ಗುರುಸಿದ್ಧ ಲಿಂಗಮಹಾಂತರ ಪುಣ್ಯ ಸಂಸ್ಮರಣೋತ್ಸವ
ಬಳ್ಳಾರಿ 14: ತಾಲೂಕಿನ ಎಮ್ಮಿಗನೂರಿನ ಶ್ರೀಗುರು ಮಹಾಂತರ ಮಠದಲ್ಲಿ ಜು.18ರಿಂದ ಜು.23ರ ತನಕ, ಗುರುಸಿದ್ಧಲಿಂಗಮಹಾಂತರ 23ನೇ ಪುಣ್ಯ ಸ್ಮಂಸ್ಮರಣೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಕಾರ್ಯಕ್ರಮಗಳು ಜರುಗಲಿವೆ. ಜು.18ರಂದು ಬೆಳಿಗ್ಗೆ 8ಕ್ಕೆ ಧರ್ಮಧ್ವಜಾರೋಹಣವನ್ನು ತೆಕ್ಕಲಕೋಟೆ ಕಂಬಾಳಿಮಠದ ವೀರಭದ್ರ ಶಿವಾಚಾರ್ಯರು ನೆರವೇರಿಸಲಿದ್ದು, ಸಂಜೆ 6.45ಕ್ಕೆ ಶರಣರ ಚರಿತಾಮೃತ ಪುರಾಣ ಆರಂಭಕ್ಕೆ ಉರುವಕೊಂಡದ ಡಾ.ಕರಿಬಸವರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದು, ಬುಕ್ಕಸಾಗರದ ಶ್ರೀವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದು ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜು.20ರಂದು ಸಂಜೆ 6ಗಂಟೆಗೆ ಪ್ರತಿಭಾಪುರಸ್ಕಾರ, ಕೃಷಿದೇವೋಭವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಗಿನದೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ವಹಿಸಲಿದ್ದು, ಹರಪನಹಳ್ಳಿಯ ವರಸದ್ಯೋಜಾತ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ.
ಜು.21ರಂದು ಬೆಳಿಗ್ಗೆ 9ಕ್ಕೆ ಅಯ್ಯಾಚಾರ ಶಿವದೀಕ್ಷೆ ಜರುಗಲಿದ್ದು, ಚಳಗೇರಿಯ ಶ್ರೀವೀರಸಂಘಶಿವಾಚಾರ್ಯರು, ಸಿಂಧನೂರಿನ ಶ್ರೀಸೋಮನಾಥ ಶಿವಾಚಾರ್ಯರು, ಹಂಪಸಾಗರದ ಶ್ರೀಅಭಿನವ ಶಿವರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ. ಸಂಜೆ 6.30ಕ್ಕೆ ಗುರುಪೂರ್ಣಿಮೆ, ಗುರುವಂದನ ಹಾಗೂ ಮಠದಿಂದ ಕಲಬುರಗಿಯ ಮಾದನಹಿಪ್ಪರಗಿಯ ಶಾಂತವೀರ ಶಿವಾಚಾರ್ಯರಿಗೆ, ಸದ್ಭಕ್ತರಿಂದ ಶ್ರೀವಾಮದೇವ ಮಹಾಂತ ಶಿವಾಚಾರ್ಯರ ತುಲಾಭಾರ ನಡೆಯಲಿದೆ ಶಿವಗಂಗೆಯ ಡಾ.ಮಲಯ ಮಹಾಂತ ಶಿವಾಚಾರ್ಯರು, ಚೌಡಯ್ಯದಾನಾಪುರದ ಶ್ರೀಚಿತ್ರಶೇಖರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ.
ಸಂಜೆ 7ಕ್ಕೆ ನಾದ-ವೇದ-ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬಿಲ್ ಕೆರೂರಿನ ಬಿಲ್ವಾಶ್ರಮದ ಶ್ರೀಸಿದ್ಧಲಿಂಗ ಶಿವಾಚಾರ್ಯರು ವಹಿಸಲಿದ್ದು, ಬೆಂಗಳೂರಿನ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ.ಜು.23ರಂದು ಬೆಳಗ್ಗೆ 5.30ಕ್ಕೆ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚಾನೆ, ಬೆಳಿಗ್ಗೆ 10ಗಂಟೆಗೆ ಪುರಾಣ ಮಹಾಮಂಗಲ ಜರುಗಲಿದೆ ಎಂದು ವಾಮದೇವ ವಾಮದೇವ ಶಿವಾಚಾರ್ಯರು ತಿಳಿಸಿದ್ದಾರೆ.