ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮನವಿ
ಲೋಕದರ್ಶನ ವರದಿ
ಕಂಪ್ಲಿ13: ತಾಲೂಕಿನ ಮೆಟ್ರೀ ಗ್ರಾಮ ಪಂಚಾಯಿತಿ ಕರವಸೂಲಿಗಾರ ಹೆಚ್.ಶಿವಪ್ಪ ಎಂಬವರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ತಪ್ಪಿಸ್ತರ ವಿರುದ್ದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಮಿತಿಯವರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಪತ್ರ ಸಲ್ಲಿಸಿ. ನಂತರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಅರ್.ಎಸ್.ಬಸವರಾಜ. ಮಾತನಾಡಿ ಇತ್ತಚಿಗೆ ಗ್ರಾ.ಪಂ.ಬಿಲ್ ಕಲೇಕ್ಟರಾದ ಹೆಚ್.ಶಿವಪ್ಪ ವಿಷ ಸೇವಿಸುವ ಮುನ್ನಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದೆ ಮನುಷ್ಯ ಮಾನಸಿಕವಾಗಿ ಹಿಂಸೆ ಭವಿಸಿದ್ದಾನೆ ಮೇಟ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಮಾನಸಿಕವಾಗಿ ಕಿರುಕುಳ ಜಾತಿನಿಂದನೆ ಮಾಡಿದ್ದಾರೆ ಪಂಚಾಯಿತಿ ರಾಜ್ 1993ರ ಪ್ರಕಾರ ವಿಚಾರಣೆ ನೆಡಿಸಿ ತಪ್ಪಿಸ್ತರ ವಿರುದ್ದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ತಮ್ಮ ಜಿಲ್ಲಾ ಪಂಚಾಯಿತಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು ರಾಜ್ಯ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳಾದ ಪರಮೇಶ್ವರ, ಪಿ.ರಾಜಸಾಬ್, ನೆಲ್ಲೂಡಿ ರಾಜ, ಸಿಐಟಿಯು ತಾಲೂಕು ಸಂಚಾಲಕ ಬಂಡಿ ಬಸವರಾಜ್, ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ನಾಗರಾಜ, ರಾಜಭಕ್ಷಿ, ಗ್ರಾಪಂ ಪಿಡಿಒಗಳಾದ ಎಂ.ವಾಸುಕಿ, ಕೆ.ಎಚ್.ಶಶಿಕಾಂತ್, ತಾರು ಲಕ್ಷ್ಮಣ ನಾಯ್ಕ, ಕಾರ್ಯದರ್ಶಿಗಳಾದ ಎಚ್.ಹುಲುಗಪ್ಪ, ಕುರಿ ಹೊನ್ನೂರಸ್ವಾಮಿ, ರಾಜೇಶ್, ವೀರಭದ್ರಗೌಡ, ಗ್ರಾಪಂ.ನೌಕರರಾದ ಚಾಂದ್‌ಬಾಷ, ಮಲ್ಲಿಕಾರ್ಜುನ, ಶೆಕ್ಷಾವಲಿ, ಬಸವರಾಜ್, ಯೋಗೇಶ್, ಮರಿಸ್ವಾಮಿ ಇತರರಿದ್ದರು.