ಬಳ್ಳಾರಿ

ಪ್ರತಿಭಾ ಪುರಷ್ಕಾರ ನೀಡುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡುತ್ತದೆ : ಆಜೀಜ್

ಪ್ರತಿಭಾ ಪುರಷ್ಕಾರ ನೀಡುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಮೂಡುತ್ತದೆ : ಆಜೀಜ್

ಬಳ್ಳಾರಿ 11 : ಪ್ರತಿಭಾ ಪುರಷ್ಕಾರ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ, ಇಂಥ ಆಸಕ್ತಿಯಿರುವ ಮಕ್ಕಳನ್ನು ಪ್ರೊತ್ಸಾಹಿಸಿದಲ್ಲಿ ಅವರ ಮುಂದಿನ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದು ರೇಯಾನ್ ಶಾಲೆಯ ಛೇರ್ಮನ್ ಕೆ.ಎಮ್‌. ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು.   

ಅವರು ಇಂದು ನಗರದ ರೂಪನಗುಡಿ ರಸ್ತೆಯ ರೇಯಾನ್ ಶಾಲೆಯಲ್ಲಿ ಸಂಸದ ನಾಸೀರ್ ಹುಸೇನ್ ಅಕಾಡೆಮಿವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಪ್ರತಿಭಾ ಪುರಸ್ಕಾರ ಸ್ಕಾಲರ್ ಶಿಪ್ ವಿತರಿಸಿ ಮಾತನಾಡಿ, ಈ ಸ್ಕಾಲರ್ ಶಿಪ್ ಪಡೆಯಲು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಸುಮಾರು 150 ಜನ ವಿದ್ಯಾರ್ಥಿಗಳ ಬುದ್ದಿಮತ್ತೆಯ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಮೊದಲನೇ ಪ್ರೈಜ್ ಗಾಗಿ ಹತ್ತು ಜನ ಮತ್ತು ಎರಡನೇ ಪ್ರೈಜ್ ಗಾಗಿ ಹತ್ತು ಜನ ಒಟ್ಟು ಇಪ್ಪತ್ತು ಜನರಿಗೆ ಒಂದು ಲಕ್ಷ ರೂಪಾಯಿಗಳ ಮೊತ್ತದಲ್ಲಿ ಪ್ರೈಜ್ ನೀಡಲಾಗುತ್ತಿದೆ, ಈ ಮೊತ್ತವನ್ನು ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ ಹೆಸರಿನಲ್ಲಿ ಶಾಲೆಯಿಂದ ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ನಮ್ಮ ಶಾಲೆಯವತಿಯಿಂದ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಶಾಲೆಯು ಇದೇ ತಿಂಗಳ 24ರಿಂದ ತರಗತಿಗಳು ಆರಂಭವಾಗಲಿದ್ದು ತಮ್ಮ ಮಕ್ಕಳ ಪ್ರವೇಶ ಪಡೆಯಬಹುದಾಗಿದೆ  ಎಂದರು.   

ಈ ಸಂದರ್ಭದಲ್ಲಿ ಮಾಜಿ ವಕ್ಫ್‌ ಬೋರ್ಡ್‌ ಅಧ್ಯಕ್ಷರಾದ ಹುಮಾಯೂನ್ ಖಾನ್, ಬಸ್ಮಾ ಅಧ್ಯಕ್ಷಾರಾದ ಮರಿಸ್ವಾಮಿ ರೆಡ್ಡಿ, ರಾಜ್ಯ ವಕ್ಪ್‌ ಬೊರ್ಡ್‌ ನ ಮಾಜಿ ಅಧ್ಯಕ್ಷ ಭಂ ಭಂ ದಾದಾ, ಮುಖಂಡರಾದ ಯೂನೂಸ್ ಸಾಬ್, ಕಣೆಕಲ್ ಜೀಲಾನ್, ಕಣೇಕಲ್ ಅಬ್ದುಲ್, ಆದಿಲ್ ಷಾ, ಫೀರೋಜ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಪೋಷಕರಿದ್ದರು. 


ಸುದ್ದಿ ಓದಿ