ಗೋಕಾಕ ಜಾತ್ರೆಯಲ್ಲಿ ಮೆರಗು ಪಡೆದ ಬಯಲಾಟಗಳು
Gokak fair: Theatre shows
ಗೋಕಾಕ 07: ಗೋಕಾವಿ ದ್ಯಾಮವ್ವ ಜಾತ್ರೆಯ ನಿಮಿತ್ಯ ರಥಗಳು ನಿಂತಲ್ಲಿ ಇಡೀ ರಾತ್ರಿ ವಿವಿಧ ಬಯಲಾಟಗಳು ಪ್ರದರ್ಶನಗೊಂಡು ಜಾತ್ರೆಯ ಮೆರುಗು ಹೆಚ್ಚಿಸಿದವು.ನಗರದ ಅಪ್ಸರಾ ಕೂಟ, ದ್ಯಾಮವ್ವನಗುಡಿ ಮುಂದೆ ಲಕ್ಷ್ಮೀದೇವಿ ಬೈಲಾಟ ಸಂಘದವರು, ಲಕ್ಷ್ಮಣ ಅವರಗೋಳ ನೇತೃತ್ವದಲ್ಲಿ ಸತ್ಯವಾನ ಸಾವಿತ್ರಿ, ಕೊಳವಿ ಹಣಮಂತ ದೇವಸ್ಥಾನದ ಮುಂದೆ ಜಡೀಸಿದ್ದೇಶ್ವರ ಬೈಲಾಟ ಸಂಘದ ಡಾ.ಎಸ್.ಪಿ.ಹತಪಾಕಿ ಅವರ ನೇತೃತ್ವದಲ್ಲಿ ಶ್ರೀಕೃಷ್ಣ ಪಾರಿಜಾತ,ರವಿವಾರ ಪೇಟೆ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರದಲ್ಲಿ ನಾಮದೇವ ಹರಿಜನ ಅವರ ನೇತೃತ್ವದಲ್ಲಿ ಸಂಗ್ಯಾ-ಬಾಳ್ಯಾ ಅರ್ಥಾತ್ ಮಿತ್ರದ್ರೋಹಿ ಮತ್ತು ನಿಜಗುಣ ಶಿವಯೋಗಿ ಎಂಬ ಬೈಲಾಟಗಳು ಸುಂದರವಾಗಿ ಮೂಡಿಬಂದು ಜಾಗತಿಕ ಸಂದರ್ಭದಲ್ಲಿಯೂ ಪುರುಷ, ಮಹಿಳೆ ಮತ್ತು ಯುವಕರು ಜಾನಪದ ಕಲೆಯನ್ನು ನೋಡಿ ರಂಜನೆ ಪಡೆದರು.
ಗೋಕಾಕ ಗೆಳೆಯ ಬಳಗದ ವತಿಯಿಂದ ಜಾನಪದ ಬೈಲಾಟ ಕಲಾವಿದರನ್ನು ಗೌರವಿಸಿದ ಸಾಹಿತಿ ಹಾಗೂ ಕಲಾವಿದ ಪ್ರಾ.ಜಯಾನಂದ ಮಾದರ ಗೋಕಾವಿ ಜಾನಪದ ಕಲಾವಿದ ತವರು ಭೂಮಿಯಾಗಿದ್ದು, ಅದರಲ್ಲೂ ಜಾನಪದ ಬೈಲಾಟ ಆಡುವ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿದ ಜಾತ್ರಾ ಕಮೀಟಿಯ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕರು ರಮೇಶ ಜಾರಕಿಹೊಳಿ ಹಾಗೂ ಸದಸ್ಯರು ಅಭಿನಂದನಾರ್ಹರು ಎಂದರು. ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ, ಹಿರಿಯ ಸಾಹಿತಿ ಡಾ.ಲಕ್ಷ್ಮಣ ಚೌರಿ, ಯೋಗ ಗುರು ಆನಂದ ಸೋರಗಾವಿ, ಸಾಹಿತಿ ವಿದ್ಯಾರೆಡ್ಡಿ ಇದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 