ಶಿರಡಿ ಸಾಯಿಮಂದಿರದಲ್ಲಿ ಗುರುಪೂರ್ಣಿ ಮೆ ಉತ್ಸವ
ಮಹಾಲಿಂಗಪುರ: ಗುರುಪೂರ್ಣಿಮೆಯ ನಿಮಿತ್ಯವಾಗಿ ಪಟ್ಟಣದ ಲಕ್ಷ್ಮೀನಗರ(ಕೆಂಗೇರಿಮಡ್ಡಿ)ಯ ಸಾಯಿ ಮಂದಿರದಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಗುರುಪೂರ್ಣಿಮೆ ಆಚರಿಸಲಾಯಿತು.
ಗುರುಪೂರ್ಣಿಮೆ ನಿಮಿತ್ಯ ಮುಂಜಾನೆ ಅಭಿಷೇಕ, ಮಹಾಪೂಜೆ ನೇರವೇರಿಸಲಾಯಿತು. ಮುಂಜಾನೆ 10 ಗಂಟೆಗೆ ಮಹಿಳೆಯರ ಆರತಿ ಮತ್ತು ಡೊಳ್ಳು ಬಾರಿಸುತ್ತಾ ಲಕ್ಷ್ಮೀನರದ ವಿವಿಧ ರಸ್ತೆಗಳಲ್ಲಿ ಸಾಯಿಬಾಬಾರ ಪಲ್ಲಕ್ಕಿ ಉತ್ಸವ ಜರುಗಿತು.
ಮಧ್ಯಾಹ್ನ 12ಕ್ಕೆ ಮಹಾಪೂಜೆ ಮತ್ತು ಮಂಗಳಾರತಿ ಮಾಡಲಾಯಿತು. ನಂತರ ಬಂದಂತಹ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಹಾಲಿಂಗಪುರ, ರಬಕವಿ-ಬನಹಟ್ಟಿ, ಸಮೀರವಾಡಿ, ಚಿಮ್ಮಡ, ಬೆಳಗಲಿ ಸೇರಿದಂತೆ ಸುತ್ತಮುತ್ತಲಿನ ಊರುಗಳ ಭಕ್ತರು ಆಗಮಿಸಿ ಸಾಯಿಬಾಬಾರ ದರ್ಶನ ಪಡೆದರು.
ಸಾಯಿ ಮಂದಿರದ ಅರ್ಚಕರಾದ ಮಹಾಲಿಂಗ ಮರೆಗೊಂಡ, ಸಿಂಧೂರ ಮರೆಗೊಂಡ, ಚಂದ್ರಕಾಂತ ಬೀಳಗಿ, ಮಹಾದೇವ ಪುಕಾಳೆ, ಶಂಬುಲಿಂಗ ಬಡಿಗೇರ, ವಿಠ್ಠಲ ಕುಳಲಿ, ಸಿದ್ದಣ್ಣ ರಾಮೋಜಿ, ವಿಠ್ಠಲ ಮರೆಗೊಂಡ, ರಾಜು ಕುಕ್ಕುಗೋಳ, ರಮೇಶ ಮರೆಗುದ್ದಿ, ರಾಜು ಮೂಲಿಮನಿ, ಮಹಾಂತೇಶ ಶಿವಣಗಿ, ಗಣೇಶ ಕುರಬೇಟ, ಸಂತೋಷ ದೇವರಮನಿ, ಸೇರಿದಂತೆ ಹಲವರು ಇದ್ದರು.
ವಿವಿಧ ದೇವಸ್ಥಾನಗಳಲ್ಲಿ ಪೂಜೆ : ಗುರುಪೂರ್ಣಿಮೆಯ ನಿಮಿತ್ಯ ಪುರದ ಆರಾಧ್ಯದೈವ ಮಹಾಲಿಂಗೇಶ್ವರ ದೇವಸ್ಥಾನ, ಸಿದ್ದಾರೂಢ ಆಶ್ರಮ, ರಾಘವೇಂದ್ರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು. ಭಕ್ತರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಗುರುಪೂರ್ಣಿಮೆಯ ನಿಮಿತ್ಯ ಹಲವು ಭಕ್ತರು ಮಹಾಲಿಂಗೇಶ್ವರ ಪೀಠಾಧಿಪತಿ ಮಹಾಲಿಂಗೇಶ್ವರ ಶ್ರೀಗಳನ್ನು ಸನ್ಮಾನಿಸಿ-ಗೌರವಿಸಿದರು.