ಮಹಲಿಂಗಪುರ

ದೇವಿಪುರಾಣ ಮತ್ತು ಸಾಂಸ್ಕೃತಿಕ ಉತ್ಸವ

ದೇವಿಪುರಾಣ ಮತ್ತು ಸಾಂಸ್ಕೃತಿಕ ಉತ್ಸವ

ದೇವಿ ಮೆರವಣಿಗೆ, ದೇವರ ದಾಸಿಮಯ್ಯ ಮೂರ್ತಿ ಪ್ರತಿಷ್ಠಾಪನೆ. 

ಮಹಾಲಿಂಗಪುರ 05: ಸ್ಥಳೀಯ ಬಸಶಂಕರಿ ಆಡಳಿತ ಮಂಡಲಿ ಹಾಗೂ ಸಾಂಸ್ಕೃತಿಕ ಉತ್ಸವ ಸಂಘದ ಸಹಯೋಗದಲ್ಲಿ ಕನ್ನಡ ಮತ್ತು ಸಂಸಕೃತಿ ಇಲಾಖೆಯ ಸಹಕಾರದಲ್ಲಿ ಅ.3ರಿಂದ 11 ರವರೆಗೆ ಹಮ್ಮಿಕೊಂಡಿರುವ ಶ್ರೀದೇವಿ ಪುರಾಣ ಹಾಗೂ ದಸರಾ ಉತ್ಸವ ಸಾಂಸ್ಕೃತಿಕ ಉತ್ಸವದ ಮೊದಲ ದಿನವಾದ ಗುರುವಾರ ಬೆಳಿಗ್ಗೆ 8 ಗಂಟೆಗೆ ಸಿದ್ಧಾರೂಢ ಆಶ್ರಮದಿಂದ ಬನಶಂಕರಿ ದೇವಸ್ಥಾನದವರೆಗೆ ಕುಂಭಮೇಳ ಮತ್ತು ಸಕಲ ವಾದ್ಯಮೇಳದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿ ಮೂರ್ತಿ ಹಾಗೂ ದೇವರ ದಾಸಿಮಯ್ಯ ಮೂರ್ತಿ ಮೆರವಣಿಗೆ ಮತ್ತು ದೇವರ ದಾಸಿಮಯ್ಯ ಮೂರ್ತಿ ಪ್ರತಿಷ್ಠಾಪನೆ ಅದ್ಧೂರಿಯಾಗಿ ಜರುಗಿತು. 

ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಮತ್ತು ಉಪಾಧ್ಯಕ್ಷೆ ಶಿಲಾ ಬಾವಿಕಟ್ಟಿ ಮೆರವಣಿಗೆ ಉದ್ಘಾಟಿಸಿದರು,ಮರೇಗುದ್ದಿಯ ನಿರುಪಾದೀಶ್ವರ ಸ್ವಾಮೀಜಿ ದೇವರ ದಾಸಿಮಯ್ಯ ಮೂರ್ತಿ ಪ್ರತಿಷ್ಠಾಪನೆ ಮಾಡಿದರು,  

ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ಸಿದ್ದಪ್ಪ ಕೊಣ್ಣೂರ, ಮಲ್ಲಪ್ಪ ಬಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಶ್ರೀಶೈಲ ಬಾಡನವರ, ನಾರಾಯಣ ಕಿರಗಿ, ಸಿದ್ಧಗಿರೆಪ್ಪ ಕಾಗಿ, ಡಾ.ಬಿ.ಡಿ.ಸೋರಗಾವಿ, ಕೃಷ್ಣಗೌಡ ಪಾಟೀಲ, ಸುನಿಲಗೌಡ ಪಾಟೀಲ, ಶೇಖರ ಅಂಗಡಿ, ಪ್ರಭು ಬೆಳಗಲಿ, ಮಹಾಲಿಂಗಪ್ಪ ಕಿರಗಟಗಿ, ಬಿ.ಸಿ.ಪೂಜಾರಿ, ಗುರುಪಾದ ಅಂಬಿ, ಶಂಕರ ಅಂಬಿ, ರಾಜು ಚಮಕೇರಿ, ರವಿ ಜವಳಗಿ, ರಾಜೇಶ ಬಾವಿಕಟ್ಟಿ, ಈಶ್ವರ ಚಮಕೇರಿ, ಶಂಕರ ಸೋರಗಾವಿ, ಸೋಮನಾಥ ಗೊಂಬಿ, ಶಂಕರ ಹಿಕಡಿ, ಮಹಾದೇವ ಹುಣಶಾಳ, ಚಂದು ಕಾಗಿ, ಮಹಾಲಿಂಗ ಹಿಕಡಿ, ಪ್ರಕಾಶ ಬಾಡನವರ, ಶ್ರೀಶೈಲ ಕಿರಗಟಗಿ, ಚನ್ನಮಲ್ಲ ಕರಡಿ, ಗಂಗಪ್ಪ ಕರಡಿ, ದುಂಡಪ್ಪ ಕರಡಿ, ರಾಜು ಬೆಳಗಲಿ, ವಿರುಪಾಕ್ಷ ಕಾಗಿ, ವಿನೋದ ಚಮಕೇರಿ, ಸತೀಶ ಸೋರಗಾವಿ ಇತರರಿದ್ದರು. 

ಸಂಜೆ ಸೊಲ್ಲಾಪುರ ಮೈಂದರಗಿ ಗುರು ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇರು, ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳು, ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಮಹಾಸ್ವಾಮಿಗಳಿಂದ ಪ್ರವಚನ ಜರುಗಿತು. 

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಿತು.ಮಹಾಲಿಂಗಪ್ಪ ಬೀಳಗಿ ಮತ್ತು ಸಂಜು ಶಿರೋಳ ಪ್ರಸಾದ ವ್ಯವಸ್ಥೆ ಮಾಡಿದ್ದರು. 

ಶುಕ್ರವಾರ ಸಂಜೆ 6 ರಿಂದ ಪ್ರವಚನ ಮತ್ತು ಸರಿಗಮಪ ಖ್ಯಾತಿಯ ವಿಜಪುರದ ಸಾಕ್ಷಿ ಹಿರೇಮಠರಿಂದ ಗಾಯನ, ಯುವವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ ಅವರಿಂದ ಧರ್ಮ ಸಂಸ್ಕೃತಿ ದಿಕ್ಸೂಚಿ ಭಾಷಣ ಜರುಗಿದ್ದು, ಶನಿವಾರ ಸಂಜೆ 6 ರಿಂದ ಪ್ರವಚನ ಮತ್ತು ಕನ್ನಡ ಕೋಗಿಲೆ ಖ್ಯಾತಿಯ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸಾಧಕಿ ಮಹನ್ಯಾ ಪಾಟೀಲರಿಂದ ಗಾಯನ ಕಾರ್ಯಕ್ರಮ ಜರುಗಲಿದೆ. 


ಸುದ್ದಿ ಓದಿ