ಮಹಲಿಂಗಪುರ

ಸ್ಥಳೀಯ ಠಾಣಾಧಿಕಾರಿ ನಡೆಯನ್ನು ಖಂಡಿಸಿ ಕಿರಾಣಿ ವರ್ತಕರ ಪ್ರತಿಭಟನೆ

ಸ್ಥಳೀಯ ಠಾಣಾಧಿಕಾರಿ ನಡೆಯನ್ನು ಖಂಡಿಸಿ ಕಿರಾಣಿ ವರ್ತಕರ ಪ್ರತಿಭಟನೆ

ಮಹಾಲಿಂಗಪುರ 21: ಕಿರಾಣಿ ಹಾಗೂ ಕಾಯಿಪಲ್ಲೆ ವ್ಯಾಪಾರಸ್ಥರನ್ನು ಸ್ಥಳೀಯ ಠಾಣಾಧಿಕಾರಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಥಳಿಸಿದ್ದಾರೆ ಎಂದು ಆರೋಪಿಸುತ್ತ, ಮೇ.21ರಂದು ಟೊನಪಿನಾಥ ದೇವಸ್ಥಾನದಲ್ಲಿ, ಅನಿದರ್ಿಷ್ಟಾವಧಿಯವರೆಗೆ ಅಂಗಡಿಗಳನ್ನು ತೆರೆಯುವುದಿಲ್ಲವೆಂದು ಪಟ್ಟಣದ ಕಿರಾಣಿ ವರ್ತಕರು ಪಟ್ಟುಹಿಡಿದು ತಮ್ಮ ಒಕ್ಕೊರಲಿನ ನಿಧರ್ಾರವನ್ನು ಪ್ರಕಟಿಸಿದ್ದಾರೆ.ಈ ಸಮಯದಲ್ಲಿ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ಅಂಗಡಿ ಮಾತನಾಡಿ, ಸಕರ್ಾರದ ಕೊರೊನಾ ಮಾರ್ಗದಶರ್ಿ ಸೂತ್ರಗಳ ಜೊತೆಯಲ್ಲಿ ಎ. 7ರಂದು ಪುರಸಭೆಯಲ್ಲಿ ನಗರದ ಎಲ್ಲ ವ್ಯಾಪಾರಸ್ಥರು, ನಾಗರಿಕರು ಕೊರೊನಾ ನಿಮರ್ೂಲನೆಗೊಳಿಸಲು ಕೆಲ ಷರತ್ತುಗಳ ಅಡಿಯಲ್ಲಿ ಒಂದು ತಿಂಗಳ ಕಾಲ ಇನ್ನಷ್ಟು ಕಠಿಣ ನಿಧರ್ಾರಗಳನ್ನು ಕೈಗೊಳ್ಳಲು ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ಒಪ್ಪಿಗೆ ಸೂಚಿಸಿದ್ದರು. 

ಕಳೆದ ತಿಂಗಳ ಆರಂಭ ವಾರದ ಸಭೆಯಲ್ಲಿ ನಿಗದಿಯಂತೆ ಬೆಳಗ್ಗೆ 6ರಿಂದ 10ರವರೆಗೆ ಇರುವ ಸಮಯಾವಕಾಶದಲ್ಲಿ ಕಿರಾಣಿ ಸಗಟು ಹಾಗೂ ಕಿರುಕುಳ ವ್ಯಾಪಾರಸ್ಥರು ವಹಿವಾಟನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಮೊನ್ನೆ ಕಿರಾಣಿ ವರ್ತಕ ಬಸವರಾಜ್ ಕಲಾದಗಿ ಅವರಿಗೆ ಸ್ಥಳೀಯ ಠಾಣಾಧಿಕಾರಿ ಜಿ.ಎಸ್ ಉಪ್ಪಾರ ಅವರು ಗದರಿಸುತ್ತಾ ಅಂಗಡಿ ಬಂದ್ ಮಾಡಲು ಹೇಳಿದ್ದಲ್ಲದೇ ಅಂಗಡಿಯ ಕೆಲಸಗಾರನ ಮೇಲೆ ಲಾಠಿ ಪ್ರಹಾರ ಮಾಡಿ ನಾವು ಹೇಳುವವರೆಗೆ ಅಂಗಡಿಯನ್ನು ತೆರೆಯುವಂತಿಲ್ಲವೆಂದೂ ಹೇಳಿರುವ ಅಧಿಕಾರಿಯ ಸವರ್ಾಧಿಕಾರ ಧೋರಣೆಯನ್ನು ನಾವು ಖಂಡಿಸಿ, ಕಿರಾಣಿ ವ್ಯಾಪಾರಸ್ಥರ ಸಂಘವು ಹಲ್ಲೆಗೊಳಗಾದ ಅಂಗಡಿಕಾರರಿಗೆ, ಬೆಂಬಲಾರ್ಥವಾಗಿ ಮೇಲಾಧಿಕಾರಿಗಳು ನಮ್ಮ ಸಂಘದ ಮನವಿಗೆ ಸ್ಪಂದಿಸುವವರೆಗೆ ಮೇ21ರಿಂದ ಅನಿದರ್ಿಷ್ಟಾವಧಿ ಕಿರಾಣಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತಿದ್ದೇವೆ ಮತ್ತು ಶಾಸಕರು, ತಹಸಿಲ್ದಾರ್, ಸಿಪಿಐ ಅವರಿಗೆ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ನೀಡಲಾಗುವುದು ಎಂದರು. 

ಕಲ್ಲಪ್ಪ ಹೆಬ್ಬಾಳ, ಚೆನ್ನಪ್ಪ ಹೂಗಾರ್, ಬಸವರಾಜ್ ಕಲಾದಗಿ, ಮಹಾಲಿಂಗ ಮಾಳಿ, ಯುನುಸ್ ಅತ್ತಾರ ಇವರು ಈ ಲಾಕ್ಡೌನ್ ನಲ್ಲಿ ಪೊಲೀಸರಿಂದ ಆಗಿರುವ ತೊಂದರೆಯ ಅಳಲನ್ನು ತೋಡಿಕೊಂಡರು. ಕಿರಾಣಿ ವರ್ತಕ ಮಲ್ಲಪ್ಪ ಭಾವಿಕಟ್ಟಿ, ಬಲವಂತಗೌಡ ಪಾಟೀಲ್, ಸಿದ್ದು ಬೇನೂರ, ರಾಜು ಭಾವಿಕಟ್ಟಿ, ಎ.ಎನ್ ಓಸ್ವಾಲ್, ಪವನ್ ಕಟಗಿ, ಕಲ್ಲಪ್ಪ ಒಂಟಗೋಡಿ, ಅಶೋಕ್ ಕುಳ್ಳೊಳ್ಳಿ, ಸಂಗಮೇಶ್ ಉಪ್ಪಲದಿನ್ನಿ, ಎಸ್ ಎಂ ಹಂದಿಗುಂದ, ಆಯ್ ಸಿ ಹುರಕಡ್ಲಿ, ವಿ.ಎಂ ಜಮಖಂಡಿ, ಎಸ್ ಎಂ ಗುಂಡಾ, ಎ.ಎಂ ಬಾಡಗಿ, ಆಯ್ ಎನ್ ಹುಣಿಶಾಳ, ವಂದಾಲ್, ಎಸ್ ಎಂ ಕಡಪಟ್ಟಿ, ಜಿಎಸ್ ಅಂಬಿ, ಕಾಂತು ಬುದ್ನಿ, ಇಷರ್ಾದ್ ಪೆಂಡಾರಿ, ಪಿ.ಎಸ್ ರಾಮೋಜಿ ಅಲ್ಲದೆ ಸೂಪರ್ ಮಾಕರ್ೆಟ್ ಗಳಾದ ಗಣೇಶ್, ಸಿದ್ದಸಿರಿ, ಪಿ ಮಾಟರ್್ ಮತ್ತು ಬಂಡಿ,ರಾಜಾರಾಮ, ಶಿವಾ, ಪೂಜಾ ಪಾವಟೆ ಕಿರಾಣಿ ಅಂಗಡಿಗಳ ಮಾಲೀಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮಹಾಲಿಂಗಪುರ : ನಗರದ ಸಗಟು ಹಾಗೂ ಕಿರುಕುಳ ಕಿರಾಣಿ ವ್ಯಾಪಾರಸ್ಥರು ಸ್ಥಳೀಯ ಠಾಣಾಧಿಕಾರಿ ನಡೆಯನ್ನು ಖಂಡಿಸಿ ಟೊನಪಿನಾಥ ದೇವಸ್ಥಾನದಲ್ಲಿ ಪ್ರತಿಭಟನಾ ಸಭೆ ನಡೆಸಿದರು 

ಸುದ್ದಿ ಓದಿ