ಸರಕಾರಿ ಶಾಲೆಯ ಶಿಕ್ಷಕಿಯಿಂದ ಪುಟ್ಟ ಮಕ್ಕಳ ಮೇಲೆ ಹಲ್ಲೆ : ಬೆತ್ತದಿಂದ ಮನಬಂದಂತೆ ಧಳಿಸಿ ಶಿಕ್ಷಕಿಯ ದರ್ಪ

ಸರಕಾರಿ ಶಾಲೆಯ ಶಿಕ್ಷಕಿಯಿಂದ ಪುಟ್ಟ ಮಕ್ಕಳ ಮೇಲೆ ಹಲ್ಲೆ : ಬೆತ್ತದಿಂದ ಮನಬಂದಂತೆ ಧಳಿಸಿ ಶಿಕ್ಷಕಿಯ ದರ್ಪ

 ಬೆಳಗಾವಿ : ಸರಕಾರಿ ಶಾಲೆಗೆ ಮಕ್ಕಳನ್ನು ಹಾಕುತ್ತಿಲ್ಲ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬರು ತನಗೆ ರಜೆ ನೀಡಲಿಲ್ಲ ಎಂಬ ಸಿಟ್ಟಿನಿಂದ ತನ್ನ ಶಾಲೆಯ ಪುಟ್ಟ ಮಕ್ಕಳ ಮೇಲೆ ಮನಬಂದಂತೆ ಥಳಿಸಿ ದರ್ಪ ಮೆರೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.


  ಬೆಳಗಾವಿ ನಗರಸ ಪೊಲೀಸ್ ಹೆಡ್‌ ಕ್ವಾಟರ್ಸ್‌ ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಶುಕ್ರವಾರ ನಡೆದಿದ್ದು, ಶಿಕ್ಷಕಿಯ ಆಕ್ರೋಶಕ್ಕೆ ಶಾಲೆ ಮಕ್ಕಳು ನಲುಗುವಂತಾಗಿದೆ.

   ಬೆಳಗಾವಿಯ ಶಿವಾಜಿ ನಗರದ ಸಿದ್ದಾರ್ಥ ಹಾಗೂ ಪ್ರಜ್ಞಾ ಎಂಬ ಇಬ್ಬರು ಮಕ್ಕಳು

ಶಿಕ್ಷಕಿಯ ಏಟಿನಿಂದ ತತ್ತರಿಸಿ ಹೋಗಿದ್ದಾರೆ.

  ಇವರಿಬ್ಬರೂ ಎರಡನೇ ತರಗತಿಯ ಮಕ್ಕಳಾಗಿದ್ದು, ಶಿಕ್ಷಕಿ ಶುಕ್ರವಾರ ತರಗತಿಯಲ್ಲಿ ಅಭ್ಯಾಸದ ವಿಚಾರವಾಗಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ವಿಷಯದಲ್ಲಿ ಉತ್ತರಿಸುವುದಕ್ಕೆ ಮಕ್ಕಳು ಹಿಂದೇಟು ಹಾಕಿದ್ದಾರೆ. ಇದೇ ಕಾರಣ ಹಿನ್ನೆಲೆಯಲ್ಲಿ ಶಿಕ್ಷಕಿ ಬೆತ್ತದಿಂದ ಮಕ್ಕಳ ಕಾಲಿಗೆ ಮನಬಂದಂತೆ ಥಳಿಸಿದ್ದಾರೆ.

   ಮಕ್ಕಳು ಅಳುವುದಕ್ಕೆ ಕಣ್ಣಿರು ಹಾಕಿದಾಗ ಕಪಾಳಕ್ಕೆ ಕೂಡ ಹೊಡೆದಿದ್ದಾರೆ ಎಂದು ತಿಳಿದಿದೆ. ಪುಟ್ಟ ಮಕ್ಕಳ ಮೇಲೆ ಕ್ರೌರ್ಯ ಮೆರೆದ ಶಿಕ್ಷಕಿಯ ಬಗ್ಗೆ ದೂರು ನೀಡುವುದಕ್ಕೆ ಶನಿವಾರ ಮಕ್ಕಳ

  ಪೋಷಕರು ಶಾಲೆಗೆ ಹೋಗಿದ್ದರು, ಆದರೆ ಹಲ್ಲೆ ಮಾಡಿರುವ  ಶಿಕ್ಷಕಿಯು ರಜೆಯ ಮೇಲೆ ಇರುವುದರಿಂದ. 

  ಶಿಕ್ಷಕಿ ವೈಯಕ್ತಿಕ ಕಾರಣಕ್ಕಾಗಿ ಶುಕ್ರವಾರ ರಜೆ ಕೇಳಿದ್ದರು ಆದರೆ ಮೇಲಾಧಿಕಾರಿಗಳು ರಜೆ ನೀಡದ ಕಾರಣದಿಂದ ಕೋಪಗೊಂಡು ತರಗತಿಯ ಎಲ್ಲಾ ಮಕ್ಕಳ ಮೇಲೆ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ.

  ಮಕ್ಕಳ ಮೇಲೆ ಈ ರೀತಿ ಅಮಾನುಷವಾಗಿ ವರ್ತಿಸಿದ ಶಿಕ್ಷಕಿಯ ವಿರುದ್ಧ ಕ್ರಮಕ್ಕೆ ಪೋಷಕರು

ಒತ್ತಾಯಿಸಿದ್ದಾರೆ.

ಸುದ್ದಿ ಓದಿ