ಹಗರಿಬೊಮ್ಮನಹಳ್ಳಿ

ಪತ್ರಕರ್ತರಿಗೆ ಸಾಹೀರಾ ಬಾನು ಕುಟುಂಬದಿಂದ ದಿನಸಿ ಕಿಟ್

ಪತ್ರಕರ್ತರಿಗೆ ಸಾಹೀರಾ ಬಾನು ಕುಟುಂಬದಿಂದ ದಿನಸಿ ಕಿಟ್

ಹಗರಿಬೊಮ್ಮನಹಳ್ಳಿ 12: ಪತ್ರಕರ್ತರಿಗೂ ಕುಟುಂಬ ಇದೆ, ಜೀವದ ಹಂಗು ತೊರೆದು ಅನೇಕ ಕಷ್ಟಗಳನ್ನು ಎದುರಿಸುತ್ತಾ ಮೂಲೆ ಮೂಲೆಯಿಂದ ಸುದ್ದಿಗಳನ್ನು ಒದುಗರ ಮುಂದೆ ಇಡುವ ಒರಮಾಣಿಕ ಪ್ರಯತ್ನ ಪತ್ರಕರ್ತರದ್ದಾಗಿದೆ ಇಂತಹ ಕ್ಲಿಷ್ಠಕರ ಪರಿಸ್ಥಿತಿ ಎದುರುಸುತ್ತಿರುವ ಪತ್ರಕರ್ತರಿಗೆ ನೆರವಿನ ಹಸ್ತ ಚಾಚುವಲ್ಲಿ ಸರಕಾರಗಳು ಹಿಂದೇಟು ಹಾಕುತ್ತಿರುವುದು ವಿಷಾದನೀಯವೆಂದು ಸಹೀರಾ ಬಾನು ಹೇಳಿದರು.

ಪಟ್ಟಣದ ಸೋನಿಯಾಗಾಂಧಿ ನಗರದ ನಿವಾಸದಲ್ಲಿ ಅವರು ಪತ್ರಕರ್ತರಿಗೆ ಆಹಾರ ಕಿಟ್ಗಳನ್ನು ಜೊತೆ ಜೊತೆ ಪಲ್ಸ್ಮೀಟರ್ ನೀಡಿ ಮಾತನಾಡಿ ತಮ್ಮ ಪತಿ ದಿವಂಗತ ಶರೀಫ್ ಸಾಹೇಬ್ ರವರ 2ನೇ ವರ್ಷದ ಪುಣ್ಯತಿಥಿಯ ಸ್ಮರಣಾರ್ಥ ಹಾಗೂ ಕೊರೊನಾ ಪ್ರಂಟ್ಲೈನ್ ವಾರಿಯರ್ಸ್ ಎಂದು ಹೇಳಿ ಮೂಗಿಗೆ ತುಪ್ಪ ಸವರುವ ಸಕರ್ಾರ ಪತ್ರಕರ್ತರಿಗೂ ತಮ್ಮ ಕುಟುಂಬ ಸಾಕುವ ಜವಾಬ್ದಾರಿ ಹೊಂದಿರುತ್ತಾರೆಂಬ ಜ್ಞಾನವನ್ನು ಹೊಂದಿರದೆ ಪತ್ರಕರ್ತರನ್ನು ಕಡೆಗಣೆಸಿರುವುದು ನಿಜಕ್ಕೂ ಸಮಂಜಸವಲ್ಲ, ಪತ್ರಕರ್ತರು ತಮ್ಮ ಕುಟುಂಬ ವರ್ಗವನ್ನು ಲೆಕ್ಕಿಸದೇ ದಿನನಿತ್ಯ ಜನರ ಮದ್ಯ ಇದ್ದುಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ ಅಂತಹವರನ್ನು ಗುರುತಿಸಿ ಗೌರವಿಸುವುದು ಅವರ ಕಷ್ಟಕ್ಕೆ ಆಸರೆಯಾಗುವುದು ನಮ್ಮ ಕರ್ತವ್ಯವಾಗಿದೆ.  

ಜನ ಸಾಮಾನ್ಯರ ಕಷ್ಟಕ್ಕೆ ಸ್ಫಂದಿಸಬೇಕು ಹಾಗೂ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಬೇಕೆಬ ಆಸೆಯಿಂದ ನನ್ನ ಪುತ್ರರು, ಸೊಸೆಯಂದಿರ ಸಹಕಾರದಿಂದ ಅಲ್ಪ ಸ್ವಲ್ಪ ಅಳಿಲು ಸೇವೆಮಾಡಲು ಸಾಧ್ಯವಾಗಿದೆ ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಸಿರಿತನ ಒಂದಿದ್ದರೆ ಸಾಲದು ಸೇವೆ ಮಾಡುವ ಮನಸ್ಸು ಇರಬೇಕು, ಪತ್ರಕರ್ತರ ನೋವಿನ ಜೀವನ ಅರ್ಥ ಮಾಡಿಕೊಂಡು ಅವರ ಸೇವೆ ಗುರುತಿಸುವ ಮೂಲಕ ಆಹಾರ ಕಿಟ್ ನೀಡಿರುವ ಸಾಹೀರಾ ಬಾನು ಅಕ್ಕನವರ ಸೇವೆಯನ್ನು ಶ್ಲಾಘಿಸಿದರು. 

ಹಿರಿಯ ಪತ್ರಕರ್ತರಾದ ಜೆ ನಾಗರಾಜ ಮಾತನಾಡಿ ಅಮ್ಮ ಸಂಸ್ಥೆಯ ಬಾನಕ್ಕರು ಈಗಾಗಲೇ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಈ ಲಾಕ್ಡೌನ್ ಸಂದರ್ಭದಲ್ಲಿ ವಿವಿಧ ವರ್ಗದ ಬಡಜನರಿಗಾಗಿ 2000ಕ್ಕೂ ಹೆಚ್ಚು ಫುಡ್ಕಿಟ್ಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೇ ಗ್ರಾಮೀಣ ಭಾಗದ ಸೋಂಕಿತರಿಗೆ ಅನುಕೂಲವಾಗಲೆಂದು ಆರೋಗ್ಯ ಇಲಾಖೆಗೆ 20 ಸಾವಿರಕ್ಕೂ ಅಧಿಕ ವಿಟಮಿನ್ ಸಿ ಮೆಡಿಕಲ್ ಕಿಟ್ನ್ನು ನೀಡಿದ್ದಾರೆ. ಫ್ರಂಟ್ಲೈನ್ ವಾರಿಯರ್ಸ್ಗಳಾದ ಪೌರ ಕಾಮರ್ಿಕರು, ಆಶಾ ಕಾರ್ಯಕತರ್ೆಯರು ಮತ್ತು ಅಂಗನವಾಡಿ ಕಾರ್ಯಕತರ್ೆಯರಿಗೆ ಈಗಾಗಲೇ ಹ್ಯಾಂಡ್ಗ್ಲೌಸ್, ಎನ್-95 ಮಾಸ್ಕ್ ಹಾಗೂ ಆಕ್ಸಿ ಮೀಟರ್ಗಳನ್ನು ವಿತರಿಸುವ ಮೂಲಕ ಕೋವಿಡ್ನ 2ನೇ ಅಲೆಯ ಈ ಸಂಕಷ್ಟ ಸಂದರ್ಭದಲ್ಲಿ ಸಾಮಾಜಿಕ ಕಾಳಜಿಯನ್ನು ಮೆರೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಾನಮ್ಮನವರ ಮಕ್ಕಳಾದ, ಅಬ್ಬು ನೂರ, ಸಿಖಂದರ್, ಆಶಾಬೇಗಂ, ಸೊಸೆಯಂದಿರಾದ ಆಸ್ಮಾ, ನಜ್ಮಾ, ಅಳಿಯ ಖಾಸೀಂ ಸಾಬ್, ಮೊಮ್ಮಕ್ಕಳಾದ ಫಾರೂಕ್ ಅಬ್ದುಲ್, ಅಪರ್ಿಯಾಬಾನು, ಸನಾ, ಆಫಿಯಾನಾಜ್, ಆಲಿಶಾ, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಜರಿದ್ದರು 

ಸುದ್ದಿ ಓದಿ