೆಗಳನ್ನು ಹೊಂದಿರುವ ಪಟ್ಟಣದ ಸಿಕ್ಕಲಗೇರಿ ಓಣಿಯಲ್ಲಿಯೂ ವಿಧ್ಯುತ್ ವಾಯರ್ ಗಳು ಕೆಲ ವರ್ಷಗಳಿಂದ ಮನೆಗಳ ಮೇಲೆ ಹಾಯ್ದು ಹೋಗಿ ಯಾವ ಸಮಯದಲ್ಲಿ ನಿವಾಸಿಗಳ ಜೀವಗಳಿಗೆ ಕುತ್ತು ತರುತ್ತವೆ ಎಂಬ ಭಯ ಕೂಡ ಹೆಸ್ಕಾಂ ಅಧಿಕಾರಿಗಳನ್ನು ಕಾಡುತ್ತಿತ್ತು ಮತ್ತು ಇಲ್ಲಿ ವಾಸಿಸುವ ಜನತೆಯೂ ಸಹ ಕಡು ಬಡ ಕೂಲಿ ಕಾರ್ಮಿಕರು, ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರು ಆಗಿದ್ದಾರೆ.ಇವರಿಗೆ ಇದರ ಭಯವೇ ಇಲ್ಲದಂತಾಗಿ ಅಸಡ್ಡೆ ಭಾವನೆಯನ್ನು ತಾಳಿದ್ದರೋ ಏನೋ. ಇಷ್ಟು ಮಾತ್ರ ಸತ್ಯ ಮುಂದೊಂದು ದಿನ ವಿಧ್ಯುತ್ ವಾಯರ್ ಗಳಿಂದ ಸ್ಥಳೀಯರು ಹೆಚ್ಚಿನ ತೊಂದರೆ ಅನುಭವಿಸಬೇಕಾಗಿತ್ತು. ಅದು ಸರಿಯಾದ ವೇಳೆಯಲ್ಲಿ ದುರುಸ್ಥಿಗೊಂಡು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ  

ಇವರ ಅಮೂಲ್ಯ ಜೀವಗಳ ಕಾಪಾಡುವ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿಗಳು ಸರಿಯಾದ ಸುರಕ್ಷಿತ ಮಾರ್ಗದಲ್ಲಿ ವಿಧ್ಯುತ್ ಕಂಬಗಳನ್ನು ಅಳವಡಿಸಲು ಮೇಲಾಧಿಕಾರಿಗಳಿಂದ ಪರವಾಣಿಗೆ ಸಹ ಪಡೆದುಕ್ಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೂ ಕೆಲ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ವರ್ಷದಲ್ಲಿ ಮೂರು ಸಾರಿ ಕೆಲಸ ಮಾಡಲು ಬಂದಂತಹ ಹೆಸ್ಕಾಂ ಜನರಿಗೆ ಅಡ್ಡಿಪಡಿಸಿದ್ದರು. ಬುಧವಾರ ಮುಂಜಾನೆಯೂ ಸಹ ಹಿಂದೆ ನಡೆದ ದಾಟಿಯೇ ಮುಂದುವರಿದಿದ್ದು ನಂತರ ಸ್ಥಳೀಯ ಕೆಲವು ಪ್ರಜ್ಞಾವಂತರ ಮಧ್ಯೆಸ್ಥಿಕೆಯಿಂದ ಕೆಲಸ ಸುಗಮವಾಗಿ ಸಾಗಲು ಕಾರಣವಾಗಿದೆ. 

ಆಶ್ಚರ್ಯ: ವಿಧ್ಯುತ್ ವಾಯರ್ ಗಳು ಯಮ ರೂಪದಲ್ಲಿ ಕಣ್ಮುಂದೆ ನೇತಾಡುತ್ತಿದ್ದರೂ ದುರುಸ್ಥಿಗೆ ಬರುವ ಹೆಸ್ಕಾಂ ನವರಿಗೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸಮಂಜಸ ? ಮತ್ತು ಆಶ್ಚರ್ಯ ಎನ್ನುತ್ತಿದ್ದಾರೆ ಸಾರ್ವಜನಿಕರು. ವಿಧ್ಯುತ್ ಅಚಾತುರ್ಯದಿಂದ ಆಗುವ ಹಾನಿ ಮತ್ತು ತಮ್ಮ ಅಮೂಲ್ಯ ಜೀವಗಳ ಸಂರಕ್ಷಣೆ ಹೆಸ್ಕಾಂ ಹೊಣೆಗಾರಿಕೆಯಾಗಿದೆ. ಸಿಬ್ಬಂದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲದಲ್ಲಿ ದುರುಸ್ಥಿ ಕಾರ್ಯ ಪೂರ್ಣಗೊಳಿಸಿಕ್ಕೊಂಡು ಹೆಚ್ಚಿನ ಅಪಘಾತಗಳನ್ನು ತಡೆಯಲು ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.  

ಹೆಸ್ಕಾಂ ಇರುವುದು ನಿಮ್ಮ ಬಾಳಿಗೆ ಬೆಳಕು ನೀಡಲು, ಕತ್ತಲೆ ತರುವುದಲ್ಲ. ನಾವು ಪಟ್ಟಣದಲ್ಲಿ ಯಾವ ಮೂಲೆಯಲ್ಲಿ ವಿಧ್ಯುತ್ ನಿಂದ ತೊಂದರೆ ಸಂಭವಿಸಲಿದೆ ಎಂದು ವೈಜ್ಞಾನಿಕ ಚಿಂತನೆ ಮೂಲಕ ದುರುಸ್ಥಿ ಕಾರ್ಯಗಳನ್ನು ಕೈಗೊಂಡಿರುತ್ತೇವೆ.ಯಾರಿಗಾದರೂ ತೊಂದರೆ ಕೊಡುವುದಲ್ಲ.ಆದ್ದರಿಂದ ಸಾರ್ವಜನಿಕರು ನಮ್ಮ ಇಲಾಖೆಯ ಸಿಬ್ಬಂದಿಗಳು ದುರುಸ್ಥಿ ಕಾರ್ಯಕ್ಕೆ ಬಂದಾಗ ಅವರೊಂದಿಗೆ ಅನುಚಿತವಾಗಿ ವರ್ತಿಸದೆ ಸಕಾರಾತ್ಮಕವಾಗಿ ವರ್ತಿಸಿ ಅಮೂಲ್ಯ ಜೀವಗಳ ರಕ್ಷಣೆಗೆ ಕಾರಣರಾಗಿ.  

ರಾಜೇಶ್ ಭಾಗೋಜಿ.

ಪಟ್ಟಣದ ವಿಧ್ಯುತ್ ಕಾರ್ಯ ನಿರ್ವಹಣಾಧಿಕಾರಿ ಮಹಾಲಿಂಗಪುರ. 


ಸುದ್ದಿ ಓದಿ