ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ, ಸ್ನೇಹ ಸಂಭ್ರಮ
ಮಹಾಲಿಂಗಪುರ 17 : ಬಸವಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಎಸ್ಎಸ್ಎಲ್ಸಿ 1989 ನೇ ಸಾಲಿನ ವಿದ್ಯಾರ್ಥಿಗಳ ಬಳಗದಿಂದ ಗುರುವಂದನ ಹಾಗೂ ಸ್ನೇಹ ಸಂಭ್ರಮ ಅತ್ಯಂತ ಯಶಸ್ವಿಯಾಗಿ ಮಹಾಲಿಂಗಪುರದ ನೀಲಕಂಠೇಶ್ವರ ಸಭಾಭವನದಲ್ಲಿ ಜರುಗಿತು.
ಶಾಲೆಯಲ್ಲಿ ಕಲಿತು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 50 ವಿದ್ಯಾರ್ಥಿಗಳು ಹಾಗೂ 50 ಮಾಜಿ ವಿದ್ಯಾರ್ಥಿನಿಯರು ಪರಿಶ್ರಮದಿಂದ ಸಂಘಟಿಸಿದ ಸ್ನೇಹಕೂಟವು ಗುರುವಂದದ ವೃಂದದ ಹೊಗಳಿಕೆಗೆ ಪಾತ್ರವಾಯಿತು. ಈ ಸ್ನೇಹ ಸಂಭ್ರಮ ಕಾರ್ಯಕ್ರಮಕ್ಕೆ ಮೂರು ತಲೆಮಾರಿನ ಶಿಕ್ಷಕರಾದ ಅಣ್ಣಾಜಿ ಪಡ್ತಾರೆ ಅವರು ಅಧ್ಯಕ್ಷತೆ ವಹಿಸಿದ್ದರು.
ಬಸವಾನಂದ ಶಾಲೆಯ ಮುಖ್ಯ ಗುರುಗಳಾದ ಸುರೇಶ್ ಗಿಂಡೆ, ಆನಂದ ಕೋಪರೆಡಿ, ರೇಖಾ ಚಾವ್ಲಾ, ಮಹಾದೇವಿ ಗೋಕಾಂವಿ, ಶೋಭಾ ಪಾಶ್ಚಾಪುರ, ಲಕ್ಷ್ಮಿ ಕೋರಿ, ದೇಶಪಾಂಡೆ, ಸುಶೀಲಾ ಧರ್ಮಟ್ಟಿ, ಇಂದೂಮತಿ ಪಡುತ್ತಾರೆ ಮೊದಲಾದವರು ಆಗಮಿಸಿ ತಮ್ಮ ಸೇವಾ ಕಾರ್ಯದ ಹಾಗೂ ಬಸವಾನಂದ ಶಾಲೆಯ ವಿದ್ಯಾರ್ಥಿಗಳ ಸವಿ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ವಿದ್ಯಾರ್ಥಿಗಳು ತಾವು ಇಷ್ಟು ಎತ್ತರಕ್ಕೆ ಬೆಳೆಯಲು ತಮ್ಮ ಗುರುಗಳ ಪಾತ್ರ ಅನನ್ಯ ಮತ್ತು ಅಮೋಘವಾಗಿದೆ ಎಂದು ಹಿಂದಿನ ನೆನಪನ್ನು ಅರುಹಿದರು.
ವಿದ್ಯಾರ್ಥಿಗಳಾದ ಮಹಾಂತೇಶ ಎರ್ನಾಳ, ಮಜೀದ್ ಬಿಳಗಿ, ಮಹಾಂತೇಶ್ ಚಿಂಚಲಿ, ಶಂಕರ್ ಪಾಟೀಲ, ಪ್ರಕಾಶ್ ಓಸ್ವಾಲ, ರಮೇಶ್ ಪ್ಯಾಟಿಶೆಟ್ಟರ್, ಈರಣ್ಣ ಸಂಕ್ರಾಂತಿ, ಮಹಾಂತೇಶ್ ಕಟ್ಟಿ, ದೇವೇಂದ್ರ ತಾಳಿಕೋಟಿ, ನೀಲೇಶಿ ಲಿಗಾಡಿ, ಭಾರತಿ ಗುಂಜಿಗಾವಿ, ಸುಜಾತ ಮುರುಗೋಡ, ರಶ್ಮಿಕ ಮುಂತಾದ ನೂರಾರು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.