ಮುದ್ದೆಬಿಹಾಲ್

ಜೀನಿಯಸ್ ಅವಾರ್ಡ್‌ ಪರೀಕ್ಷೆಯ ಬಹುಮಾನ ವಿತರಣೆ

ಜೀನಿಯಸ್ ಅವಾರ್ಡ್‌ ಪರೀಕ್ಷೆಯ ಬಹುಮಾನ ವಿತರಣೆ

ಮುದ್ದೇಬಿಹಾಳ 20: ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ್‌ ಪಾಟೀಲ್ಸ್‌ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಸಿಬಿಎಸ್‌ಇ  10ನೇ ತರಗತಿ ವಿದ್ಯಾರ್ಥಿಗಳ ಜೀನಿಯಸ್ ಅವಾರ್ಡ್‌ ಪರೀಕ್ಷೆಯ ಬಹುಮಾನ ವಿತರಣಾ ಸಮಾರಂಭ ನಡೆಯಿತು.  

ಜೀನಿಯಸ್ ಸ್ಟೂಡೆಂಟ್ ಅವಾರ್ಡ್‌ ಸ್ಪರ್ಧೆಯಲ್ಲಿ ಒಟ್ಟು 500 ಕ್ಕೂ ಹೆಚ್ಚು ಸಿಬಿಎಸ್‌ಇ  10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಮೊದಲ 10 ಸ್ಥಾನಗಳು ಅಲಂಕರಿಸಿದ 10 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 

ಪ್ರಥಮ ಸ್ಥಾನವನ್ನು ಜೆ.ಎನ್‌.ಬಿ ವಿಜಯಪುರ ಶಾಲೆಯ ವಿದ್ಯಾರ್ಥಿ ಪ್ರದೀಪ್ ಮುರಮನ್, ದ್ವೀತಿಯ ಸ್ಥಾನವನ್ನು ಆದಿತಿ ಸವನೂರು, ತೃತೀಯ ಸ್ಥಾನವನ್ನು ಜೆ.ಎನ್‌.ಬಿ ವಿಜಯಪುರ ಶಾಲೆಯ ಸುದರ್ಶನ ಕುಲಕರ್ಣಿ ಸ್ಥಾನ ಅಲಂಕರಿಸಿದರೆ, ಇನ್ನೂಳಿದ 7 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನಕ್ಕೆ ತೃಪ್ತಿಯಾದರು. 

ಪ್ರಥಮ ಸ್ಥಾನಕ್ಕೆ 50 ಸಾವಿರ ನಗದು ಬಹುಮಾನದ ಜತೆಗೆ 1.70 ಲಕ್ಷ ರೂ ಶಿಷ್ಯ ವೇತನ, ದ್ವೀತಿಯ ಸ್ಥಾನಕ್ಕೆ 25 ಸಾವಿರ ನಗದು ಬಹುಮಾನದ ಜತೆಗೆ 1.70 ಲಕ್ಷ ರೂ ಶಿಷ್ಯ ವೇತನ, ತೃತೀಯ ಸ್ಥಾನಕ್ಕೆ 15 ಸಾವಿರ ನಗದು ಜತೆಗೆ 1.70 ಲಕ್ಷ ರೂ ಶಿಷ್ಯ ವೇತನ, ಇನ್ನೂಳಿದ 7 ಸಮಾನಾಧಕರ ಬಹುಮಾನ ಪಡೆದ 7 ವಿದ್ಯಾರ್ಥಿಗಳಿಗೆ 1 ಸಾವಿರ ನಗದು ಜತೆಗೆ 70 ಸಾವಿರ ಶಿಷ್ಯ ವೇತನಕ್ಕೆ ಭಾಜನರಾದರು. 

ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ, ಆಕ್ಸ್‌ಫರ್ಡ್‌ ಪಾಟಿಲ್ಸ್‌ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಅಮಿತಗೌಡ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಸಿಬಿಎಸ್‌ಇ  10 ನೇ ತರಗತಿ 10 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದರಲ್ಲಿ 10 ಅ ಪ್ರತಿಶತ ವಿದ್ಯಾರ್ಥಿಗಳು ಬಂದು ಜೀನಿಯಸ್ ಅವಾರ್ಡ್‌ ಪರೀಕ್ಷೆಯಲ್ಲಿ ಬೆಳಗಾವಿ, ಚಿಕ್ಕೋಡಿ, ದಾವಣಗೆರೆ, ಕಲ್ಬುರ್ಗಿ ಹೀಗೆ ನಾನಾ ಜಿಲ್ಲೆಗಳಿಂದ ಬಂದು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದು ಸಂತಸ ತಂದಿದೆ. ಉತ್ತರ ಕರ್ನಾಟಕದಲ್ಲಿ ಧಾರವಾಡಕ್ಕೆ ವಿದ್ಯಾಕಾಶಿ ಂತ ಪಡೆದಿದೆ. ಅದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಾಗರಬೆಟ್ಟ ಅಂದ್ರೆ ವಿದ್ಯಾಕಾಶಿ ಎಂದು ಜನಮಾನಸದಲ್ಲಿ ಇರುವಾಗೆ ನಮ್ಮ ಶಿಕ್ಷಣ ಸಂಸ್ಥೆ ಮಾಡುತ್ತದೆ ಎಂದು ಆಶ್ವಾಸನೆ ನೀಡಿದರು. 

ಕಳೆದ ವರ್ಷ ನಮ್ಮ ಶಿಕ್ಷಣ ಸಂಸ್ಥೆಯಿಂದ 2021 ರಲ್ಲಿ 85, 2022 ರಲ್ಲಿ 146, 2023 ರಲ್ಲಿ 156 ವಿದ್ಯಾರ್ಥಿಗಳು ಮೆಡಿಕಲ್ ಗೆ ಆಯ್ಕೆಗೊಂಡಿದ್ದಾರೆ. ಇದರಿಂದ ಉತ್ತರ ಕರ್ನಾಟವೇ ನಮ್ಮ ಶಾಲೆಯತ್ತ ತಿರುಗುವಂತೆ ಇಲ್ಲಿನ ಶಿಕ್ಷಕರು ಮಾಡಿದ್ದಾರೆ. ಈ ವರ್ಷ ಕೂಡ ಈ ಶಿಕ್ಷಣ ಸಂಸ್ಥೆಯಿಂದ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಗೆ ಆಯ್ಕೆಯಾಗುವಂತಹ ಉತ್ಕರ್ಷ ಶಿಕ್ಷಣ ನೀಡುತ್ತೇವೆ ಎಂದರು. 

ಗುಳೇದಗುಡ್ಡದ ಮರಡಿಮಠ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಯು.ಬಿ ಧರಿಕಾರ, ಆಲೂರು ಸರ್ಕಾರಿ ಪ್ರೌಢಶಾಲಲೆಯ ಮುಖ್ಯ ಗುರುಗಳು ಬಸವರಾಜ ಶಾಂತಪ್ಪಣವರ, ಶಿಕ್ಷಕರಾದ ಟಿ.ಡಿ ಲಮಾಣಿ, ಸಣ್ಣೆಕಪ್ಪ ಉಂಡೇಕಾರ, ಕಾಶಿನಾಥ್ ಹೊಸಮಠ ಅವರು ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ