ಮಹಲಿಂಗಪುರ

ಲಸಿಕೆಗಳ ಬಗ್ಗೆ ಅಪಪ್ರಚಾರ ಮಾಡದೇ ತಾವೂ ಲಸಿಕೆ ಪಡೆದು ಮತ್ತೊಬ್ಬರಿಗೂ ಪಡೆಯಲು ಪ್ರೇರೇಪಿಸಿ: ಅಂಗಡಿ

ಲಸಿಕೆಗಳ ಬಗ್ಗೆ ಅಪಪ್ರಚಾರ ಮಾಡದೇ ತಾವೂ ಲಸಿಕೆ ಪಡೆದು ಮತ್ತೊಬ್ಬರಿಗೂ ಪಡೆಯಲು ಪ್ರೇರೇಪಿಸಿ: ಅಂಗಡಿ
ಮಹಾಲಿಂಗಪುರ : ಸ್ಥಳೀಯ 13ನೇಯ ವಾರ್ಡಿನ ಪುರಸಭೆ ಸದಸ್ಯ ಶೇಖರ್ ಅಂಗಡಿ ಕೊರೋನಾ ವ್ಯಾಕ್ಸಿನೇಷನ್ ಗೆ ಚಾಲನೆ ನೀಡಿ ಮಾತನಾಡ

ಮಹಾಲಿಂಗಪುರ 29: ದೇಶದಲ್ಲಿ ಕೊರೊನಾ ರೋಗವನ್ನು ಬುಡ ಸಮೇತ ನಾಶ ಮಾಡುವ ಕೆಲಸ ಕೋವ್ಯಾಕ್ಸಿನ್ ಹಾಗೂ ಕೋವೀಶೀಲ್ದ್‌ ಲಸಿಕೆಗಳನ್ನು ಹಾಕುವ ಮೂಲಕ ನಡೆಯುತ್ತಿದೆ. ಕಾರಣ ದಯವಿಟ್ಟು ಇದರ ಬಗ್ಗೆ ಯಾರೂ ಅಪಪ್ರಚಾರ ಮಾಡದೇ ತಾವೂ ಲಸಿಕೆ ಪಡೆದು ಮತ್ತೊಬ್ಬರಿಗೂ ಪಡೆಯಲು ಪ್ರೇರೇಪಿಸಿ ಎಂದು ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶೇಖರ್ ಅಂಗಡಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.  

ಒಂದು ದಿವಸದ ಮಟ್ಟಿಗೆ ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಶನಿವಾರ ದಿವಸ ಪಟ್ಟಣದ 45ವರ್ಷ ಮೇಲ್ಪಟ್ಟವರಿಗೆ ಕೋವಿಡ್19 ಸ್ವಯಂ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.  

ಸಮುದಾಯ ಆರೋಗ್ಯ ಕೇಂದ್ರ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿದ್ದು, ಅಂಗವೈಕಲ್ಯಸ್ತರು, ವೃದ್ಧರು, ಅಶಕ್ತರುಗಳಿಗೆ ಲಸಿಕೆ ಪಡೆಯಲು ಪರದಾಡುವ ಸ್ಥಿತಿ ಇದೆ. ಆ ಕಾರಣದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಈ ಲಸಿಕಾ ಅಭಿಯಾನವನ್ನು ಏರಿ​‍್ಡಸಲಾಗಿದೆ.ಅಲ್ಲದೆ ಸ್ಥಳೀಯ ಸುಮಾರು 75 ಜನರು ಈ ಸಂದರ್ಭದಲ್ಲಿ ಕೊರೊನಾ ಲಸಿಕೆಯನ್ನು ಕೂಡ ಪಡೆಯಲು ಯಶಸ್ವಿಯಾಗಿದ್ದಾರೆ ಎಂದರು. 

ಆರೋಗ್ಯ ನೀರೀಕ್ಷಣಾಧಿಕಾರಿ ಎಂ.ಬಿ ಗೋಣಿ, ವ್ಯಾಕ್ಷಿನೇಟರ್ ಎಸ್‌ಎ ನ್ ಸಿರುಗುಪ್ಪಿ ಹಾಗೂ ಅಂಗನವಾಡಿ ಕಾರ್ಯಕರ್ತೆಯ ವೈ. ಜಿ ಮಲ್ಲೇನ್ನವರ್, ಜಿ ಎನ್ ಮುಂಡಗನೂರ, ಎಸ್ ಎಚ್ ಭಜಂತ್ರಿ ಸಹಾಯಕಿಯರಾದ, ರೇಣುಕಾ ಮೇತ್ರಿ, ಬಾಗವ್ವ ಲಾತೂರ ಸ್ಥಳೀಯರಾದ ನಾಗಲಿಂಗ ಬಡಿಗೇರ್, ಶಿವು ಹೂಗಾರ್, ಶಿವಾನಂದ ಕಂಪು, ಮಹಾಂತೇಶ ಅವಟಗಿ, ಮಲ್ಲು ದಡ್ಡೇನ್ನವರ್, ಗಂಗಪ್ಪ ದಿನ್ನಿಮನಿ, ಪ್ರಶಾಂತ್ ಅಂಗಡಿ, ಮುತ್ತಪ್ಪ ಕುಂದರಾಳ ಮುಂತಾದವರಿದ್ದರು. 

ಸುದ್ದಿ ಓದಿ