ಉಪಚುನಾವಣೆಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ : ಸಚಿವ ಸತೀಶ ಜಾರಕಿಹೊಳಿ
ಶಿಗ್ಗಾವಿ 27 : ಈ ಉಪಚುನಾವಣೆಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ಕೊಡುತ್ತಿದ್ದೇವೆ ಚುನಾವಣೆ ಗೆಲುವು ಕಾರ್ಯಕರ್ತರ ಮೇಲೆ ಅವಲಂಬನೆ ಆಗಿರುತ್ತದೆ, ಈ ಚುನಾವಣೆ ಫಲಿತಾಂಶ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಬಂಕಾಪುರ ಬಳಿಯ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ಖಾನ್ ಪಠಾಣ್ ಪರ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಹಾಗೂ ಹಿರಿಯ ಮುಖಂಡರು ನ. 5, 6, ಹಾಗೂ 11 ನೇ ತಾರೀಖಿಗೆ ಪ್ರಚಾರಕ್ಕೆ ಬರುತ್ತಾರೆ, ನಾವೂ ಸಹಿತ ಕೆಲಸ ಮಾಡುತ್ತಿದ್ದೇವೆ, ಅಭ್ಯರ್ಥಿ ಪಠಾಣ್ ಕೂಡಾ ಪಕ್ಷ ಕಟ್ಟಿದಾರೆ, ನಮಗೆ ನಮ್ಮದೇ ಪಕ್ಷದ ಓಟಿದ್ದು ಗೆಲ್ಲಲು ಅವಕಾಶ ಇದೆ, ನಮ್ಮ ಕಾಂಗ್ರೆಸ್ ನಾಯಕರು ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದಾರೆ ಜೊತೆಗೆ ಗೆಲ್ಲುತ್ತೇವೆ ಅನ್ನುವ ಭರವಸೆಯೂ ಇದೆ ಎಂದರು.
ಅಜ್ಜಂಫೀರ್ ಖಾದ್ರಿ ಬಂಡಾಯ ವಿಚಾರವಾಗಿ ಪ್ರತಿಕ್ರಿಯಿಸದ ಅವರು, ನಾಮ ಪತ್ರ ವಾಪಾಸ್ ತೆಗೆದುಕೊಳ್ಳಲು ನ.30 ವರೆಗೂ ಸಮಯ ಇದೆ, ಅದರ ನಂತರವಾಗಿ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ, ಕಣದಲ್ಲಿ ಯಾರು ಉಳಿತಾರ, ಯಾರು ಹೊರಗೆ ಬರ್ತಾರೆ ಅನ್ನೋದು ಡಿಪೆಂಡ್ ಆಗಿದೆ ಎಂದರು.
ಚುನಾವಣೆ ನಾಮ ಪತ್ರ ಸಲ್ಲಿಕೆ ದಿನ ನಡೆದ ಅಜ್ಜಂಫೀರ್ ಖಾದ್ರಿ ನಡವಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದರ ಕುರಿತು ನಾವು ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ, ನಾಮ ಪತ್ರ ಸಲ್ಲಿಕೆ ಮಾಡೋ ಕಚೇರಿಯಿಂದ 100 ಮೀಟರ್ ದೂರ ಇರಬೇಕು, ಅಲ್ಲಿ ಯಾರಿಗೂ ಅವಕಾಶ ಇಲ್ಲ, ಮಂತ್ರಿಗಳು ಕೂಡ ಹೋಗುವಂತಿಲ್ಲ, ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಬೇಕಿತ್ತು ಎಂದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಕುರಿತು ಮಾತನಾಡಿದ ಅವರು, ಅದಕ್ಕೆ ಬಿಜೆಪಿಯವರೇ ಉತ್ತರವನ್ನು ಕೊಬೇಕು, ಯಡಿಯೂರ್ಪನವರದು ಅದೆ, ಬೇರೆ ಬೇರ ಅವರಲ್ಲೂ ಕುಟುಂಬ ರಾಜಕಾರಣ ಪ್ರಾರಂಭವಾಗಿದೆ, ಉತ್ತರವನ್ನು ಅವರು ಹೇಳಬೇಕು ನಾವಲ್ಲ ಎಂದರು
ಈ ಸಂದರ್ಭದಲ್ಲಿ ಮಯೂರ ಜಯಕುಮಾರ, ಅಭ್ಯರ್ಥಿ ಯಾಸೀರ್ ಅಹ್ಮದ್ಖಾನ್ ಪಠಾಣ್, ಜಿಲ್ಲಾದ್ಯಕ್ಷ ಸಂಜೀವಕುಮಾರ ನೀರಲಗಿ, ರಾಜೇಶ್ವರಿ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.