ಸರಕಾರಿ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ
ಮುಧೋಳ: ನಗರದ ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಗೆ ಸಚಿನ ತಳವಾರ ಶೇ 96.96 (ಪ್ರಥಮ), ಸಾನಿಯಾ ಸೂರನಾಸಿ ಶೇ 93.60 (ದ್ವಿತೀಯ), ಪರಿಮಳ ಮೇತ್ರಿ ಶೇ 89.28 (ತೃತಿಯ) ಸ್ಥಾನ ಪಡೆದಿದ್ದಾರೆ ಮತ್ತು ಆಕಾಶ ಭಂಡಾರಿ ಶೇ 88.80, ಹೀನಾ ಕೌಸರ ಸೂರನಾಸಿ ಶೇ 88.80, ಆರತಿ ಚೌಹಾನ ಶೇ 83.04 ಅಂಕಗಳನ್ನು ಪದೆದಿದ್ದಾರೆ.ಮುಖ್ಯೋಪಾಧ್ಯಾಯ ಬಿ.ವೈ.ಕಂದಗನೂರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.