ಕಂಪ್ಲಿ

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಲೋಕದರ್ಶನ ವರದಿ 

ಕಂಪ್ಲಿ 19: ಪಟ್ಟಣದ ಹಳೆಯ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕಯಲ್ಲಿನ 2002- 2003 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಭಾನುವಾರ ತಾಲೂಕಿನ ರಾಮಸಾಗರ ಸಮೀಪದ ಪಂಪ ವಿದ್ಯಾಪೀಠ ಬಳಿಯ ತುಂಗಭದ್ರಾ ರಿವರ್ ವ್ಯೂ ರೆಸಾರ್ಟ್‌ನಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರರಾಮಕೃಷ್ಣ ಹಿರಿಯ ಪ್ರಾಥಮಿಕಯ  ನೆಚ್ಚಿನ ಗುರುಗಳಿಗೆ ಅದ್ದೂರಿ ಸ್ವಾಗತ ಕೋರಿದರು. ವಿದ್ಯಾರ್ಥಿಗಳು ಶಿಕ್ಷಕರು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಮಾರಂಭದ ಉದ್ದಕ್ಕೂ ಹಲವು ನೆನಪುಗಳನ್ನು ಮೆಲುಕು ಹಾಕಲಾಯಿತು. ಹಳೇಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೆ ಸನ್ಮಾನ ಮಾಡುವ ಮೂಲಕ ಗುರುಭಕ್ತಿ ಮೆರೆದರು.

ತಮಗೆ ಅಕ್ಷರ ಕಲಿಸಿದ  ಶಿಕ್ಷಕರನ್ನ ಹಲವು ವರ್ಷಗಳ ನಂತರ ಕಂಡ ವಿದ್ಯಾರ್ಥಿಗಳು ಸಂತಸ ಪಟ್ಟರು. ತಮ್ಮನ್ನು  ಇನ್ನೂ  ನೆನಪಿಟ್ಟು ಸನ್ಮಾನಿಸುತ್ತಿರುವ ಮಕ್ಕಳ ಪ್ರೀತಿಯನ್ನು ಕಂಡ ಶಿಕ್ಷಕರ ಕಣ್ಣಂಚಿನಲಿ ಆನಂದಭಾಷ್ಪ ಸುರಿಸಿದರು. ದೈಹಿಕ ಶಿಕ್ಷಕ ರಮೇಶ ಮಾತನಾಡಿ, ಹಳೇ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಗುರುವಂದನೆ ಕಾರ್ಯಕ್ರಮ ಕೈಗೊಂಡಿದ್ದು ನಿಜಕ್ಕೂ ಸಂತಸ ತಂದಿದೆ. ಎಂದರು.ಮುಖ್ಯಗುರು ವಿ.ರಾಮಚಂದ್ರರಾವ್ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಿ. ರಾಮಚಂದ್ರರಾವ್, ಕೆ. ರಮೇಶ, ಪದ್ಮ, ಜಯಲಕ್ಷ್ಮಿ,  ಶಾಂತಾ  ಇವರನ್ನು  ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ. ಹಳೇ ವಿದ್ಯಾರ್ಥಿಗಳಾದ ಕೆ. ಶ್ವೇತಾ, ಜೆ. ಬಿ. ವಿನಾಯಕ, ನವೀನ್,ಧನಪಾಲ್ ಕಿರಣ್, ಸಾಗರ್, ಎನ್‌. ಮಂಜುನಾಥ, ದೀಪಾಶ್ರೀ, ದೀಪಾ ಕೆ. ಎಂ. ಜಿ. ರೇಖಾ, ಯು. ವನಜಾಕ್ಷಿ, ಕೆ. ತುಳುಸಿ, ವೀರನಗೌಡ, ಎನ್‌. ಪ್ರೀತಿ, ಸಂತೋಷ, ಈ. ನಾಗರಾಜ, ಶ್ರುತಿ, ಈಶ್ವರಿ, ಸಿ. ಕೆ. ಮಂಜುನಾಥ, ಸಂದೀಪ್ ಬಿ., ಲಿಂಗರಾಜ್, ವಿನಾಯಕ, ಬಿ. ವೆಂಕಟೇಶ, ಎಸ್‌. ಉಮೇಶ, ರೇಖಾ ಎಂ. ರಘು, ಮಂಜು ಎಂ, ರಾಘವೇಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ