ಗ್ರಾಮದೇವಿ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀಗಳು ಚಾಲನೆ
ಶಿಗ್ಗಾವಿ 03: ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿಆಶ್ರಯದಲ್ಲಿಕಾರ್ತಿಕ ಮಾಸದ ನಿಮಿತ್ತಜರುಗಿದ ಗ್ರಾಮದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದ ಸಂಗನಬಸವ ಮಹಾಸ್ವಾಮಿಗಳು ಹಾಗೂ ಗಂಜಿಗಟ್ಟಿಯ ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದೀಪೋತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದೇವಿ ಜಾತ್ರಾಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಾಜಿ ಸಂಸದ ಮಂಜುನಾಥ ಕುನ್ನೂರ ಬಳಿಕ ದೀಪೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ದೀಪಾವಳಿ ಸಂಭ್ರಮ ಕಳೆದು ಕಾರ್ತಿಕ ಮಾಸದ ಸಂಭ್ರಮಎಲ್ಲೆಡೆ ಮನೆ ಮಾಡಿದೆ. ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು, ಭಕ್ತರುಇಂತಹ ಸತ್ಕಾರ್ಯದಲ್ಲಿ ಪಾಲ್ಗೊಂಡು ದೀಪ ಬೆಳಗುವ ಮೂಲಕ ಬದುಕನ್ನು ಪ್ರಜ್ವಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದೇವಿ ಸಮಿತಿ ಅಧ್ಯಕ್ಷ ಭರಮಜ್ಜ ನವಲಗುಂದ, ಕೋಶಾಧ್ಯಕ್ಷ ಟಿ.ವಿ.ಸುರಗಿಮಠ, ಫಕ್ಕೀರಜ್ಜಯಲಿಗಾರ, ಜಯಣ್ಣ ಹೆಸರೂರ, ದತ್ತಣ್ಣ ವರ್ಣೇಕರ್, ತಮ್ಮಣ್ಣ ಮೆಳ್ಳಾಗಟ್ಟಿ, ಶ್ರೀಕಾಂತ್ ಬುಳ್ಳಕ್ಕನವರ, ಈರಣ್ಣ ಬಡ್ಡಿ, ಮಂಜುನಾಥಯಲಿಗಾರ, ಶಿವಣ್ಣ ಗಂಜಿಗಟ್ಟಿ, ಅಶೋಕ ಕಾಳೆ, ಹನುಮಂತಪ್ಪ ದ್ಯಾಮಣ್ಣವರ, ಶಿವಣ್ಣ ಚಿನ್ನಪ್ಪನವರ, ರವಿ ಮಹಾಂತಶೆಟ್ಟರ ಸೇರಿದಂತೆ ಭಕ್ತರ ಸಮೂಹ ಪಾಲ್ಗೊಂಡಿದ್ದರು.