ಹುಕ್ಕೇರಿ

ರಾಜ್ಯ ಪೌರ ಸೇವಾ ನೌಕರರಗೆ ಭದ್ರತೆ ನೀಡಿ: ಭರಮನ್ನವರ

ರಾಜ್ಯ ಪೌರ ಸೇವಾ ನೌಕರರಗೆ ಭದ್ರತೆ ನೀಡಿ: ಭರಮನ್ನವರ

ಹುಕ್ಕೇರಿ 22:  ನಗರದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಜರುಗಿತು.ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ರವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆಯನ್ನು ಖಂಡಿಸಿ ಇಂದು ಹುಕ್ಕೇರಿ ಪುರಸಭೆ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಕೋರ್ಟ್ ಸರ್ಕಲ್ ದಿಂದ ಪ್ರತಿಭಟನಾ ರ್ಯಾಲಿ ಮುಕಾಂತರ   ಮಿನಿ ವಿಧಾನಸೌಧಕ್ಕೆ ತೆರಳಿದರು. 

ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ನಾಮನಿರ್ದೆಶಕ ಸದಸ್ಯ ಆರ್ ಎ ಭರಮನ್ನವರ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಧಿಕಾರಿಯಾದ ಅಭಯಕುಮಾರ ರವರ ಮೇಲೆ ಬುಧುವಾರ  ಚಿಂಚೋಳಿ ಪುರಸಭೆ ಸದಸ್ಯರಾದ ಆನಂದಕುಮಾರ ಟೈಗರ್ ಮತ್ತು ಶಶಿಕುಮಾರ ಮೇತ್ರಿ ಎಂಬುವವರು ನಕಲಿ ಬಿಲ್ಲ್ ಮಾಡುವಂತೆ ಒತ್ತಾಯಿಸಿದ್ದಾರೆ,  ಒಪ್ಪದ ಮುಖ್ಯಾಧಿಕಾರಿ ಗಳಿಗೆ  ಕಾರಣ ಹಲ್ಲೆಗೆ ಯತ್ನಿಸಿದ್ದಾರೆ. ಕೂಡಲೆ ಬಂಧಿಸಿ  ಶಿಕ್ಷೆ ವಿಧಿಸಬೇಕು ಮತ್ತು ಇಂತಹ ಕೃತ್ಯಗಳು ರಾಜ್ಯದ ಯಾವದೆ ಸ್ಥಳಿಯ ಸಂಸ್ಥೆಗಳ ಅಧಿಕಾರಿ, ನೌಕರರಿಗೆ ಆಗದಂತೆ ಭದ್ರತೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲಾಗುತ್ತಿದೆ ಎಂದರು. ನಂತರ ತಹಸಿಲ್ದಾರ ಅಶೋಕ ಗುರಾಣಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ಹುಕ್ಕೇರಿ ಘಟಕ ಅದ್ಯಕ್ಷ ಶಂಕರ ಕರನಿಂಗ, ಉಪಾದ್ಯಕ್ಷ ಎ ಜಿ ಮೋಕಾಶಿ, ಕಾರ್ಯದರ್ಶಿ ಎಮ್ ಬಿ ಗುಡಕೇತರ, ಬಸವರಾಜ ಥಿಲಾರಿ, ಬಿ ಎ ಪಾಟೀಲ್, ಎಸ್ ಎಸ್ ನಾಯಿಕ, ಡಿ ಬಿ ನವಲೆ, ಆರ ಎ ಭರಮನ್ನವರ, ಸಂತೋಷ ಹೋಳೆನ್ನವರ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ