ಮಹಲಿಂಗಪುರ

ಐಟಿ ಫೆಸ್ಟ್‌ನಲ್ಲಿ ಉತ್ತಮ ಸಾಧನೆ

ಐಟಿ ಫೆಸ್ಟ್‌ನಲ್ಲಿ ಉತ್ತಮ ಸಾಧನೆ

ಮಹಾಲಿಂಗಪುರ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಗೋಕಾಕದ ಕೆಎಲ್‌ಇ ಬಿಸಿಎ ಕಾಲೇಜಿನಲ್ಲಿ ನಡೆದ ಕೆಎಲ್‌ಇ ಅಂತರ್ ಕಾಲೇಜು ಮಟ್ಟದ ಐಟಿ ಫೆಸ್ಟ್‌ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲಿ ನಾಟಕಂ, ಸಂಕೇತಂ, ಪ್ರಶ್ನಂ, ಪ್ರದರ್ಶನಂ, ರೀಲಂ, ದೃಶಂ ಎಂಬ 6 ಸ್ಪರ್ಧೆಗಳನ್ನು ಏರಿ​‍್ಡಸಲಾಗಿತ್ತು. ಅದರಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೀದಿನಾಟಕ ಹಾಗೂ ಐಟಿಕ್ವಿಜ್ ಸ್ಪರ್ಧೆಯಲ್ಲಿ ಲಕ್ಷ್ಮೀ ಪಾಟೀಲ ಮತ್ತು ಸಂದೀಪ ಖಟ್ಟೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಹರ್ಷಿತಾ ಫಕಿರಪುರ, ನಂದಿನಿ ಗಸ್ತಿ, ಸ್ವಾತಿ ಕಡ್ಲಿ, ಈಶ್ವರಿ ಕಾಗಿ, ಜಾವೀದ ತೇರದಾಳ, ಪವನ ಗೊಂಧಳಿ, ಮಹೇಶ ಕುಡ್ಲೆಪ್ಪನವರ, ಚೇತನ ಗುಡಿ ಸಮಾಧನಕರ ಬಹುಮಾನ ಪಡೆದಿದ್ದಾರೆ ಎಂದು ಬಿಸಿಎ ವಿಭಾಗದ ಸಂಯೋಜಕ ಅರವಿಂದ ಬಿಜ್ಜರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ