ಮಹಲಿಂಗಪುರ

ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುಲ್ಬರ್ಗ ತಂಡಕ್ಕೆ ಪ್ರಥಮ ಸ್ಥಾನ

ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುಲ್ಬರ್ಗ ತಂಡಕ್ಕೆ ಪ್ರಥಮ ಸ್ಥಾನ

ಮಹಾಲಿಂಗಪುರ20:  ಸ್ಥಳೀಯ ಕೆ.ಎಲ್‌.ಇ ಸಂಸ್ಥೆಯ ಎಸ್‌.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯ ಕ್ರೀಡಾ ವಿಭಾಗ ಹಾಗೂ ಯೂಥ್ ಸ್ಪೋರ್ಟ್ಸ್‌ ಕ್ಲಬ್ ಜಂಟಿಯಾಗಿ ಏರಿ​‍್ಡಸಿದ ಮುಕ್ತ ಡಬಲ್ಸ್‌ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗುಲ್ಬರ್ಗದ ಪುರುಷರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.  

ಈ ಪಂದ್ಯಾವಳಿಯಲ್ಲಿ ಸುಮಾರು 25 ತಂಡಗಳು ಭಾಗವಹಿಸಿ, ಕಲಬುರ್ಗಿಯ ಪಿರೋಜ ಹಾಗೂ ಸುನೀಲ ಜೋಡಿಯು ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದರೆ, ನಂತರದ ದ್ವಿತೀಯ ಸ್ಥಾನವನ್ನು ಪುನಾ ತಂಡದ ಗಣೇಶ ಮತ್ತು ತೇಜಸ್ ಅಲ್ಲದೆ ತೃತೀಯ ಸ್ಥಾನವನ್ನು ಬಾಗಲಕೋಟ ತಂಡದ ಪ್ರವೀಣ ಮತ್ತು ವಿಜಯ ಪಡೆದುಕೊಂಡರು.. 

ಉತ್ತಮ ದಾಳಿಗೆ ಪುನಾ ತಂಡದ ಗಣೇಶ ಸಬಕಾಳೆ, ಉತ್ತಮ ಆಟಗಾರನಾಗಿ ಕಲಬುರ್ಗಿಯ ಪಿರೋಜ ಅವರು ಆಯ್ಕೆಯಾಗಿ ಪಂದ್ಯಾವಳಿಯ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು. 

ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 15 ಸಾವಿರ ರೂಗಳನ್ನು ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಈಶ್ವರ ಚಮಕೇರಿ, ದ್ವಿತೀಯ ಬಹುಮಾನ 10 ಸಾವಿರ ರೂಗಳನ್ನು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ತೃತಿಯ ಬಹುಮಾನ 5 ಸಾವಿರ ರೂಗಳನ್ನು ಮಲ್ಲಯ್ಯ ಜಕಾತಿಮಠ ಹಾಗೂ ಹಾರುನ್ ಚೌಧರಿ ನೀಡಿ ಪಂದ್ಯಾವಳಿಗೆ ಪ್ರೋತ್ಸಾಹ ನೀಡಿದರು. 

ಪಂದ್ಯಾವಳಿಯಲ್ಲಿ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ, ಸಂಘಟನಾ ಕಾರ್ಯದರ್ಶಿ ವಿ.ಎಸ್‌.ಅಂಗಡಿ, ಕಾರ್ಯದರ್ಶಿ ಎ.ಎಂ.ಉಗಾರೆ, ಆರ್‌.ಎಸ್‌.ಪೂಜಾರಿ, ವಿ.ಎಂ.ಮುಧೋಳ, ಶ್ರೀಶೈಲ ಚೌಗಲಾ, ಸಹಸಂಘಟಕ ಮಹಾಂತೇಶ ಬುರುಕುಲೆ, ಸಲೀಂ ಹಳಿಂಗಳಿ, ದೀಲೀಪ ಸುಣದೊಳ್ಳಿ, ಸುನೀಲ ಹೊಸೂರ, ಮಾನಪ್ಪ ಬಗಲಿ, ವಿಜಯ ಕುರಿ, ರಾಜೇಂದ್ರ ಪಾಟೀಲ, ರವಿ ಬಿದರೆ ಹಲವರು ಇದ್ದರು. 

ಸುದ್ದಿ ಓದಿ