ಸಂಕ್ರಾತಿ ಹಬ್ಬಕ್ಕೆ ತಂದೆಯ ಸಮಾಧಿ ಪೂಜೆಗೆ ಅವಕಾಶ ನೀಡದ ಅಜ್ಜ, ದೊಡ್ಡಪ್ಪ : ಕಣ್ಣಿರಾದ ಪುಟ್ಟ ಮಕ್ಕಳಿಂದ ಹಿಡಿ ಶಾಪ
ಬೆಳಗಾವಿ : ಅನಾರೋಗ್ಯ ಹಿನ್ನೆಲೆಯಲ್ಲಿ ತೀರಿಕೊಂಡಿದ್ದ ತಂದೆ ಸಮಾಧಿಗೆ ಪೂಜೆಗೆ ಆಗಮಿಸಿದ್ದ ಪುಟ್ಟ ಮಕ್ಕಳು ಪೂಜೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿ ಅಜ್ಜ, ದೊಡ್ಡಪ್ಪನಿಗೆ ಹಿಡಿಶಾಪ ಹಾಕಿ ಗೋಳಾಡಿದ ಘಟನೆಯೊಂದು ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದ್ದು, ಪುಟ್ಟ ಮಕ್ಕಳು ತಂದೆಯ ಸಮಾಧಿಗೆ ಪೂಜೆಗಾಗಿ ಗೇಟ್ ಬಾಗಿಲು ಬಡೆದು ರೋಧಿಸುವ ದೃಶ್ಯ ವು ಕಂಡವರ ಕರಳು ಕರಗುವಂತೆ ಮಾಡಿದೆ.
ಹೌದು ಓದುಗರೇ ಇಂತಹ ಒಂದು ಮನಕುಲುಕುವ ಘಟನೆ ಕಿತ್ತೂರಿನಲ್ಲಿ ನಡೆದಿದ್ದು, ಹೆಸರಾಂತ ಕಿತ್ತೂರಿನ ಹೆಸರಾಂತ ಲಂಗೋಟಿ ಕುಟುಂಬದ ಮೊಮ್ಮಕ್ಕಳು ಇವರಾಗಿದ್ದು, ಈ ಮಕ್ಕಳ ತಂದೆ ಮಲ್ಲಿಕಾರ್ಜುನ ಲಂಗೋಟಿ ಇವರು ಕಳೆದ 2021ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ತೀರಿಕೊಂಡಿದ್ದಾರೆ.
ಆದರೆ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಮಕ್ಕಳು ತಮ್ಮ ತಂದೆಯ ಸಮಾಧಿಗೆ ಪೂಜಿ ಸಲ್ಲಿಸಲು ನಿನ್ನೆ ಸಮಾಧಿ ಜಾಗಕ್ಕೆ ಬಂದರೆ ಇಲ್ಲಿ ತಮ್ಮ ಮಕ್ಕಳಿಗೆ ತಮ್ಮ ತಂದೆಯ ಸಮಾಧಿಯ ದರ್ಶನವನ್ನು ಸಹಿತ ಮಾಡಲು ಬಿಡದ ಲಂಗೋಟಿ ಕುಟುಂಬಸ್ಥರು ಮಕ್ಕಳು ಒಳಗೆ ಬರದಂತೆ ಗೇಟ್ ಬಂದ್ ಮಾಡಿದ್ದರು.
ಆದರೆ ಈ ಮಕ್ಕಳ ದೊಡ್ಡಪ್ಪನ ಈ ಕೃತ್ಯವನ್ನು ನೋಡಿ ಆಸ್ತಿ ವಿಷಯವನ್ನು ಮುಂದಿಟ್ಟುಕೊಂಡು ಮಕ್ಕಳಿಗೆ ಮತ್ತು ತಾಯಿಗೆ ಇಂತಹ ಹಿಂಸೆಯನ್ನು ಕೊಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಆದರೆ ಮಕ್ಕಳು ತಂದೆಯ ಸಮಾಧಿಯ ಪೂಜೆಗಾಗಿ ಗೇಟ್ ಬಳಿ ನಿಂತು ಬಾಗಿಲು ಬಡೆಯುತ್ತ ರೋಧಿಸುತ್ತಿದ್ದ ದೃಶ್ಯವು ಕಂಡವರ ಕರಳು ಚುರುಕ್ ಅನ್ನುವಂತೆ ಮಾಡಿದೆ.