60ಲಕ್ಷ ವೆಚ್ಚದ ಡಾ.ಬಿ.ಆರ್ ಅಂಬೇಡ್ಕರ್ ಭವನಗಳ ಕಾಮಗಾರಿಗಳಿಗೆ ಭೂಮಿಪೂಜೆ
ಲೋಕದರ್ಶನ ವರದಿ
ಯರಗಟ್ಟಿ 27 : ಸಮಾಜ ಕಲ್ಯಾಣ ಇಲಾಖೆಯಡಿ 3 ಗ್ರಾಮಗಳ ಡಾ.ಬಿ.ಆರ್ ಅಂಬೇಡ್ಕರ್ ಭವನಗಳ ಅಭಿವೃದ್ಧಿಗೆ ಒಟ್ಟು 60 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೇರವೆರಿಸಿದರು.
ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಸಮುದಾಯ ಭವನಗಳನ್ನು ಬಲಪಡಿಸುವ ಹಾಗೂ ಸಾರ್ವಜನಿಕರಿಗೆ ಸುಸಜ್ಜಿತ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ.
ಇಂದು ಸಮಾಜ ಕಲ್ಯಾಣ ಇಲಾಖೆಯ 2025-26 ನೇ ಸಾಲಿನ ಯೋಜನೆಯಡಿ, ಯರಗಟ್ಟಿ ತಾಲ್ಲೂಕಿನ ಪ್ರಮುಖ 3 ಗ್ರಾಮಗಳಾದ ಇಟ್ನಾಳ ದಾಸನಾಳ, ಮಳ್ಳಿಕೇರಿ ಗ್ರಾಮಗಳಲ್ಲಿ ತಲಾ 20.00 ಲಕ್ಷದಂತೆ ಒಟ್ಟು 60.00 ಲಕ್ಷ ಅಂದಾಜು ಮೊತ್ತದ ಡಾ.ಬಿ.ಆರ್ ಅಂಬೇಡ್ಕರ್ ಭವನಗಳ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಅಧಿಕೃತವಾಗಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಬೆಳಗಾವಿಯ ನಿರ್ಮಿತಿ ಕೇಂದ್ರದ ವತಿಯಿಂದ ಜರುಗಲಿರುವ ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಅತ್ಯಂತ ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಮಲಿಕಸಾಬ ಬಾಗವಾನ, ಬಂಗಾರೆಪ್ಪ ಹರಳಿ, ಸುರೇಶ ಭಜಂತ್ರಿ, ಬಸವರಾಜ ಸತ್ತೂರಿ, ಯಂಕಣ್ಣಾ ಕಳ್ಳಿಗುದ್ದಿ, ಸತ್ತಿಗೇರಿ ಗ್ರಾ. ಪಂ. ಪಿಡಿಓ ಎ. ಬಿ ಬಂಗಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಗೋಪಾಲ ದಳವಾಯಿ, ಉಮೇಶ ಮಾಗುಂಡನ್ನವರ, ಸಿದ್ದಪ್ಪ ರಂಗರಣ್ಣವರ, ಬನಪ್ಪಗೌಡ ಪಾಟೀಲ, ಮುಗಬಶೀರ ಭಾಗವಾನ, ಜಯವಂತ ಹಾದಿಮನಿ, ಬಸಯ್ಯ ಸಾಲಿಮಠ, ರುದ್ರ್ಪ ತುಮಂದಿ, ನಾಗಪ್ಪ ತುರಮಂದಿ, ಶಿವಪ್ಪ ದೇಸಾಯಿ, ಶಿವಾನಂದ ತುರಮಂದಿ, ನಿಂಗಪ್ಪ ನುಗ್ಗಾಟ್ಟಿ, ಚಿನ್ನಪ್ಪ ಹರಳಿ, ದಾಸನಾಳ ಗ್ರಾಮದ ಮುಖಂಡರಾದ ಹನಮಂತ ಪೂಜೇರ, ಈರಣ್ಣಾ ಬಳಿಗಾರ, ಪುಂಡಲೀಕ ತೋಟಗಿ, ರಾಜು ಹರಿಜನ, ಈರ್ಪ ಅಂಗಡಿ, ಪಾಂಡಪ್ಪ ಬೀರಕ್ಕನ್ನವರ, ವಿಠ್ಠಲ ಶಿಂತ್ರಿ, ವಿಕ್ರಮ ಇಂಗಳಗಿ, ಉಮೇಶ ಹೊಸೂರ, ಇಟ್ನಾಳ ಗ್ರಾಮದ ಬಾಳಪ್ಪ ಚಂದರಗಿ, ಭೀರ್ಪ ಹಂಚಿನಾಳ, ಶಿವು ಚಂದರಗಿ, ಪುಂಡಲೀಕ ಪೂಜೇರ, ಸಂಗಯ್ಯ ಹಿರೇಮಠ, ಪುಂಡಲೀಕ ಮಾದರ, ರಾಂಚಂದ್ರ ಮಾದರ, ತುಕಾರಾಮ ಮಾದರ, ಮೆಳ್ಳಿಕೇರಿ ಗ್ರಾಮದ ನಾಗರಾಜ ದೇಸಾಯಿ, ಲಕ್ಕಪ್ಪ ಪೂಜೇರ, ಲಕ್ಕಪ್ಪ ಬ್ಯಾಕೋಡ, ವಿಠ್ಠಲ ಬಾಚಗೌಡ್ರ, ಲಕ್ಕಪ್ಪ ಕಡಬಿ, ಲಕ್ಕಪ್ಪ ತಳವಾರ, ಹನಮಂತ ತಳವಾರ, ಯಮನಪ್ಪ ತಳವಾರ, ಕೃಷ್ಣಪ್ಪ ಹೊರಟ್ಟಿ, ಭೀಮಶಿ ಜುಟ್ಟನ್ನವರ, ಜಗದೀಶ ಬಾಚಗೌಡ್ರ, ವಿವಿಧ ಗ್ರಾಮಗಳ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ನಿರ್ಮಿತಿ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಆತ್ಮೀಯ ಕಾರ್ಯಕರ್ತರು ಉಪಸ್ಥಿತರಿದ್ದರು.