ಕೊಟ್ಟೂರಿನಲ್ಲಿ ಗುರು ಪೌರ್ಣಿಮಿ ಆಚರಣೆ
ಕೊಟ್ಟೂರು 20: ಕೊಟ್ಟೂರಿನಲ್ಲಿ ಶ್ರೀಗುರುಬಸವೇಶ್ವರ ವಿದ್ಯಾಭಿವೃದ್ದಿ ಸಂಸ್ಥೆ ಅಡಿಯಲ್ಲಿ ಬರುವ ಅಂಗ್ಲ ಮಾಧ್ಯಮ ಶಾಲೆ ಹಾಗೂ ಗಂಗ್ರೋತ್ರಿ ವೇದ ಮತ್ತು ಸಂಸ್ಕೃತ ಪಾಠ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುಪೌರ್ಣಮಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಶ್ರೀಗುರು ಕೊಟ್ಟೂರೇಶ್ವರರ ಭಾವಚಿತ್ರ ಹಿಡಿದು ಗುರು ಪೌರ್ಣಿಮ ಮಹತ್ವ ಸಾರುವ ಘೋಷಣೆಗಳನ್ನು ಕೂಗುತ್ತಾ, ಅದ್ಧೂರಿಯಾಗಿ ಆಚರಿಸಿದರು.
ನಂತರ ಶಾಲಾ ಅವರಣದಲ್ಲಿ ನೆಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯ ನಾರಾಯಣ ಹೆಬ್ಬಾರೆ ಅವರು ವಹಿಸಿದರು, ಮುಖ್ಯ ಅತಿಥಿಗಳಾಗಿ ಕೊಟ್ರ್ಪ ಆರ್ ಗುರುಜಿ ಅಗಮಿಸಿದ್ದರು, ಮೊದಲಿಗೆ ಕ್ಷೇತ್ರನಾಥ ಶ್ರೀಗುರುಕೊಟ್ಟೂರೇಶ್ವರ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಗುರುಜಿಯವರು ಗುರು ಪೌರ್ಣಿಮ ಮಹತ್ವ ಕುರಿತು ಮಾತನಾಡಿ, ಮಹಾಭಾರತ ಕಾಲದಿಂದ ಬಂದ ಗುರು ಪರಂಪರೆಯು ಅಂದು ವ್ಯಾಸ ಮಹಾಋಷಿ ಅವರು ನಮಗೆ ಮೊದಲ ಗುರು ಅಲ್ಲದೇ ಗುರು ಎಂದರೆ ಆಜ್ಞಾನದಿಂದ ಜ್ಞಾನದ ಕಡೆ ಕರೆದುಕೊಂಡು ಹೋಗುವವನೇ ನಿಜವಾದ ಗುರುಯೆಂದರು. ಅಗಿನ ಕಾಲದಲ್ಲಿ ಗುರು ಪರಂಪರೆ ಮಹತ್ವ ದೊಡ್ಡದಿತ್ತು , ವಿದ್ಯಾರ್ಥಿಗಳು ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಗುರುಗಳಿಗೆ ನಿಜವಾದ ಭಕ್ತಿಯನ್ನು ಸಲ್ಲಿಸಬೇಕೆಂದರು. ಯಾವುದೇ ಕಾರ್ಯಕ್ಕೆ ಆಗಲೀ ಗುರಿ ಹಾಗೂ ಗುರುವಿನ ಅನುಗ್ರಹವಿಲ್ಲದೇ ಏನೋಂದು ನೆಡೆಯುವುದಿಲ್ಲವೆಂದರು.
2017 ರಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಚಟ್ರಿಕಿ ಬಸವರಾಜ ಗಂಗೋತ್ರಿ ವೇದ ಮತ್ತು ಸಂಸ್ಕೃತ ಪಾಠ ಶಾಲೆಯನ್ನು ಪ್ರಾರಂಭಿಸಲು ಸತತ ಪ್ರಯತ್ನ ಮಾಡಿ ಕೊನೆಗೆ ಯಶಸ್ವಿಯಾಗಿದ್ದಾರೆಯೆಂದರು.
ಸ್ವಾಗತವನ್ನು ಹೆಚ್. ನಾರಯಣ ಮಾಡಿದರೇ, ನಿರೂಪಣೆ ಯನ್ನು ಕು. ಶ್ರೀದೇವಿ ಎಸ್.ಪಿ. ನಿರ್ವಹಿಸಿದರು, ಪ್ರಾರ್ಥನೆಯನ್ನು ಶಾಲೆಯ ಸಂಸ್ಕೃತ ಪಾಠಶಾಲೆಯ ವಿಧ್ಯಾರ್ಥಿಯಾದ ಕು. ಇಂದ್ರ ಎಂ. ಶುಶ್ರಾವಾಗಿ ಹಾಡಿ ನೆರದಿದ್ದ ವೀಕ್ಷಕರನ್ನು ತೆಲೆ ದೂಗುವಂತೆ ಮಾಡಿದರು.