ಸರ್ಕಾರ ಪ್ರಥಮ ಚಿಕಿತ್ಸಾ ವ್ಯೆದ್ಯರುಗಳ ಸೇವೆಗೆ ಅವಕಾಶ ನೀಡಲಿ: ಕದ್ದಿಮನಿ
ಪ್ರಥಮ ಚಿಕಿತ್ಸಾ ವ್ಯೆದ್ಯರುಗಳ ಪ್ರತಿಭಟನೆಗೆ ಸ್ಪಂದಿಸಿದ ಆರೋಗ್ಯ ಸಚಿವರು. ಅಧಿಕಾರಿಗಳು
ಮಹಾಲಿಂಗಪುರ 02: ಮೊನ್ನೆ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ದಿ. 29 ರಂದು ಗ್ರಾಮೀಣ ಪ್ರಥಮ ಚಿಕಿತ್ಸಾ ವ್ಯೆದ್ಯರುಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಪ್ರತಿಭಟನೆಗೆ ಸರ್ಕಾರದ ಆರೋಗ್ಯ ಸಚಿವ ದಿನೇಶ ಗುಂಡುರಾವ ಮತ್ತು ಅಧಿಕಾರಿಗಳು ಮನವಿ ಸ್ವೀಕರಿಸಿ ಉತ್ತಮ ಪ್ರತಿಕ್ರೀಯೆ ನೀಡಿದ್ದಾರೆ ಎಂದು ಗ್ರಾಮೀಣ ಪ್ರಥಮ ಚಿಕಿತ್ಸಕರ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್ ಕದ್ದಿಮನಿ ಹೇಳಿದರು.
ಬಸ್ ನಿಲ್ದಾಣ ಹತ್ತಿರವಿರುವ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸುಮಾರು ದಶಕಗಳಿಂದ ರಾಜ್ಯಾದ್ಯಂತ ಸರ್ಕಾರದ ವ್ಯೆದ್ಯಕೀಯ ಸೇವೆಗಳೇ ಇಲ್ಲದ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸೆಕರು ಗ್ರಾಮೀಣ ಭಾಗದ ಜನರಿಗೆ ಅತಿ ಕಡಿಮೆ ಖರ್ಚಿನಲ್ಲಿ ಪ್ರಥಮ ಚಿಕಿತ್ಸೆ ನೀಡುತ್ತಾ ಬಂದಿದ್ದೇವೆ, ಆದರೆ ಸರ್ಕಾರದ ಕೆಲವು ಅಧಿಕಾರಿಗಳು ನಾವು ನಕಲಿ ವ್ಯೆದ್ಯರೆಂದು ತಿಳಿದು ನಮ್ಮ ಸೇವೆಗೆ ತಡೆಯೊಡ್ಡುತ್ತಿದ್ದಾರೆ. ಈ ಕ್ರಮ ಕೂಡಲೇ ನೀಲ್ಲಬೇಕು, ನಮ್ಮಂದಿ ಯಾರಿಗೂ ತೊಂದರೆಯಾಗಿಲ್ಲ, ಆದರೆ ನಮಗೆ ಅಧಿಕಾರಿಗಳು ಮಾತ್ರ ತೊಂದರೆ ಕೊಡುವುದು ತಪ್ಪಿಲ್ಲ. ಕಾರಣ ಸರ್ಕಾರ ನಮಗೂ ಕೂಡ ಬದುಕಲು ಅವಕಾಶ ಕಲ್ಪಿಸಬೇಕು.
ಪ್ರಥಮ ಚಿಕಿತ್ಸಾ ವ್ಯೆದ್ಯರುಗಳ ಬೇಡಿಕೆಗಳಾದ ನಾವು ನಕಲಿ ವ್ಯೆದ್ಯರುಗಳೆಂದು ತಿಳಿದು ನಮ್ಮ ಸೇವೆಗೆ ತಡೆ ನೀಡುತ್ತಿರುವ ಟಾಸ್ಕಪೋರ್ಸ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು, ಆಂದ್ರ ಮಾದರಿಯಂತೆ ನಮಗೂ ಕೂಡಾ ಇಲ್ಲಿ ತರಬೇತಿ ಹಾಗೂ ಮಾನ್ಯತೆ ನೀಡಬೇಕು, 17-03-2017 ರ ಸುತ್ತೋಲೆಯನ್ನು ಪುನಹ ಹೊರಡಿಸಿ ಪ್ರಥಮ ಚಿಕಿತ್ಸಕರಿಗೆ ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಅವಕಾಶ ನೀಡಬೇಕು ಹಾಗೂ ಹಲವಾರು ಬೇಡಿಕೆಗಳ ಪೂರೈಕೆಗಾಗಿ ನಡೆಸಿದ ಪ್ರತಿಭಟನೆಗೆ ಆಗಮಿಸಿದ ಸರ್ಕಾರದ ಆರೋಗ್ಯ ಮಂತ್ರಿಗಳ ಪರವಾಗಿ ಬಂದ ಅಧಿಕಾರಿಗಳು ನಮ್ಮ ಮನವಿ ಸ್ವೀಕರಿಸಿ ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ, ಸಚಿವರಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಮಂತ್ರಿ ದಿನೇಶ ಗುಂಡುರಾವರವರಿಗೆ ಬೇಟಿ : ನಮ್ಮ ಸಂಘದ ರಾಜ್ಯ ಸಮೀತಿ ಸದಸ್ಯರು ಸೇರಿ ರಾಜ್ಯ ಆರೋಗ್ಯ ಮಂತ್ರಿಗಳಾದ ದಿನೇಶ ಗುಂಡುರಾವ ರವರಿಗೆ ಸ್ವತ ಬೇಟಿಯಾಗಿ ನಮ್ಮ ಬೇಡಿಕೆಗಳ ಬಗ್ಗೆ ಪೂರ್ತಿಯಾಗಿ ಮನವರಿಕೆ ಮಾಡಿದಾಗ ನಮ್ಮ ತೊಂದರೆಯನ್ನು ಮನಗಂಡ ಆರೋಗ್ಯ ಸಚಿವರು ಈಗಾಗಲೇ ನಮ್ಮ ಕಾಂಗ್ರೆಸ ಸರ್ಕಾರ ಇದ್ದಾಗಲೆ ಹೊರಡಿಸಿರುವ ಸುತ್ತೋಲೆಯ ಬಗ್ಗೆ ಇನ್ನೊಮ್ಮೆ ಕುಲಂಕಷವಾಗಿ ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ನಿಮಗೆ ಯಾವುದೇ ರೀತಿ ಅನ್ಯಾಯವಾಗದ ರೀತಿಯಲ್ಲಿ ನಿಮ್ಮ ಬೇಡಿಕೆಗಳಿಂದ ಯಾವುದೇ ರೀತಿ ಸಾರ್ವಜನಿಕರಿಗೂ ತೊಂದರೆಯಾಗದ ರೀತಿಯಲ್ಲಿ ಮತ್ತು ಆಂಧ್ರ ಮಾದರಿಯಲ್ಲಿ ಈಗಾಗಲೇ ಹೊರಡಿಸಿರುವ ಸುತ್ತೋಲೆಯಲ್ಲಿನ ಎಲ್ಲ ವಿಷಯಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ನಿಮಗೆ ಸೂಕ್ತ ನ್ಯಾಯ ವದಗಿಸುವುದಾಗಿ ಭರವಸೆ ನೀಡಿದರು.
ಸಚಿವರುಗಳಿಗೆ ಭೇಟಿ : ನಮ್ಮ ಪ್ರಥಮ ಚಿಕಿತ್ಸಾ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್ ಕದ್ದಿಮನಿ ಮತ್ತು ಸದಸ್ಯರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ, ಅಬಕಾರಿ ಸಚಿವ ಅರ್.ಬಿ ತಿಮ್ಮಾಪೂರ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕ್ರೀಡಾ ಮತ್ತು ಸಾಂಸ್ಕೃತಿಕ ಇಲಾಛೆ ಸಚಿವ ಬಿ ನಾಗೇಂದ್ರ ಸೇರಿದಂತೆ ಹಲವು ಸಚಿವರು, ಶಾಸಕರುಗಳಿಗೆ ಮನವಿ ನೀಡಿ, ನಮ್ಮ ಸಂಘದ ಸೇವೆಗಳ ಬಗ್ಗೆ ಮನವರಿಕೆ ಮಾಡಿದಾಗ ಅವರೂ ಕೂಡಾ ಸರ್ಕಾರದಲ್ಲಿ ನಿಮ್ಮ ವಿಷಯದ ಬಗ್ಗೆ ಚರ್ಚಿಸಿ ಆದಷ್ಟು ಬೇಗ ನಿಮಗೆ ಒಂದು ನ್ಯಾಯ ವದಗಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಪ್ರಥಮ ಚಿಕಿತ್ಸಕರ ಸಂಘದ ರಾಜ್ಯ ಕಾರ್ಯಕಾರಿಣಿ ಅಧ್ಯಕ್ಷ ಜೇ ಸಿದ್ದಾರೆಡ್ಡಿ, ಕಾರ್ಯದರ್ಶಿ ಆರ್.ಆರ್ ಪಾಟೀಲ, ಸದಸ್ಯರಾದ ಎಲ್.ಸಿ ಪಾಟೀಲ, ಗುರುನಾಥ ಕುಮಚಗಿ, ಭೀಮಶಿ ಹೊನಗೌಡರ, ಅರವಿಂದ ಕುಲಗೋಡ, ಜಿ.ಎ ಗಾಡಿ, ಸಂಗಯ್ಯ ಹಿರೇಮಠ, ಜಿ.ಎಂ ಮಗದುಮ್, ಶಿವಾನಂದ ಮುಳ್ಳೂರ, ರಾಚಪ್ಪ ಚಿಮ್ಮಡ, ಗೋಪಾಲ, ಬಿ.ಎ ಮಕಾಂದಾರ, ಭೀಮಸಿ ಮಡ್ಡಗೋಳ ಸೇರಿದಂತೆ ಹಲವರು ಇದ್ದರು.