ಹುಕ್ಕೇರಿ

ಅಲೆಮಾರಿ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಲಭಿಸಲಿ: ಕಲ್ಪನಾ ಜೋಶಿ

ಅಲೆಮಾರಿ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಲಭಿಸಲಿ: ಕಲ್ಪನಾ ಜೋಶಿ

ಹುಕ್ಕೇರಿ 29: ಜಿಲ್ಲೆಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ 11 ಜಾತಿಗಳಿವೆ. ಆದರೆ ಒಗ್ಗಟ್ಟಿನಿಂದ ಸಂಘಟನೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಖಾಂತರ ನಮ್ಮ ಜನಾಂಗದ ಮಾಹಿತಿ ಪಡೆದು ಸಂಘಟನೆ ಮಾಡುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಲು ಮುಂದೆ ಬರಬೇಕಾಗಿದೆ ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಜೋಶಿ ಹೇಳಿದರು.

ಹುಕ್ಕೇರಿ ತಾಲೂಕಿನ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಸಮುದಾಯದಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹೇಳವರು, ಗೋಲ್ಲರು, ಕಿಲ್ಲಕಿಟ್ಟರು, ಗೋಂದಳಿ ಜನಾಂಗ, ವಂಶಾವಳಿ ಹೇಳುವವರು, ಶಕುನ ಹೇಳುವವರು ಉದ್ಯೋಗ ಆರಿಸಿ ಬೇರೆ ಬೇರೆ ಸ್ಥಳಗಳಿಗೆ ಸಂಚಾರ ಮಾಡುವುದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ 11 ಜಾತಿಯವರು ಒಗ್ಗಟ್ಟಾಗಿ ಸಂಘಟನೆ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕಾಗಿದೆ ಎಂದರು.

ತಾಲೂಕಾ ಅಧ್ಯಕ್ಷ ಉದ್ದಪ್ಪಾ, ಮಹಾಂತೇಶ ಊರವಳಗಿನ, ಎಸ್ ಬಿ ಮಲಾಜ, ಎಸ್ ಬಿ ಶಿರಗಾಂವ ಹಾಗೂ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳ ಅಲೆಮಾರಿ ಜನಾಂಗದ ಮುಖಂಡರು ಉಪಸ್ಥಿತರಿದ್ದು ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಸುದ್ದಿ ಓದಿ