ಗುರು ಸಿದ್ದರಾಮೇಶ್ವರ ಜಯಂತಿ ಆಚರಣೆ
ಶಿಗ್ಗಾವಿ 16: ಕಾಟಾಚಾರಕ್ಕೆ ಶರಣರ ಕಾರ್ಯಕ್ರಮಗಳನ್ನು ಅಧಿಕಾರಿಗಳು ಮಾಡಬಾರದು ಎಂದು ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದರ ಾಜ್ಯಾಧ್ಯಾಕ್ಷ ಹನುಮಂತಪ್ಪ ಬಂಡಿವಡ್ಡರ ಹೇಳಿದರು.
ಪಟ್ಟಣದ ಜಯನಗರದಲ್ಲಿ ಕರ್ನಾಟಕರಾಜ್ಯ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದಿಂದ ಗುರು ಸಿದ್ದರಾಮೇಶ್ವರ ಜಯಂತಿ 851 ನೇ ಯಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಈ ಸಮಾಜದ ಮೂಲ ಉದ್ಯೋಗ ಕಲ್ಲು ಒಡೆಯುವದು ಪರರ ಪಾಲಾಗಿದೆ. ಕಾರಣ ಸರ್ಕಾರ ಗಣಿಗಾರಿಕೆ ಪರವಾನಿಗೆಯನ್ನು ಈ ಸಮಾಜದ ಜನಾಂಗದವರಿಗೆ ಕೊಡಬೇಕು ಹಾಗೂ ಶಿಗ್ಗಾವಿಯಲ್ಲಿ ಸಿದ್ದರಾಮೇಶ್ವರ ಭವನ ಮಾಡಬೇಕು ಆಗ್ರಹಿಸಿದರು.
ಸಮಾಜದ ಮುಖಂಡರಾದ ನಾಗರಾಜ ಹಾವೇರಿ, ಶಿವಪ್ಪ ಬಂಡಿವಡ್ಡರ, ಮಂಜುನಾಥ. ಅಶೋಕ ದುರ್ಗಪ್ಪ. ಬಸವರಾಜ್.ಕೃಷ್ಣಾ ಬಸಪ್ಪ. ಹುರಳಿಕೊಪ್ಪಿ. ಮುಂತಾದವರು ಉಪಸ್ಥಿತರಿದ್ದರು.