ಮಹಲಿಂಗಪುರ

ಸಾಕ್ಷಾತ್ ಪಾರ್ವತಿ ಸ್ವರೂಪವೇ ಅನ್ನಪೂರ್ಣೇಶ್ವರಿ ದೇವಿ

ಸಾಕ್ಷಾತ್ ಪಾರ್ವತಿ ಸ್ವರೂಪವೇ ಅನ್ನಪೂರ್ಣೇಶ್ವರಿ ದೇವಿ

ಮುತೈದೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಬಾಗಿ.. 

ಮಹಾಲಿಂಗಪುರ 12: ಪುರಾಣಗಳ ಪ್ರಕಾರ ಆದಿಶಕ್ತಾತ್ಮಕ ದೇವಿ ಅನ್ನಪೂರ್ಣೇಶ್ವರಿಯನ್ನು ಹೊರನಾಡಿನಲ್ಲಿ ಎಂಟನೆಯ ಶತಮಾನದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ದೇವಿ ಮೂರ್ತಿಯನ್ನು ಸ್ಥಾಪಿಸಿದರು. ಎಂದು ಪ್ರತೀತಿ ಇದೇ ಶಿವ ಪಾರ್ವತೀಯರ ನಡುವೆ ವಾಗ್ವಾದವುಂಟಾಗಿ ಶಿವಾ ಆಹಾರ ಸೇರಿ ಎಲ್ಲವೂ ಭ್ರಮೆ ಎಂದು ಘೋಸಿಸಿದರು. ಆಹಾರ ಭ್ರಮೆ ಅಲ್ಲ ಎಂದು ಸಾಬೀತು ಪಡಿಸಲು ಪಾರ್ವತಿ ಕಣ್ಮರೆಯಾಗುತ್ತಾಳೆ ಇದರ ಪರಿಣಾಮವಾಗಿ ಪ್ರಕೃತಿಯು ಸ್ಥಿರವಾಯಿತು, ಹವಾಮಾನ ಬದಲಾಗಲಿಲ್ಲ ಯಾವುದೇ ಸಸಿಗಳು ಬೆಳೆಯಲಿಲ್ಲ. ಪರಿಣಾಮವಾಗಿ ಇಡೀ ಜಗತ್ತಿನಲ್ಲಿ ಬರಗಾಲ ಉಂಟಾಗಿ ಎಲ್ಲಾ ಜೀವರಾಶಿಗಳು ಆಹಾರ ಸಿಗದೇ ಜೀವ ಕಳೆದುಕೊಳ್ಳ ಹತ್ತಿದವು, ಇದನ್ನು ಮನಗಂಡ ದೇವಿ ಪಾರ್ವತಿ ಜಗತ್ತಿನ ಮೇಲೆ ಕರುಣೆ ತೋರಿ ಜಗತ್ತಿನ ಎಲ್ಲ ಜೀವ ರಾಶಿಗಳನ್ನು ಉಳಿಸಲು ಪ್ರತ್ಯಕ್ಷಳಾಗಿ ಎಲ್ಲ ಜೀವಿಗಳಿಗೆ ಆಹಾರ ಹಂಚಿ ಜೀವಗಳನ್ನು ಬದುಕಿಸಿ ಅನ್ನಪೂರ್ಣೇಶ್ವರಿ ಆದಳು.  

ಮಹಾಲಿಂಗಪುರದ ಬಸ್ ನಿಲ್ದಾಣ ಹತ್ತಿರ ಇರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷ ವಿಜಯದಶಮಿ ಎಂದು ಮುತೈದೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಅನ್ನಪೂರ್ಣೇಶ್ವರಿ ದೇವಿ ಕೃಪೆಗೆ ಪಾತ್ರರಾದರು ,ಭಾರತದಲ್ಲಿ ಕಾಶಿಯ ವಿಶ್ವನಾಥನ ಸನ್ನಿಧಿಯಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರಿ ಕರ್ನಾಟಕದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ಬಿಟ್ಟರೆ ಇರುವ ಅತೀ ಹಳೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಇರುವುದು ಮಹಾಲಿಂಗಪುರದ ಪುಣ್ಯ ಮತ್ತು ಹೆಮ್ಮೆಶಾಲಿವಾಹನ ಶೆಕೆ 1872 ರಲ್ಲಿ ನಿರ್ಮಿಸಿದ ದೇಶದ ಮೂರನೇಯ ರಾಜ್ಯದ ಎರಡನೆಯ ದೇವಸ್ಥಾನ ಇದು. 

ಅಭಿವೃದ್ಧಿಗೆ ನೆರವು : ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಈ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ಜಿನೋದ್ದಾರ ಕೆಲಸ ಸ್ಥಳೀಯರ ಸಹಕಾರದಿಂದ ನಡೆಯುತ್ತಿದ್ದು, ಅದಕ್ಕೆ ಹೆಚ್ಚಿನ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.ಅವರು ಕುಟುಂಬ ಸಮೇತರಾಗಿ ಬಂದು ದೇವಿ ಆಶೀರ್ವಾದ ಪಡೆದು ಪುನೀತರಾದರು. 

 ಶ್ರೀಗಳಿಂದ ಚಾಲನೆ : ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದೇವಿಗೆ ಪೂಜೆ ಸಲ್ಲಿಸಿ ಉಡಿ ತುಂಬುವ ಕಾರ್ಯಕ್ಕೆ ಚಾಲನೆ ನೀಡಿದರು ಮತ್ತು ತಯಾರಿಸಿದ ಅಡುಗೆಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ಪ್ರಸಾದಕ್ಕೆ ( ಊಟಕ್ಕೆ ) ಚಾಲನೆ ಕೊಟ್ಟರು. 

ಹೋಳಿಗೆ ಊಟಕ್ಕೆ ಮನಸೋತ ಜನ : ಈ ಬಾರಿ ಜಾತ್ರೆಯಲ್ಲಿ ಅಂದಾಜು 150 ಕೆ ಜಿ ಕಡಲೆ ಬೆಳೆ,150 ಕೆ ಜಿ ಬೆಲ್ಲ 220 ಕೆ ಜಿ ಅಕ್ಕಿ,30ಕೆ ಜಿ ತೊಗರಿ ಬೆಳೆ 25 ಕೆ ಜಿ ತುಪ್ಪ ಬಳಸಲಾಗಿದೆ. ಮಹಿಳೆಯರು ಹಾಗೂ ಪುರುಷರಿಗೆ ಪ್ರತೇಕ ಕೌಂಟರ ತೆರೆದು ಪ್ರಸಾದ ಪೂರೈಸಿದ್ದು ಮೆಚ್ಚುಗೆ ಗಳಿಸಿತು.ಈ ಬಾರಿ ನೀರೀಕ್ಷೆ ಮೀರಿ ಜನ ಆಗಮಿಸಿತು, ಸುಮಾರು ಎಂಟು ಸಾವಿರದಿಂದ ಹತ್ತು ಸಾವಿರ ಜನ ಭಾಗವಹಿಸಿ ದೇವಿ ಕೃಪಾಶೀರ್ವಾದ ಪಡೆದು ಪುನೀತರಾದರು. ಜಾತ್ರೆಯ ದಿನ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.  

ಜಾತ್ರೆ ಅಂಗವಾಗಿ ಮುಂಜಾನೆ ಹೋಮ ಹವನ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲನ ಗೌಡ ಪಾಟೀಲ ಪುರಸಭೆ ಸದಸ್ಯರಾದ ಶೇಖರ್ ಅಂಗಡಿ ರವಿ ಜವಳಗಿ, ಚನ್ನಬಸು ಯರಗಟ್ಟಿ, ಪ್ರಲಾದ್ ಸಣ್ಣಕ್ಕಿ ರಾಜು ಚಮಕೇರಿ,ಮುಖಂಡರಾದ ಈರ​‍್ಪ ದಿನ್ನಿಮನಿ,ಶಿವಾನಂದ ಅಂಗಡಿ, ಶಿವಲಿಂಗ ಟಿರ್ಕಿ, ಜಿ ಎಸ್ ಗೊಂಬಿ,ಶಂಭು ಬಡಿಗೇರ,ಚಂದ್ರಶೇಖರ ನಿಂಬರಗಿ,ಸುರೇಶ ಶೆಟ್ಟಿ, ರಾಜೇಂದ್ರ ಮಿರ್ಜಿ, ಚನ್ನಬಸು ಹುರಕಡ್ಲಿ, ಸುರೇಶ ನಿಂಬರಗಿ, ಮಹಾಲಿಂಗ ದಲಾಲ,ಈರ​‍್ಪ ಪಕೀರಪುರ, ಜಮೀರ ಯಕಃಸಂಬಿ,ಶಿವಾನಂದ ಹುಣಶ್ಯಾಳ ಬಸವರಾಜ ಚಮಕೇರಿ,ಚೇತನ ಹುನಶ್ಯಾಳ ವಿಜಯ ಸಬಕಾಳೆ ಅಶೋಕ ಕಡಪಟ್ಟಿ ನಂದು ಲಾತುರ, ಬೈರೇಶ ಆದ್ದೆಪ್ಪನವರ, ರಾಘು ಪವಾರ, ಅರ್ಜುನ ಪವಾರ, ಶ್ರೀನಿಧಿ ಕುಲಕರ್ಣಿ,ದತ್ತಾ ಯರಗಟ್ಟಿಕರ, ರಾಜೇಂದ್ರ ನಾವಿ,ಮಂಜು ಭಾವಿಕಟ್ಟಿ, ಧರ್ಮರಾಜ ಪೂಜಾರಿ, ಸಿ ಬೀ ಭಜಂತ್ರಿ, ದಾನೇಶ್ ಡೊಂಬರ, ಈರ​‍್ಪ ಹುನಸ್ಯಾಳ ಪವನ ಶಿರೋಳ,ರಾಘು ಶಿರೋಳ ಸತೀಶ ಕಲಾದಗಿ, ಆನಂದ ಶಿರಗುಪ್ಪಿ ಮಹಾಲಿಂಗ ಹಾವನಳ್ಳಿ,ರಘು ಕಪರಟ್ಟಿ ವಿಶಾಲ ಪತ್ತಾರ, ಶ್ರೀ ಬುದ್ನಿ, ಬಾಳೇಶ ಮನ್ನಿಕೇರಿ,ರಾಕೇಶ ಕೆಸರಗೊಪ್ಪ, ಬಸು ಮುರಾರಿ, ಅನೀಲ ಕವಾಶಿ ರೇವಣ್ಣ ಇಟ್ಕಣ್ಣವ್ವರ, ಮಹಾಲಿಂಗ ಜಮಖಂಡಿ, ಸುನೀಲ ರಾಮೊಜ್ಜಿ, ಸುನೀಲ, ಬಸು ಹುರಕಡ್ಲಿ, ಚೇತನ ಬಂಡಿವಡ್ಡರ, ಸಾಗರ ಪರಿಟ್, ಚನ್ನೂ ಆರೆಗೇರ್, ಆನಂದ ಬಂಡಿಗಿನಿ, ಮಹಾಲಿಂಗ ಜಡಿ, ಗಜು ನುಚ್ಚಿ, ಸುರೇಶ ಕೊಣ್ಣೂರ, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದರು. 


ಸುದ್ದಿ ಓದಿ