ಶಿಗ್ಗಾವ್

ಉಪಚುನಾವಣೆ ಟಿಕೆಟ್ ಭರತ ಬೊಮ್ಮಾಯಿಗೆ ನೀಡಿ : ಮಾಳಗಿ

ಉಪಚುನಾವಣೆ ಟಿಕೆಟ್ ಭರತ ಬೊಮ್ಮಾಯಿಗೆ ನೀಡಿ : ಮಾಳಗಿ

ಶಿಗ್ಗಾವಿ 07: ವಿಧಾನಸಭಾ ಕ್ಷೇತ್ರದ 24ರ ಉಪ ಚುನಾವಣೆಯಲ್ಲಿ ಬೊಮ್ಮಾಯಿ ಸುಪುತ್ರ ಭರತಗೆ ಟಿಕೆಟ್ ಕೊಡಿ ಎಂದು ದಲಿತ ಮುಖಂಡ ಡಿ.ಎಸ್‌.ಮಾಳಗಿ ಒತ್ತಾಯಿಸಿದರು. 

ತಾಲೂಕಿನ ಕುಂದೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ ನೊಂದ ಬಿಜೆಪಿ ಹಿರಿಯರಿಗೆ ಯಾರಿಗಾದರೂ ಟಿಕೆಟ್ ಕೋಡಿ ನಾವಷ್ಟೆ ಅಲ್ಲದೆ ನಮ್ಮಂತಹ ಹಿರಿಯರಿಗೆ ಯಾರಿಗೆ ಟಿಕೆಟ್ ಕೊಟ್ಟರು ನಾವು ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಅಂತಾ ಹೇಳಿದರು. 

ಬಿಜೆಪಿ ಮುಖಂಡ ಗಂಗಾಧರ ಸಾತಣ್ಣವರ ಮಾತಾನಾಡಿ ಪಕ್ಷದಲ್ಲಿ ಒಬ್ಬರಿಗೆ ಒಂದೆ ಹುದ್ದೆ ಅಡಿಯಲ್ಲಿ ಟಿಕೆಟ್ ನೀಡಬೇಕು ಅಂತಾ ಹೇಳಿದರು.      ಸುಭಾಷ ಚವ್ಹಾಣ ಮಾತಾನಾಡಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕಾದರೆ ಇಲ್ಲಿ ಭರತ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರಲ್ಲಿ ನಾನು ರಾಜ್ಯ ಕಾರ್ಯದರ್ಶಿಯಾಗಿ ರಾಜ್ಯ ನಾಯಕರ ಗಮನಕ್ಕೆ ತರುತ್ತೇನೆ ಅಂತಾ ಹೇಳಿದರು 

ಕುಂದೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವನಗೌಡ ಪಾಟೀಲ ಹಾಗೂ ಉಪಾಧ್ಯಕ್ಷೆ ಕಸ್ತೂರೆವ್ವ ಕಬನೂರ ಸನ್ಮಾನ ಮಾಡಲಾಯಿತು 

ಮಹಾಲಿಂಗಪ್ಪ ಹಳವಳ್ಳಿ, ಶಿವಪ್ರಸಾದ ಸುರಗೀಮಠ, ರೇಣಕನಗೌಡ ಪಾಟೀಲ, ವಿಶ್ವನಾಥ ಹರವಿ, ಶಂಭಣ್ಣ ಕಡಕೋಳ, ಶೇಖಣ್ಣ ಮರೆಮ್ಮನವರ ಗುಡ್ಡನಗೌಡ ಗಿರಿಯಪ್ಪಗೌಡ್ರ, ಪ್ರವೀಣ ಹಾವಣಗಿ, ನೀಲಪ್ಪ ಹಾವಣಗಿ,ಮಾಳಪ್ಪ ಜಾಡರ, ಕಾಶಿನಾಥ ಕಳ್ಳಿಮನಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಪ್ರಮುಖರು ಹಿರಿಯರು ಪದಾಧಿಕಾರಿಗಳು ಯುವಕರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ