ಸರಕಾರಿ ನೌಕರಿ ಆದೇಶ ಪತ್ರಕ್ಕೆ ರಾಜ್ಯಪಾಲರ, ಸಚಿವರ ನಕಲಿ ಸಹಿ : ಎಸ್ ಪಿ ಗುಳೇದ

ಸರಕಾರಿ ನೌಕರಿ ಆದೇಶ ಪತ್ರಕ್ಕೆ ರಾಜ್ಯಪಾಲರ, ಸಚಿವರ ನಕಲಿ ಸಹಿ : ಎಸ್ ಪಿ ಗುಳೇದ

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ವಂಚನೆ ಆರೋಪ ಪ್ರಕರಣವು ನಾಲ್ಕೈದು ತಿಂಗಳ ಹಿಂದೆ ನಡೆದಿದ್ದು, ಆರೋಪಿತರು ನ್ಯಾಯಾಲಯದ ಜಾಮೀನು‌ ಪಡೆದಿರುವದರಿಂದ ಬಂಧನ ಮಾಡಲು ಸಾದ್ಯವಾಗಿಲ್ಲ. ಅಲ್ಲದೆ ರಾಜ್ಯಪಾಲರ ಹೆಸರಲ್ಲಿ ಆದೇಶ ಪತ್ರಗಳಿಗೆ ನಕಲಿ ಸಹಿ ಹಾಕಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. 

    ಮಂಗಳವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಈ ಹಿಂದೆ ನಮಗೆ ಪತ್ರದ ಮೂಲಕ ನಮ್ಮ ಗಮನಕ್ಕೆ ತಂದಿದ್ದರು.

  ಮಂಜುನಾಥ್ ಎಂಬಾತ ಮೋಸ ಮಾಡಿದ್ದಾಗ ಗಮನಕ್ಕೆ ತಂದಿದ್ರೂ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಘಟನೆ ಆಗಿರುತ್ತೆ. ನೊಂದವರನ್ನ ಸಂಪರ್ಕಿಸಿ ದೂರು ಕೊಡಲು ನಮ್ಮ ಪೊಲೀಸರು ಹೇಳ್ತಾರೆ.

    ದುಡ್ಡು ಕೊಡಿಸಿ ಅಂತಾ ನೊಂದವರು ಹೇಳುತ್ತಾರೆ. ಆರೋಪಿತ ತಾನು ದುಡ್ಡು ಕೊಡುವುದಾಗಿ ಹೇಳ್ತಾನೆ.‌ಇದರಲ್ಲಿ ಮಧ್ಯಸ್ಥಿಕೆ ವಹಿಸಿದೇ ನಮ್ಮ ಪೊಲೀಸರು ಎಫ್‌ಐಆರ್ ಮಾಡಿದ್ದಾರೆ.

  ಆರಂಭದಲ್ಲಿ ಯಾವುದೇ ದೂರು ಕೊಡದೇ ನೊಂದವರು ಹೋಗಿರುತ್ತಾರೆ.ಇದಾದ ಬಳಿಕ ಓರ್ವ ನೊಂದವರು ಬಂದು ಕೆಲಸ ಕೊಡಿಸುವುದಾಗಿ ಮೋಸ ಮಾಡಿದ್ದಾಗಿ ದೂರು ಕೊಡ್ತಾರೆ.

    ಆರೋಪ ಮಾಡಿದ ಕಾವ್ಯ ಅನ್ನೋಳಿಗೆ ನೋಟಿಸ್ ಕೊಡಲಾಗಿರುತ್ತೆ. ಆರೋಪಿ ಮಂಜುನಾಥ್ ಮೇಲೆ ಕೇಸ್ ಆಗ್ತಿದ್ದಂತೆ ಪರಾರಿಯಾಗಿದ್ದ. ಜೊತೆಗೆ ನ್ಯಾಯಾಲಯಕ್ಕೆ ಹೋಗಿ ಜಾಮೀನು ಪಡೆದಿದ್ದ. ಸಚಿವರ ಆಪ್ತ ಸಹಾಯಕ ಸಂಗನಗೌಡ ಮೇಲೆ ಆರೋಪ ಇತ್ತು.

   ತನಿಖೆಯಲ್ಲಿ ಆತ ಭಾಗಿಯಾಗಿಲ್ಲ ಅನ್ನೋದು ಗೊತ್ತಾಗಿದೆ. ಮತ್ತೆ ಯಾರಾದ್ರೂ ದೂರು ಕೊಟ್ರೂ ಕೇಸ್ ಪಡೆಯವುದಾಗಿ ಎಸ್ ಪಿ ಡಾ. ಭೀಮಾಶಂಕರ ಗುಳೇದ ಅವರು ತಿಳಿಸಿದ್ದಾರೆ.

ಸುದ್ದಿ ಓದಿ