ರೋಣ

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ: ಸಚಿವ ಎಚ್‌.ಕೆ.ಪಾಟೀಲ

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ: ಸಚಿವ ಎಚ್‌.ಕೆ.ಪಾಟೀಲ

ರೋಣ 20: ಪಾಲಕರು ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ದೇಶದ ಆಸ್ತಿಯನ್ನಾಗಿ  ಮಾಡಬೇಕು. ಹಾಗೂ ವರ ವೀರಭದ್ರೇಶ್ವರ ದೇವಸ್ಥಾನಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರೆ ನಿವಾಸ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಡಾ. ಎಚ್‌.ಕೆ ಪಾಟೀಲ ಭರವಸೆ ನೀಡಿದರು.       

ತಾಲೂಕಿನ ಕುರುಡಗಿ ಗ್ರಾ.ಪಂ ಹಾಗೂ ಗ್ರಾಮದ  ನಾಗರಿಕರಿಂದ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಡಾ. ಎಚ್‌.ಕೆ ಪಾಟೀಲ ಸನ್ಮಾನ  ಸಮಾರಂಭದಲ್ಲಿ ಅವರು ಮಾತನಾಡಿದರು. 

ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ವೀರ​‍್ಪ ರಾಮಣ್ಣವರ,ಮಾಜಿ ಉಪಾಧ್ಯಕ್ಷ ಮಲ್ಲಯ್ಯ ವಸ್ತ್ರದ, 

ಸಂಗನಗೌಡ ಕುರುಡಗಿ, ಹುಚ್ಚುಸಾಬ ಗೋಗೇರಿ, ಶೌಕತ್ ಆಲಿ  ನದಾಫ್, ಶೇಖರಯ್ಯ ಗುರುಮಠ, ಶರಣಪ್ಪ ಬುದಪ್ಪ ಗವಾರಿ, ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವೀರೇಶ ಕಲಹಾಳ, ನಾಗೇಶ ಸವಡಿ, ಶರಣಪ್ಪ ಜಾಲಿಹಾಳ, ಬಿ.ಬಿ.ಅಸೂಟಿ, ವಿರೇಶ ಮಾದರ, ದೇವಪ್ಪ ಮಾದರ, ಯಲ್ಲಪ್ಪ ಮಾದರ, ಚಂದ್ರು ತಳವಾರ, ಪ್ರಭು ಗುರಿಕಾರ, ಪ್ರಕಾಶ ಗುರಿಕಾರ ಸೇರಿದಂತೆ ಗ್ರಾಮದ ಗುರು-ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ