ಜಿಯೋ ಗಾಟ್ ಟ್ಯಾಲೆಂಟ್: ಗೆದ್ದರೆ ಎರಡು ಥೈಲ್ಯಾಂಡ್ ಪ್ರವಾಸದ ಟಿಕೆಟ್ ಉಚಿತ
ಮುಂಬೈ, ಜ.29 ಜಿಯೋ ಮತ್ತು ಸ್ನ್ಯಾಪ್ ಇಂಕ್. ಸ್ನ್ಯಾಪ್ ಚಾಟರ್‌ಗಳಿಗಾಗಿ ಜಿಯೋ ಗಾಟ್ ಟ್ಯಾಲೆಂಟ್ ಎಂಬ ಹೆಸರಿನ ಹೊಸ ರೀತಿಯ ಕ್ರಿಯೇಟಿವ್ ಚಾಲೆಂಜ್ ವೊಂದನ್ನು ಆರಂಭಿಸಿದ್ದಾರೆ.ಇಲ್ಲಿ ಸ್ನ್ಯಾಪ್‌ಚಾಟರ್‌ಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸೃಜನಶೀಲ, ವಿನೋದ ಮತ್ತು ಅಭಿವ್ಯಕ್ತಿಶೀಲ ರೀತಿಯಲ್ಲಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತಿದೆ.
ಜಿಯೋ ಮತ್ತು ಸ್ನ್ಯಾಪ್‌ಚಾಟ್ ಒಟ್ಟಿಗೆ ಸೇರಿ ಹೊಸ ಮಾದರಿಯ ಸ್ನ್ಯಾಪ್‌ಚಾಟ್ ಲೆನ್ಸ್ ಅನ್ನು ರಚಿಸಿದ್ದು, ಬಳಕೆದಾರರು ಮೈಕ್, ಟೋಪಿ, ಹೆಡ್‌ಫೋನ್ ಮತ್ತು ಲೈಟ್-ರಿಂಗ್‌ಗಳಂತಹ ವಿಭಿನ್ನ ಎಆರ್ ಪ್ರಾಪ್‌ಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲು, ಬಳಕೆದಾರರು ಸ್ನ್ಯಾಪ್‌ಚಾಟ್‌ನಲ್ಲಿ ಜಿಯೋ ಗಾಟ್ ಟ್ಯಾಲೆಂಟ್ ಲೆನ್ಸ್ ಬಳಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊವನ್ನು (ಗರಿಷ್ಠ 10-ಸೆಕೆಂಡ್) ರೆಕಾರ್ಡ್ ಮಾಡಬೇಕು.
ಅದರ ನಂತರ, ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಸ್ನ್ಯಾಪ್‌ಚಾಟ್ ಅಥವಾ ಸ್ನ್ಯಾಪ್‌ಕೋಡ್ ಬಳಕೆದಾರ ಹೆಸರನ್ನು ವೀಡಿಯೊ ಶೀರ್ಷಿಕೆಯಲ್ಲಿ ಸೇರಿಸಬೇಕು. ಅದನ್ನು ಸ್ನ್ಯಾಪ್‌ಚಾಟ್‌ನಲ್ಲಿ ಅವರ್ ಸ್ಟೋರಿಗೆ ಅಪ್‌ಲೋಡ್ ಮಾಡಬೇಕು, ಇದರಿಂದ ಅದನ್ನು ಸಾರ್ವಜನಿಕರಿಗೆ ನೋಡಬಹುದಾಗಿದೆ. ಅತ್ಯಂತ ಆಸಕ್ತಿದಾಯಕ ಮತ್ತು ಕ್ರಿಯೇಟಿವ್ ಕಟೆಂಟ್ ಮಾಡಿದವರು ಜಿಯೋದಿಂದ ಬಹುಮಾನಗಳನ್ನು ಪಡೆಯುತ್ತದೆ.ಸ್ಪರ್ಧೆಯ ಅವಧಿ: ಚಾಲೆಂಜ್ ಜನವರಿ 26, 2020 ರ ದಿಂದ ಫೆಬ್ರವರಿ 04 ರ ಮಂಗಳವಾರದವರೆಗೆ ನಡೆಯುತ್ತದೆ.ಬಹುಮಾನಗಳು: ಸ್ಪರ್ಧೆಯ ಒಬ್ಬ ವಿಜೇತರು ಥೈಲ್ಯಾಂಡ್ ಪ್ರವಾಸದ 2 ಟಿಕೆಟ್ ಅನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ..ಇತರ ಬಹುಮಾನಗಳಲ್ಲಿ ಜಿಯೋದಿಂದ ರೀಚಾರ್ಜ್‌ಗಳು ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 