ಮಹಲಿಂಗಪುರ

ಸಮೀರವಾಡಿಯಲ್ಲಿ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಜೊತೆ ಗುರುವಂದನೆ.

ಸಮೀರವಾಡಿಯಲ್ಲಿ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ ಜೊತೆ ಗುರುವಂದನೆ.
ಮಹಾಲಿಂಗಪುರ : ಸಮೀರವಾಡಿ ಸೋಮಯ್ಯ ಶಿಶು ನಿಕೇತನ ಪ್ರಾಥಮಿಕ ಹಾಗೂ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ 1994 ರಿಂದ 2004 ರ ವ

ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ತಂದೆ-ತಾಯಿಗಳಿಗೂ ನೀಡಿ, ಬದುಕಿನುದ್ದಕ್ಕೂ ಅವರೊಂದಿಗೆ ಒಳ್ಳೆಯ ಬದಕು ಸಾಗಿಸಿ. 

ಮಹಾಲಿಂಗಪುರ 05: ವಿದ್ಯಾರ್ಥಿಗಳು ಗುರುಗಳಿಗೆ ನೀಡುವಷ್ಟು ಗೌರವವನ್ನು ತಮ್ಮ ತಂದೆ-ತಾಯಿಗಳಿಗೂ ಸಹ ನೀಡಿ ಬದುಕಿನುದ್ದಕ್ಕೂ ಅವರೊಂದಿಗೆ ಒಳ್ಳೆಯ ಬದುಕು ಬೇಕಾಗಿರುವುದು ವಿದ್ಯಾರ್ಥಿಗಳ ಮಹತ್ವದ ಜವಾಬ್ದಾರಿ ಎಂದು ಎಸ್‌.ಎಚ್ ಕಟಗಿ ಹೇಳಿದರು.  

ಸಮೀಪದ ಸಮೀರವಾಡಿ ಸೋಮಯ್ಯ ಶಿಶು ನಿಕೇತನ ಪ್ರಾಥಮಿಕ ಹಾಗೂ ವಿನಯ ಮಂದಿರ ಪ್ರೌಢ ಶಾಲೆಯಲ್ಲಿ ಕಲಿತ 1994-2004ರ ಅವಧಿಯ  ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಈಗ ಉನ್ನತ ವ್ಯಾಸಂಗದ ಫಲವಾಗಿ ಒಳ್ಳೆಯ ಉದ್ಯೋಗ ಹೊಂದಿರುವ ನೀವು ಪಾಲಕರ ಆಸೆಗಳನ್ನು ಇಡೆರಿಸಿ. ಅವರು ನಿಮ್ಮ ವಿದ್ಯಾಭ್ಯಾಸಕ್ಕೆ ತಮ್ಮ ಜೀವನವನ್ನೆ ತ್ಯಾಗ ಮಾಡಿದ್ದಾರೆ.ಇದನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ತಾವು ಮಾದರಿ ವ್ಯೆಕ್ತಿಗಳಾಗಿ ಬದುಕಿ ಹುಟ್ಟಿದ ಊರಿಗೆ ಕೀರ್ತಿ ತರಬೇಕೆಂದರು.  

ನಂತರ ಮಾತನಾಡಿದ ಶಿಕ್ಷಕರಾದ ಆರ್‌.ಎಸ್ ಕಲ್ಯಾಣಿ, ವ್ಹಿ.ಎಚ್‌. ಬಜಂತ್ರಿ ಶಿಕ್ಷಣವನ್ನು ಸರಿಯಾಗಿ ಬಳಸಿಕೊಂಡಾಗ ಜೀವನ ಸುಗಮವಾಗಿ ಗುರು-ಶಿಷ್ಯರ ಅನುಬಂಧಕ್ಕೆ ಶ್ರೇಷ್ಠತೆ ಬರುತ್ತದೆ. ನಿಮ್ಮೇಲ್ಲರ ಒಳ್ಳೆಯ ಬದುಕು ತಾವು ಮಾಡಿದ ಸನ್ಮಾನಕ್ಕೆ ಗೌರವ ಎಂದರು.  

ಇದಕ್ಕೂ ಮುನ್ನ ಎಲ್ಲ ಗುರುಗಳಿಗೆ ಪುಷ್ಪವೃಷ್ಠಿ ಮಾಡುವುದರ ಮೂಲಕ ಶಿಷ್ಯರು ಗುರುಗಳನ್ನು ವೇದಿಕೆಗೆ ಕರೆತಂದರು. ಗುರುಗಳಿಂದ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. 

ಶಿಕ್ಷಕ ವ್ಹಿ.ಕೆ ಹೊಸಮನಿ, ಎಸ.ಎಸ್ ನಡುವಿನಮನಿ, ಬಿ.ಎಸ್ ಬಾಗೆವಾಡಿ, ಅರ್‌.ಎಸ್ ಕಲ್ಯಾಣಿ, ಬಿ.ಬಿ ಮಡಿವಾಳ, ಎಂ.ಪಿ ಚನಪನ್ನವರ, ವ್ಹಿ.ಆರ್‌.ಪೂಜಾರ, ಬಿ.ಬಿ ಕೌಜಲಗಿ, ಶಿವಕ್ಕಗೋಳ, ಜಿ.ಆರ್ ಮಾದರ, ಎಸ್‌.ವಾಯ್‌. ಕೋಳಿ, ಜಾಲಿಹಾಳ, ಎಸ್‌.ವಾಯ ನವಲೆ, ಎಂ.ಬಿ ಕುಳ್ಳೋಳ್ಳಿ, ಆಯ್‌.ಜಿ ಕಿರಗಿ, ಎ.ಎಸ್ ಬಿಳ್ಳೂರ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಸುದ್ದಿ ಓದಿ