ಚಿನ್ನ ಗೆದ್ದು ತವರಿಗೆ ಮರಳಿದ ಅನುಜ್ ಕುಮಾರ್ ಗೆ ಅದ್ಧೂರಿ ಸ್ವಾಗತ:
ಬೆಂಗಳೂರು, ನ 27 - ದಕ್ಷಿಣ ಕೊರಿಯಾದಲ್ಲಿ ಮುಕ್ತಾಯವಾಗಿದ್ದ 11ನೇ ವಿಶ್ವ ದೇಹದಾಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ತವರಿಗೆ ಮರಳಿದ ಭಾರತೀಯ ಸೇನೆಯ ಅನುಜ್ ಕುಮಾರ್ ತಲಿಯನ್ಗೆ ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು.
ಬೆಂಗಳೂರಿನ ಮಡ್ರಾಸ್ ಎಂಜಿನಿಯರ್ ಗ್ರೂಪ್ನಲ್ಲಿ ಹಿರಿಯ ಅಧಿಕಾರಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು. ದೇಹದಾಡ್ಯ ಸ್ಪರ್ಧೆಯ 100 ಕೆ.ಜಿ ಗೂ ಅಧಿಕ ತೂಕದ ವಿಭಾಗದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ನವೆಂಬರ್ 5 ರಿಂದ 11ರವರೆಗೆ ದಕ್ಷಿಣ ಕೊರಿಯಾದ ಜುಜು ಐಸ್ಲೆಂಡ್ ನಲ್ಲಿ ಟೂರ್ನಿ ನಡೆದಿತ್ತು.
ಭಾರತದ ದೇಹದಾಡ್ಯ ತಂಡ ಒಟ್ಟಾರೆ ಎರಡನೇ ಸ್ಥಾನ ಪಡೆಯಿತು. ಜತೆಗೆ, ಫಿಜಿಕ್ ಸ್ಪೋಟ್ರ್ಸ್ ಚಾಂಪಿಯನ್ಶಿಪ್ ತಂಡದ ವಿಭಾಗದಲ್ಲೂ ದ್ವಿತೀಯ ಸ್ಥಾನ ಪಡೆಯಿತು. ಚಿತ್ರೇಶ್ ನಟೇಸನ್ ಅವರು 2019ರ ಮಿಸ್ಟರ್ ಯೂನಿರ್ಸ್ ಗೆದ್ದು ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡರು.