ಕಾವೇರಿಗೆ ನೀಡುವ ಮಹತ್ವ ಕೃಷ್ಣಾ ನೀರಾವರಿ ಯೋಜನೆಗೆ ನೀಡಿ : ಯತ್ನಾಳ
ಬೆಳಗಾವಿ : ರಾಜ್ಯ ಸರಕಾರ ಕಾವೇರಿ ನೀರಾವರಿ ಯೋಜನೆಗೆ ನೀಡುವ ಮಹತ್ವವನ್ನು ಉತ್ತರ ಕರ್ನಾಟಕದ ಭಾಗದ ಕೃಷ್ಣಾ ನೀರಾವರಿ ಯೋಜನೆಗೆ ನೀಡಬೇಕು. ಕಾವೇರಿಕಿಂತಲೂ ಕೃಷ್ಣಾ ನೀರಾವರಿ ಯೋಜನೆ ದೊಡ್ಡದಾಗಿದ್ದರೂ ಇಲ್ಲಿ ಅದಕ್ಕೆ ಮಹತ್ವ ಇಲ್ಲ. ಕೃಷ್ಣಾ ಯೋಜನೆ ಕೇವಲ ರಾಜಕೀಯ ಗೀಮಿಕ್ಕ ಆಗದೆ, ಆಲಮಟ್ಟಿ ಎತ್ತರವನ್ನು ಹೆಚ್ಚಿಸುವ ಮೂಲಕ ಸಂಕಷ್ಟದಲ್ಲಿರುವ ಈ ಭಾಗದ ರೈತರ ನೆರವಿಗೆ ಸರಕಾರ ಮುಂದಾಗಬೇಕು ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಇಂದಿಲ್ಲಿ ಒತ್ತಾಯಿಸಿದರು.
ಬುಧವಾರ ವಿಧಾನ ಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಸುಧೀರ್ಘ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿ ಯತ್ನಾಳ ಅವರು, ಕೃಷ್ಣಾ ನೀರಾವರಿ ಯೋಜನೆಯಿಂದ ಎಷ್ಟು ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಎಷ್ಟು ಭೂಸ್ವಾಧಿ ಆಗಲಿದೆ. ಹೀಗೆ ಅಂಕಿ ಅಂಶಗಳ ಸಮೇತವಾಗಿ ವಿವರಣೆ ನೀಡಿದರು. ಉತ್ತರ ಕರ್ನಾಟಕ ಭಾಗದ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಬೆಳಗಾವಿಯಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಮೊದಲ ದಿನದಿಂದ ಈ ಭಾಗದ ಸಮಸ್ಯೆಗಳ ಕರಿತು ಚರ್ಚೆ ನಡೆಯನೇಕಿತ್ತು ಆದರೂ ಕೊನೆಯಲ್ಲಿಯೇ ಈ ಭಾಗದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.