ಶಿಗ್ಗಾವ್

ಎಸ್ಸಿ, ಎಸ್ಟಿ ಸಮುದಾಯಗಳ ಕುಂದುಕೊರತೆಗಳ ಪರಿಹಾರ ಸಭೆ

ಎಸ್ಸಿ, ಎಸ್ಟಿ ಸಮುದಾಯಗಳ ಕುಂದುಕೊರತೆಗಳ ಪರಿಹಾರ ಸಭೆ

ಲೋಕದರ್ಶನ ವರದಿ

ಶಿಗ್ಗಾವಿ : ಸಾರ್ವಜನಿಕ ಆಸ್ಪತ್ರೆಯ ಕೆಲ ವೈದ್ಯರೇ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಸುತ್ತಿದ್ದಾರೆ, ತಾಲೂಕಿನ ಕೆಲ ಅಂಗನವಾಡಿ ಶಾಲೆಗಳಲ್ಲಿ ಜಾತಿಯತೇ ಇನ್ನೂ ಜೀವಂತವಾಗಿ, ತಾಲೂಕಿನ ಕೆಲ ಅಧಿಕಾರಿಗಳು ಎಸ್ಸಿ, ಎಸ್ಟಿ ಸಮುದಾಯಗಳ ಮುಖಂಡರನ್ನು ಸಭೆಗಳಿಗೆ ಆಹ್ವಾನಿಸದೆ ಕೀಳಾಗಿ ಕಾಣುತ್ತಿದ್ದಾರೆ ಎಂದು ಎಸ್ಸಿ, ಎಸ್ಟಿ ಸಮುದಾಯಗಳ ಮುಖಂಡರು ಸಮಸ್ಯೆಗಳ ಸುರಿಮಳೆಯನ್ನೆ ಸುರಿಸಿದ ಘಟನೆ ಮಂಗಳವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕರೆದ ಎಸ್ಸಿ, ಎಸ್ಟಿ ಸಮುದಾಯಗಳ ಕುಂದುಕೊರತೆಗಳ ಪರಿಹಾರ ಸಭೆಯಲ್ಲಿ ಜರುಗಿತು.

ಕುಂದುಕೊರತೆಗಳ ಸಭೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೇ ನಂತರ ತಾಲೂಕಾ ಪಂಚಾಯತ ಸಭಾಭವನಕ್ಕೆ ಸ್ಥಳಾಂತರವಾಗಿ ಸಭೆಯು ಮುಂದುವರೆಯಿತು.

ಸಭೆಯು ಆರಂಭವಾಗುತ್ತಿದ್ದಂತೆ ಎಸ್ಸಿ, ಎಸ್ಟಿ ಸಮುದಾಯದವರು ಸಮಸ್ಯೆಗಳ ಸುರಿಮಳೆಯನ್ನೇ ಗೈದರು, ಸಭೆಯಲ್ಲಿ ವಿದ್ಯಾರ್ಥಿ  ಓರ್ವರ ತಂದೆ ಸತತ ನಾಲ್ಕು ವರ್ಷಗಳಿಂದ ಬಂದಿರುವ ಸ್ಕಾಲರ್ಸಿಪ್ ಪಡೆಯಲು ಸಮಾಜಕಲ್ಯಾಣ ಇಲಾಖೆಗೆ ಅಡ್ಡಾಡುತ್ತಿದ್ದ ವಿಷಯ ತಿಳಿದ ತಾಲೂಕಾ ದಂಡಾಧಿಕಾರಿ ಶಿವಾನಂದ ರಾಣೆ ಅವರು ಸಮಾಜ ಕಲ್ಯಾಣ ಇಲಾಖೆಯ ಸರಸ್ವತಿ ಘಜಕೋಶ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಕರ್ಾರಿ ಆಸ್ಪತ್ರೆಯಲ್ಲಿ ಹಲವಾರು ಸೌಲಭ್ಯಗಳಿದ್ದು ಕೆಲ ವೈಧ್ಯರೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ, ಸಣ್ಣ ಪುಟ್ಟ ರೋಗಿಗಳನ್ನು ಕಿಮ್ಸ್ಗೆ ಕಳುಹಿಸುತ್ತಾರೆ, ಮತ್ತು ತಾಲೂಕಿನಲ್ಲಿ ಮೆಡಿಕಲ್ ಮಾಫೀಯಾ ನಡೆದಿದ್ದು ಸಂಬಂದಪಟ್ಟ ಇಲಾಖೆ ಹಾಗೂ ತಾಲೂಕಾ ಆಡಳಿತ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಪಂ ಸದಸ್ಯ ಸುಧೀರ ಲಮಾಣಿ ಗಂಭೀರವಾಗಿ ಆರೋಪಿಸಿದರು.

ನಮ್ಮ ಎಸ್ಟಿ ಸಮುದಾಯದ ಹಲವಾರು ಜನರಿಗೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ,  ಅಧಿಕಾರಿಗಳ ನಿಷ್ಕಾಳಜಿಯಿಂದ ಪರಿಹಾರವಾಗಬೇಕಾದ ಸಮಸ್ಯೆಗಳಿದ್ದರೆ ಸಭೆ ಕರೆಯಿರಿ ಕೇವಲ ಕಾಟಾಚಾರದ ಸಭೆ ಕರೆಯುವುದಾದರೆ ನಮಗೆ ಸಭೆ ಕರೆಯುವುದು ಬೇಡ ಎಂದು ಮುಖಂಡ ಮಹೇಶ ತಳವಾರ ಅಕ್ರೋಷ ವ್ಯಕ್ತಪಡಿಸಿದರು. 

ಶಬರಿ ನಗರದಲ್ಲಿರುವ ಅಂಬೇಡ್ಕರ್ ಭವನ ನಿರ್ವಹಣೆಯಿಲ್ಲದೇ ಕಟ್ಟಡ ಹಾಳಾಗುತ್ತಿದೆ, ಅದನ್ನ ನಿರ್ವಹಣೆ ಮಾಡುವವರಾರು ? ಭವನವನ್ನ ಅನಧೀಕೃತವಾಗಿ ಬಾಡಿಗೆ ನೀಡಲಾಗಿದೆ ಎಂದು ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ ಆರೋಪಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸರಸ್ವತಿ ಗಜಕೋಷ ಮೇಲಾಧಿಕಾರಿಗಳ ಗಮನಕ್ಕೆ ತಂದು ಗೌರವ ಧನ ಆಧಾರದ ಮೇಲೆ ನೀಡಲಾಗಿದೆ ಎಂದರು, ಇದಕ್ಕೆ ತಹಶೀಲ್ದಾರ ಶಿವಾನಂದ ರಾಣೆ ನನ್ನ ಗಮನಕ್ಕೆ ಇಲ್ಲ ಎಂದಾಗ ಕೆಲ ಹೊತ್ತು ಸಮಾಜ ಕಲ್ಯಾಣಾಧಿಕಾರಿಗಳಿಗೆ ಮುಜುಗರವಾದ ಘಟನೆಯೂ ಜರುಗಿತು

ಪೊಲೀಸ್ ಠಾಣೆಯಲ್ಲಿ ಮಹಿಳಾ ಸದಸ್ಯೆಯರನ್ನು ಸಭೆಗೆ ಕಡೆಗಣಿಸಲಾಗುತ್ತಿದೆ, ದಲಿತ ಮಹಿಳೆಯರ ವಿವಿಧ ವ್ಯಾಜ್ಯಗಳಲ್ಲಿ ಮತ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪೋಲೀಸ್ ಇಲಾಖೆ ವಿಫಲವಾಗಿದೆ ಎಂದು ದಲಿತ ಮುಖಂಡರಾದ ಬಾಬಕ್ಕ ಬಳ್ಳಾರಿ ಸಭೆಯಲ್ಲಿ ಆರೋಪಿಸಿದರು. 

ಬಂಕಾಪೂರ ಪಟ್ಟಣದಲ್ಲಿ ಇಲ್ಲಿಯ ವರೆಗೆ ಅಂಬೇಡ್ಕರ ಭವನ ಉದ್ಘಾಟನೆಯಾಗಿಲ್ಲ ಬಂಕಾಪೂರ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ, ಕಲ್ಯಾಣ ಖುಷರ್ಾಪೂರ ಗ್ರಾಮಗಳಲ್ಲಿ ಹಿಂದೂಳಿದವರಿಗೆ ಮನೆಗಳನ್ನು ಹಂಚಿಕೆ ಮಾಡಿಲ್ಲ ಎಂದು ಬಸವರಾಜ ಕಟ್ಟಿಮನಿ ಆಕ್ರೋಷ ವ್ಯಕ್ತಪಡಿಸಿದರು.

ಬಾಲ ವಿಕಾಸ ಯೋಜನೆಯಲ್ಲಿ ಊರಿನ ಗೌಡರಿಗೆ ಹಿರೆತನ ನೀಡಲಾಗಿದೆ ಎಂದು ಡಾ ಮಲ್ಲೇಶಪ್ಪ ಹರಿಜನ ಆರೋಪಿಸಿದರು.

ಸಭೆಯಲ್ಲಿ ತಹಶೀಲ್ದಾರ ಶಿವಾನಂದ ರಾಣೆ, ಉಪ ತಹಶೀಲ್ದಾರ ರವಿ ಕೊರವರ, ಇ ಓ ಪ್ರಶಾಂತ ತುರಕಾಣಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸರಸ್ವತಿ ಗಜಕೋಶ, ಕರಿಯಪ್ಪ ಕಟ್ಟಿಮನಿ, ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಡಾ ಮಲ್ಲೇಶಪ್ಪ ಹರಿಜನ, ಗುರನಗೌಡ ಪಾಟೀಲ, ಮಲ್ಲಿಕಾಜರ್ುನಗೌಡ ಪಾಟೀಲ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎಸ್.ಸಿ,ಎಸ್.ಟಿ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.

* ತಾಲೂಕಿನಲ್ಲಿ ಮುಖ್ಯಮಂತ್ರಿಗಳು ಎಸ್ಸಿ, ಎಸ್ಟಿ ಸಮುದಾಯಗಳ ಶ್ರೇಯೋಭಿವೃದ್ದಿಗೆ ಶ್ರಮಿಸಲು ಉತ್ಸುಕರಾಗಿದ್ದು, ಕೆಲ ಗ್ರಾಮಗಳಲ್ಲಿ ಅಧಿಕಾರಿಗಳ ನಿಷ್ಕಾಳಜಿಯಿಂದ ಎಸ್ಸಿ, ಎಸ್ಟಿ ಯ ಕಾಲೋನಿ ಮತ್ತು ಸಮುದಾಯಗಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ಖೇಧದ ಸಂಗತಿ. 

-ಮಹೇಶ ತಳವಾರ

    ಎಸ್ಟಿ ಸಮುದಾಯದ ಮುಖಂಡ

* ತಾಲೂಕಿನಲ್ಲಿ ವೈದ್ಯಾಧಿಕಾರಿಗಳಿಂದ ದೃಢಿಕರಣ ಪತ್ರ ನೀಡಿದರೂ ತಾಲೂಕಿನಲ್ಲಿ ಒಟ್ಟು ಎಸ್ಸಿ, ಎಸ್ಟಿ ಸಮುದಾಯಗಳ ಕೋವಿಡ್ನಲ್ಲಿ ಮರಣ ಹೊಂದಿದ 16 ಜನ ವ್ಯಕ್ತಿಗಳ ಕುಟುಂಬಗಳ ಪರಿಹಾರ ಅರ್ಜಿ ತಿರಷ್ಕರಿಸಲಾಗಿದೆ ಮತ್ತು ಎಸ್ಸಿ,ಎಸ್ಟಿ ಸಮುದಾಯಕ್ಕೆ ಮೀಸಲಿರುವ 75 ಯುನಿಟ್ ಉಚಿತ್ ವಿದ್ಯುತ್ ನೀಡಲು ದಾಖಲಾತಿ ನೀಡಲು ತಾಂತ್ರಿಕ ಸಮಸ್ಯೆ ಎಂದು ಹೇಳಿ ಅಲೆದಾಡಿಸುವ ಕಾರ್ಯವಾಗುತ್ತಿದೆ.

- ಮಂಜುನಾಥ ಬ್ಯಾಹಟ್ಟಿ

ಪುರಸಭೆ ಸದಸ್ಯ, ಶಿಗ್ಗಾ 

ಸುದ್ದಿ ಓದಿ