ಉತ್ತಮ ಆರೋಗ್ಯಕ್ಕೆ ಆಟ, ಪಾಠ ಮತ್ತು ವ್ಯಾಯಾಮದ ಅವಶ್ಯಕತೆ ಇದೆ: ವೈದ್ಯ ಡಾ.ಎ ಆರ್. ಬೆಳಗಲಿ.
ಜೆಸಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ' ವೈದ್ಯ ಕ್ರಿಡೋತ್ಸವ'
ಮಹಾಲಿಂಗಪುರ 29: ಪ್ರತಿ ಮನುಷ್ಯ ತನ್ನ ದೈನಂದಿನ ಬದುಕಿನ ಜೊತೆ ಉತ್ತಮ ಆರೋಗ್ಯಕ್ಕೆ ಪರ್ಯಾಯ ಆಟ, ಪಾಠ ಮತ್ತು ವ್ಯಾಯಾಮದ ಅವಶ್ಯಕತೆ ಇದೆ ಎಂದು ಹಿರಿಯ ವೈದ್ಯರಾದ ಡಾ.ಎ ಆರ್. ಬೆಳಗಲಿ ಹೇಳಿದರು.
ರವಿವಾರ ಮುಂಜಾನೆ ಜೆಸಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಪಟ್ಟಣದ ಡಾಕ್ಟರ್ಸ್ ಅಸೋಸಿಯೇಷನ್ ಏರಿ್ಡಸಿದ ' ವೈದ್ಯ ಕ್ರಿಡೋತ್ಸವ ' ಅಂಗವಾಗಿ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾರೆ ಆಗಲಿ ಸದಾಕಾಲ ಒಂದೇ ವೃತ್ತಿಯಲ್ಲಿ ತೊಡಗಿಸಿಕ್ಕೊಳ್ಳುವುದರಿಂದ ಮನಸ್ಸಿಗೆ ಬೇಜಾರಾಗಬಹುದು ಇದು ಸಹಜ. ಈ ರೀತಿ ಆಗದಂತೆ ವಿವಿಧ ಕ್ರಿಡೆ, ರಂಗಗಳಲ್ಲಿ ತೊಡಗಿಸಿಕೊಂಡು ಮನಸ್ಸಿನ ನೆಮ್ಮದಿ ಪಡೆಯಬೇಕು ಎಂದು ವೈದ್ಯ ಸಮೂಹಕ್ಕೆ ಸಲಹೆ ನೀಡಿದರು.
ಇನ್ನೋರ್ವ ಹಿರಿಯ ವೈದ್ಯರಾದ ಬಿ ಡಿ. ಸೋರಗಾವಿ ಮಾತನಾಡಿ, ಪೇಷಂಟ್ ಗಳು ಹಾಗೂ ವೈದ್ಯಕೀಯ ಪರಿಕರಗಳೊಂದಿಗೆ ಕಾಲ ಕಳೆಯುವ ನಮಗೂ ಆರೋಗ್ಯದ ದೃಷ್ಟಿಯಿಂದ ಬೇರೆ ಬೇರೆ ರಂಗಗಳಲ್ಲಿ ತೊಡಗಿಸಿಕ್ಕೊಳ್ಳುವುದು ಸೂಕ್ತ ಎಂದರು.
ಭಾನುವಾರ ಬಿಡುವು ಮಾಡಿಕೊಂಡು ಪಂದ್ಯಾವಳಿಯಲ್ಲಿ ತೊಡಗಿದ ವೈದ್ಯರು ನಾಲ್ಕು ಪುರುಷ ಮತ್ತು ಎರಡು ಮಹಿಳಾ ತಂಡಗಳನ್ನು ರಚಿಸಿಕ್ಕೊಂಡು ವಾಲಿಬಾಲ್ ಮತ್ತು ಥ್ರೋ ಬಾಲ್ ಆಟಗಳಲ್ಲಿ ಪಾಲ್ಗೊಂಡು ಸಂತೋಷದಿಂದ ಕಾಲ ಕಳೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಿಶ್ವನಾಥ ಗುಂಡಾ ವಹಿಸಿದ್ದರು. ವೈದ್ಯರಾದ ಡಾ.ಎ ಆರ್. ಬೆಳಗಲಿ, ಡಾ. ಉಷಾ ಬೆಳಗಲಿ, ಡಾ. ಬಿ ಡಿ. ಸೋರಗಾವಿ, ಡಾ.ವಿಜಯ ಹಂಚಿನಾಳ, ಡಾ. ಅಜೀತ ಕನಕರೆಡ್ಡಿ, ಡಾ. ಶ್ರೀಕಾಂತ ಅರಿಷಿಣಗೋಡಿ, ಡಾ. ವಿ ಎಸ್. ಮಮದಾಪೂರ, ಜೆಸಿ ಶಾಲೆಯ ಎಸ್ ಡಿ.ತಿಪ್ಪಾ ಇದ್ದರು.
ಪತ್ರಕರ್ತರಾದ ಮಹೇಶ ಮನ್ನಯ್ಯನವರಮಠ, ಎಸ್ ಎಸ್ ಈಶ್ವರ್ಪಗೋಳ, ಹಣ್ಮಂತ ನಾವಿ ಮತ್ತು ನೀಟ್ ಅಗ್ರ ಶ್ರೇಯಾಂಕಿತ ನಂದನ ಮಲ್ಲಾಪೂರ ಅವರನ್ನು ವೈದ್ಯ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.ವೈದ್ಯ ಕ್ರಿಡೋತ್ಸವಕ್ಕೆ ವೇದಿಕೆ ಗಣ್ಯರು ಸಸಿಗೆ ನೀರುಣ್ಣಿಸುವ ಮೂಲಕ ಚಾಲನೆ ನೀಡಿದರು.ಸ್ವಾಗತ ಡಾ.ಅಶೋಕ ದಿನ್ನಿಮನಿ, ಜೆಸಿ ಶಾಲೆ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಮತ್ತು ಶಿಕ್ಷಕರಾದ ನಾರಣಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು.