ಸಿಡಿ ಸಮರ : ಹಲವು ದಾಖಲೆಗಳ ಜತೆ ದೆಹಲಿಗೆ ಹಾರಿದ ಮಾಜಿ ಸಚಿವ ರಮೇಶ ಜಾರಕಿಹೊಳಿ : ಕೇಂದ್ರ ಗೃಹಸಚಿವ ಅಮಿತ್ ಶಾ ಜತೆ ಭೇಟಿ, ಚರ್ಚೆ

ಸಿಡಿ ಸಮರ : ಹಲವು ದಾಖಲೆಗಳ ಜತೆ ದೆಹಲಿಗೆ ಹಾರಿದ ಮಾಜಿ ಸಚಿವ ರಮೇಶ ಜಾರಕಿಹೊಳಿ : ಕೇಂದ್ರ ಗೃಹಸಚಿವ ಅಮಿತ್ ಶಾ ಜತೆ ಭೇಟಿ, ಚರ್ಚೆ

ಬೆಳಗಾವಿ : ಮಹತ್ವದ ಬೆಳವಣಗೆಯಲ್ಲಿ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರ ಸಂಜೆ ಕೆಲವು ದಾಖಲೆಗಳೊಂದಿಗೆ ದೆಹಲಿಗೆ ಹಾರಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. 

    ಈ ಚರ್ಚೆಯು ಫಲಪ್ರದ ಆದರೆ ಮುಂದೆ ಕರ್ನಾಟಕ ರಾಜಕೀಯ ರಣರಂಗದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಗುರುವಾರ ರಾತ್ರಿಯೇ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ರಮೇಶ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕುರಿತು ತಮ್ಮ ಬಳಿ ಇರುವ ನೂರಕ್ಕೂ ಹೆಚ್ಚು ದಾಖಲೆ, ಸಾಕ್ಷಿಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

   ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿಡಿ ಪ್ರಕರಣ ವನ್ನು ಒಂದು ವೇಳೆ ಸಿಬಿಐಗೆ ಒಪ್ಪಿಸಿದ್ದಲಿ‌ ಮತ್ತೆ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಲಿದೆ ಎಂದು ನಾಗರಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಸುದ್ದಿ ಓದಿ