ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ : ಹನೀಫ ಅಂಬೂರ
ಶಿಗ್ಗಾವಿ 12: ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮುಸ್ಲಿಂ ಸಮುದಾಯದ ನಾಯಕರು, ಸಚಿವ ಜಮ್ಮೀರ ಅಹ್ಮದ ಹಾಗೂ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರವರಿಗೆ ಶಿಗ್ಗಾವಿ ತಾಲೂಕಿನ ಕಾಂಗ್ರೆಸ್ ಮುಖಂಡ ಮತ್ತು ಅಂಜುಮನ ಸಂಸ್ಥೆಯ ಖಜಾಂಚಿ ಹಾಗೂ ಹಾವೇರಿ ಜಿಲ್ಲಾ ವಕ್ಪ ಬೋರ್ಡ್ ಸದಸ್ಯ ಮಹ್ಮದಹನೀಪ್ ಅಂಬೂರ ಅವರು ಶಿಗ್ಗಾವಿ-ಸವಣೂರ ವಿಧಾನಸಭಾ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರನ್ನು ಪರಿಗಣಿಸಬೇಕು ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ ಜಯಶಾಲಿಯಾಗಲು ಮುಸ್ಲಿಂ ಸಮುದಾಯದ ಪಾತ್ರ ಬಹಳಷ್ಟಿದೆ. ಆದ್ದರಿಂದ ಉಪ ಚುನಾವಣೆಗೆ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.