ಗೋಕಾಕ್

ಶಿಂದಿಕುರಬೇಟ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ

ಶಿಂದಿಕುರಬೇಟ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ

ಲೋಕದರ್ಶನ ವರದಿ 

  ಗೋಕಾಕ  27: ಪಾಲಕರು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಎಂದು ಶಿಕ್ಷಕ ಮಹಾಂತೇಶ ಬೆಳಗಲಿ ಹೇಳಿದರು. ಅವರು ತಾಲೂಕಿನ ಶಿಂದಿಕುರಬೇಟ ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ ಸಮತಾ ಶಿಕ್ಷಣ ಸಮಿತಿಯ ಮಾಧ್ಯಮಿಕ ಶಾಲೆಯ ಎಸ್ ಎಸ್ ಎಲ್ ಸಿ ಸನ್ 2006/2007 ಸಾಲಿನ ವಿದ್ಯಾರ್ಥಿಗಳ ಗುರು ವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಎಂದೂ ಮರೆಯಲಾಗದು ಎಂದು ಹೇಳಿದರಲ್ಲದೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅತೀ ಅವಶ್ಯಕವಾಗಿದೆ. ಎಂದು ಹೇಳಿದರು.

ಕಾರ್ಯಕ್ರಮವನ್ನು ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಎಚ್‌. ಗೋಸಬಾಳ ಅವರು ಉದ್ಘಾಟಿಸಿ ಮಾತನಾಡಿದ ಕಳೆದ ಹಲವಾರು ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಶಿಕ್ಷಣ ಕಲಿತು, ಇಂದು ವಿದ್ಯೆ ಹಾಗೂ ಜ್ಞಾನ ನೀಡಿದ ಗುರುಗಳನ್ನು ಒಂದೇ ವೇದಿಕೆಯಲ್ಲಿ ಅವರನ್ನು ಅಭಿಮಾನ ಹಾಗೂ ಗೌರವದಿಂದ ಸನ್ಮಾನಿಸಿದ ಕ್ಷಣ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ಸಂಗತಿಯಾಗಿದೆ.

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಗೆ ತಂದಿದ್ದು ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಕೆ.ವಿ.ಕಡ್ಡಿ, ಎಸ್‌.ಎನ್‌.ವಡರಟ್ಟಿ, ಆರಿ​‍್ಬ.ಕರೆಪ್ಪಗೋಳ, ಹಿರೇಮಠ, ಕೃಷ್ಣ ತಡವಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿಕೊಂಡರು. ವಿದ್ಯೆ ಕಲಿಸಿದ ಮಾಧ್ಯಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ಸ ಮಾಹಂತೇಶ್ವರಿ ಹಿರೇಮಠ ಪ್ರಾರ್ಥಿಸಿದರು. ಜ್ಯೋತಿ ನಿಲಗಾರ ಸ್ವಾಗತಿಸಿದರು.ಪ್ರಿಯಾ ಕಬಾಡಗಿ ಮತ್ತು ಶೋಭಾ ಕೊತ್ತಲ ನಿರೂಪಿಸಿದರು. ಆರತಿ ಹೊಸಪೇಟೆ ವಂದಿಸಿದರು. 


ಸುದ್ದಿ ಓದಿ